kaveri p u

Horror Fantasy Others

4.3  

kaveri p u

Horror Fantasy Others

ಶ್!!! ಓದಬೇಡಿ ಭಯ ಆಗತ್ತೆ!

ಶ್!!! ಓದಬೇಡಿ ಭಯ ಆಗತ್ತೆ!

3 mins
3K



ಮಲ್ಲಿಗೆಪುರ ಎಂಬ ಊರು, ಚಿಕ್ಕ ಹಳ್ಳಿ ಆದರೂ ದಿನಬಳಕೆ ವಸ್ತುಗಳು ವಿದ್ಯುತ್ ದೀಪಗಳು, ನೀರಿನ ವ್ಯವಸ್ಥೆ, ಶಾಲೆ ಇದ್ದು ಮೂಲಭೂತ ಸೌಲಭ್ಯಗಳು ಲಭ್ಯ ಇರುವ ಹಳ್ಳಿಯಾಗಿತ್ತು.


ಆ ಊರಿನಲ್ಲಿ ನಯನಾ, ವೀಣಾ, ಮಹಮ್ಮದ್ ಒಳ್ಳೆಯ ಸ್ನೇಹಿತರು, ಮೊದಲ ತರಗತಿಯಿಂದ ಅವರು ಎಲ್ಲರೂ ಸೇರಿಯೇ ಓದುತ್ತಿದ್ದರು. ಮುಂದಿನ ಓದಿಗಾಗಿ ಅವರು  ನಗರಕ್ಕೆ ಎರಡು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲಿ ಹೋಗಿ ಬರಬೇಕಿತ್ತು. ಓದುವುದರಲ್ಲಿ ಅವರು ಸದಾ ಮುಂದೆಯೂ ಇದ್ದರು.


ಮಹಮ್ಮದ್ ತಂದೆಗೆ ಅರ್ಧ ಎಕರೆ ಜಮೀನು ಅಷ್ಟೇ ಇದ್ದಿದ್ದರಿಂದ ಅವರು ಮಲ್ಲಿಗೆ ಹೂವಿನ ಕೃಷಿ ಮಾಡಿದ್ದರು. ಕಾಲೇಜು ಮುಗಿಸಿ ಬರುವಾಗ ಮಲ್ಲಿಗೆ ಹೂಗಳ ಬಳಿಯೂ ಮಹಮ್ಮದ್ ಹೋಗಿ ಸಮಯ ಕಳೆದು ಬರುತ್ತಿದ್ದ. ನಯನಾಗೆ ಮಲ್ಲಿಗೆ ಹೂವು ಅಂದ್ರೆ ತುಂಬ ಇಷ್ಟ. ದಿನವೂ ಸ್ವಲ್ಪ ಹೂ ತೆಗೆದುಕೊಂಡು ಹೋಗುತ್ತಿದ್ದಳು. ಸ್ನೇಹಿತೆಯಲ್ವ ಅಂತ ಮಹಮ್ಮದ್ ಕೂಡ ಸುಮ್ಮನಿರುತ್ತಿದ್ದ.


ಹೀಗೆಯೇ ಸುದೀರ್ಘ ಸಮಯ ಸಂತೋಷದಿಂದ ಕಳೆದರು.


ನಯನ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಅದು ವೀಣಾ, ಮಹಮ್ಮದ್ ಇಬ್ಬರಿಗೂ ಗೊತ್ತಾಯಿತು. ಅವನು ಸರಿ ಇಲ್ಲಾ, ಎಷ್ಟೋ ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ, ಅವನು ಸರಿ ಇಲ್ಲ ಅಂತ ಹೇಳಿದರೂ,  ಅವಳು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಮುಂದೆ ಇವರ ಸ್ನೇಹಕಿಂತ ಅವನ ಪ್ರೀತಿಯ ಒಲವು ಜಾಸ್ತಿ ಆಯಿತು ನಯನಾಳಿಗೆ.


ಇದನ್ನು ಗಮನಿಸಿದ ಮಹಮ್ಮದ್ ನಯನಾಳ ಅಪ್ಪನಿಗೆ ಮತ್ತು ಅಣ್ಣನಿಗೆ ಹೇಳಿದರು. ನಯನಾಳಿಗೆ ಅವಳ ಅಪ್ಪ, ಅಣ್ಣ ಓದುವುದನ್ನು ಬಿಡಿಸಿ ಮನೆಯಲ್ಲಿ ಇರುವಂತೆ ಹೇಳಿದರು. ಅವಳಿಗೆ ತನ್ನ ಪ್ರೇಮಿಯನ್ನು ಭೇಟಿಮಾಡಲು ಯಾವುದೇ ತರದ ಆಸ್ಪದ ಇರಲಿಲ್ಲ.


ನಯನಾಳಿಗೆ ತನ್ನ ಈ ಸ್ಥಿತಿಗೆ ವೀಣಾ, ಮಹಮ್ಮದ್ ಅವರೇ ಕಾರಣ ಎಂದು ಅವರನ್ನು ನೆನೆಸಿಕೊಂಡು ಹಲ್ಲು ಕಡಿಯುತ್ತಿದ್ದಳು.


ವಿಷಯವನ್ನು ನಯನಾಳ ತಂದೆಗೆ ಮಹಮ್ಮದ್ ಹೇಳಿದ್ದರೂ, ನಯನಾಳಿಗೆ ವೀಣಾಳ ಮೇಲೂ ಕೋಪವಿತ್ತು .


ನಯನಾಳ ಮನೆಯಲ್ಲಿ ಅವಳಿಗೆ ಗಂಡು ನೋಡುವುದಕ್ಕೆ ತಯಾರಿ ನಡೆಸಿದರು.

ನಯನಾ ಈ ವಿಷಯ ತಿಳಿದ ಕೂಡಲೇ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಳು. ಅವಳ ಜೊತೆ ಹೆಚ್ಚಾಗಿ ಇದ್ದ ಮಹಮ್ಮದ್, ವೀಣಾರಿಗೆ ಈ ವಿಷಯ ನಂಬಲು ಸಾಧ್ಯವಾಗದೆ, ಭಯಗೊಂಡರು.


ಮಾನಸಿಕವಾಗಿ ವೀಣಾ ಅಂತೂ ಕುಗ್ಗಿಬಿಟ್ಟಳು. ಅಷ್ಟರಲ್ಲೇ ಊರಲ್ಲೆಲ್ಲ ಸುದ್ದಿ ವಿಷ ಕುಡಿದು ಸತ್ತ ನಯನಾಳ ವಿಷಯ ದಿನೇ ದಿನೇ ಒಂದೊಂದು ಬಣ್ಣ ಪಡೆಯತೊಡಗಿತು. ಅವಳು ಆತ್ಮವಾಗಿದ್ದಾಳೆ ಎಂದೆಲ್ಲ ಸುದ್ದಿಯಾಯಿತು. ದೆವ್ವವಾಗಿ ಆ ಮಲ್ಲಿಗೆ ಹೊಲದಲ್ಲೇ ಇದ್ದಾಳೆ ಎಂದಾಗ ಮಹಮ್ಮದ್, ವೀಣಾ ಇನ್ನೂ ಹೆದರಿದರು.


ಊರಿನ ಸುತ್ತ ಮುತ್ತ ಎಲ್ಲೇ ಹೋದರೂ ನಯನಾಳ ಬಗ್ಗೆ ಅದೇ ಮಾತು ಕೇಳಿ ಕೇಳಿ ಒಂದು ದಿನ ಮಹಮ್ಮದ್ ತನ್ನ ಮಲ್ಲಿಗೆ ಹೊಲಕ್ಕೆ ಹೋದನು. ಅವನು ಪರೀಕ್ಷಿಸಲೆಂದೇ ಹೋಗಿದ್ದ. ಆದರೆ ಅವನಿಗೆ ಅಂತಹ ಅನುಭವ ಆಗಲಿಲ್ಲ.


ಎರಡು ದಿನ ಹೀಗೆ ಹೋಗಿ ಬಂದು ಮಾಡಿದ. ಮೂರನೇ ದಿನ ದಿನ ಅಮಾವಾಸ್ಯೆ ಇತ್ತು. ಸ್ವಲ್ಪ ಬೇಗನೇ ಕತ್ತಲು ಆವರಿಸಿತ್ತು. ಅಮಾವಾಸ್ಯೆ ಅರ್ಧರಾತ್ರಿಯಲ್ಲಿ ದೆವ್ವಗಳು ಜಾಗೃತಗೊಳ್ಳುತ್ತವೆ ಎಂದು ಮತ್ತೇ ನಯನಾಳ ಬಗ್ಗೆ ಊರಲ್ಲಿ ಮಾತು ಕೇಳಿಬಂದವು. ಮಹಮ್ಮದ್ ನಿರ್ಧರಿಸಿ ಬಿಟ್ಟ. ಇವತ್ತು ಮಲ್ಲಿಗೆ ಹೊಲಕ್ಕೆ ಹೋಗಿ ನೋಡಲೇಬೇಕೆಂದು ನಿರ್ಧರಿಸಿ, ಅಮಾವಾಸ್ಯೆಯ ರಾತ್ರಿ ತನ್ನ ಮಲ್ಲಿಗೆ ಹೊಲಕ್ಕೆ ಧಾವಿಸಿದ.


ಅಲ್ಲಿ ಗೆಜ್ಜೆಯ ಸದ್ದು, ಹರಿಯುವ ನೀರಿನ ಶಬ್ಧ, ಮಲ್ಲಿಗೆ ಹೂವಿನ ಸುವಾಸನೆ ಕೂಡ ಹೆಚ್ಚಾಗತೊಡಗಿತು. ಹಾಗೆಯೇ ಸುಂಟರ ಗಾಳಿ ಬೀಸುವುದರ ಜೊತೆಗೆ ಒಬ್ಬ ಮಹಿಳೆ ಕೂದಲನ್ನು ಜಡೆ ಕಟ್ಟಿ ಅದರ ತುಂಬೆಲ್ಲ ಮಲ್ಲಿಗೆ ಹೂವು ಮುಡಿದುಕೊಂದು ಕೋಪದಿಂದ ಮಹಮ್ಮದ ಬಳಿಗೆ ಬಂದೇ ಬಿಟ್ಟಳು. ತನ್ನ ಕಣ್ಣನ್ನೇ ನಂಬದಾದ ಮಹಮ್ಮದ್. ಹೌದು ಅದು ಅವಳೇ ! ನಯನಾ !

ಅವನ ಹತ್ತಿರಕ್ಕೆ ಬಂದು ಕಾಲರ್ ಪಟ್ಟಿ ಹಿಡಿದು ನಯನಾ ಹೇಳಿದಳು. " ನಿನ್ನ ಮತ್ತು ವೀಣಾಳ ಕುತಂತ್ರದಿಂದ ನಾನು ಇಂದು ಹೀಗೆ ಆತ್ಮವಾಗಿ ಅಲೆಯುತಿದ್ದೇನೆ. ಇದಕ್ಕೆಲ್ಲ ಕಾರಣವಾದ ನಿನ್ನ ಮತ್ತು ಅವಳನ್ನ ಬಿಡುವುದಿಲ್ಲ ನಾನು "

ಎಂದು ಗಟ್ಟಿಯಾಗಿ ಕಿರಚಾಡುತ್ತ ಅವನ ತಲೆಗೆ ಒಂದು ಕಲ್ಲು ಬಂಡೆ ಎತ್ತಿ ಹೊಡೆದೇ ಬಿಟ್ಟಳು. ಮಹಮ್ಮದ್ ರಕ್ತದ ಮಡುವಲ್ಲಿ ಬಿದ್ದರೂ ನಯನಾಳಿಗೆ ಹೇಳಲು ಯತ್ನಿಸಿದ.

"ನಯನಾ ಏನಾಗಿದೆ ನಿನಗೆ? ನೀನು ನನ್ನ ಸ್ನೇಹಿತೆ. ಆ ದರಿದ್ರವನು ನಿನ್ನ ಜೀವನ ಹಾಳು ಮಾಡುತ್ತಿದ್ದ ಎಂದು ನಿನಗೆ ಒಳ್ಳೆಯದನ್ನು ಬಯಸಿದ್ದೆ ತಪ್ಪಾಯಿತೇ? ನಿನ್ನ ಜೀವವನ್ನು ವಿನಾಕಾರಣ ಅಂತ್ಯ ಮಾಡಿಕೊಂಡು ಈಗ ನನ್ನನ್ನು ಸಾಯಿಸುತ್ತಿರುವೆ ಎನ್ನುತ್ತ ಮಹಮ್ಮದ್ ನಿತ್ರಾಣಗೊಂಡು ಉಸಿರು ಚೆಲ್ಲಿದ. ಅವಳ ಮೊದಲ ಬಲಿ ಮಹಮ್ಮದ್ ಆದನು.


ಮಹಮ್ಮದ್ ಹೊಲಕ್ಕೆ ಹೋದವನು ಇನ್ನೂ ಬರಲಿಲ್ಲವಲ್ಲ, ಕತ್ತಲು ತಿರುಗಿ ಬೆಳಗಾಯಿತು ಅಂತ ಮಹಮ್ಮದ್ ತಂದೆ  ಟೀ ಕುಡಿದು ಹೊಲದ ಕಡೆಗೆ ಹೊರಟನು. ಮಗ ಹೆಣವಾಗಿ ಬಿದ್ದಿರುವುದನ್ನು ನೋಡಿ ಅವನ ತಂದೆ ಅಲ್ಲಿಯೇ ಕುಸಿದು ಬಿದ್ದರು. ಸುತ್ತ ಮುತ್ತ ಇರುವವರನ್ನು ಕೂಗಿ ಬಿಕ್ಕಿ ಬಿಕ್ಕಿ ಅತ್ತರು. ನನಗೆ ಇದ್ದ ಒಬ್ಬ ಮಗ ಮಹಮ್ಮದ್. ಅವನೇ ಸತ್ತ ಮೇಲೆ ನನ್ನ ಜೀವ ಇದ್ದು ಏನು ಪ್ರಯೋಜನ ಅಂತ ಗೋಗರೆದು ಅಳಲಾರಂಭಿಸಿದರು. ಅವರಿಗೆ ಸಮಾಧಾನ ಮಾಡುತ್ತ ಜನರೆಲ್ಲರೂ ಸೇರಿ ಶವ ಸಂಸ್ಕಾರ ಮಾಡಲು ಹೋದರು.



ಊರಿನಲ್ಲಿ ಅವನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಜನರೆಲ್ಲ

ನಯನಾ ದೆವ್ವವಾಗಿ ಕಾಡುತ್ತಿದ್ದಾಳೆ ಎಂದು ಹೇಳತೊಡಗಿದರು. ಅವಳ ಆತ್ಮೀಯ ಸ್ನೇಹಿತನನ್ನೇ ಬಿಟ್ಟಿಲ್ಲ ಎಂದು ತಿಳಿದ ವೀಣಾಳ ತಂದೆ ತಮ್ಮ ಮಗಳ ಬಗ್ಗೆಯೂ ಗಾಬರಿಪಟ್ಟರು. ನಮ್ಮ ವೀಣಾಳ ಬಗ್ಗೆ ನಾವು ಯೋಚಿಸಲೇ ಬೇಕು, ಆ ಆತ್ಮ ವೀಣಾಳಿಗೂ ಕುತ್ತು ತರುವ ಮುನ್ನ ಇವಳನ್ನಾದರೂ ಕಾಪಾಡಬೇಕು ಅಂತ ಊರಿನವರು ಎಲ್ಲರೂ ಮಾತಾಡಿಕೊಂಡು, ಒಳ್ಳೆಯ ಮಂತ್ರವಾದಿ ಕರೆಯಿಸಿ ಊರಿಗೆಲ್ಲ ಬಿಗಿ ಬಂಧನ  ಹಾಕಿ ಅವರು ಹೇಳಿದಂತೆ ಮಾಡಿದರು. ಆತ್ಮ ಬಂಧಿಯಾಗಿದೆ ಎಂದು ತಿಳಿದು, ಮತ್ತೇ ಮೊದಲಿನ ಹಾಗೆ ಊರು ಸುಧಾರಿಸಿ ನೆಮ್ಮದಿ ಕಂಡಿತು.


ಎಲ್ಲವನ್ನೂ ಮರೆತು ವೀಣಾಳ ತಂದೆ ಮಗಳನ್ನು ಆದಷ್ಟು ಬೇಗ ಈ ಊರಿನಿಂದ ಆಚೆ ಕಳಿಸಬೇಕು ಎಂದು ಯೋಚಿಸಿ ಅವಳಿಗೆ ಮದುವೆ ಮಾಡುವುದೇ ಸೂಕ್ತವೆಂದು ನಿರ್ಧರಿಸಿದರು. ಅವಳಿಗೆ ಮದುವೆ ಗೊತ್ತು ಮಾಡಿದರು. ಬಹಳ ಸಡಗರ ಸಂಭ್ರಮ ವೀಣಾಳ ಮನೆಯಲ್ಲಿ ಮೂಡಿತ್ತು. ಮದುಮಗಳನ್ನು ಗಂಡನ ಮನೆಗೆ ಕಳಿಸಲು ಕಾರ್ ಮಾಡಿಕೊಂಡು ಹೊರಟರು.

ಕಾರು ಊರು ದಾಟಿ ಹತ್ತು ಕಿಲೋ ಮಿಟರ್ ದೂರ ಹೋಗಿ ಕೆಟ್ಟು ನಿಲ್ಲುತ್ತದೆ. ಎಷ್ಟೇ ಪ್ರಯತ್ನಿಸಿದರೂ ಕಾರ್ ಸ್ಟಾರ್ಟ್ ಆಗುವುದಿಲ್ಲ.  ಕಾರಿನಲ್ಲಿ ಕುಳಿತು ಬೇಸರವಾಗಿ ಕೆಳಗೆ ಇಳಿದು ಓಡಾಡತೊಡಗಿದಳು ವೀಣಾ. ಸ್ವಲ್ಪ ದೂರ ವೀಣಾ ಹೋಗುತ್ತಿದ್ದಂತೆ ಅವಳ ಹಿಂದೆ ಮಲ್ಲಿಗೆ ಹೂವಿನ ವಾಸನೆ ಗಾಢವಾಗಿ ಬರಲಾರಂಭಿಸಿತು. ಈ ವಾಸನೆ ಎಲ್ಲಿಂದ ಬಂತು ಅಂತ ಕಣ್ಣಾಡಿಸುತ್ತ ನೋಡುವದರೊಳಗೆ ಅವಳ ಕುತ್ತಿಗೆ ನಯನಾಳ ಕೈಯಲ್ಲಿತ್ತು. ವೀಣಾ ನಯನಾಳಿಗೆ ಎಷ್ಟೇ ಹೇಳಿದರೂ ನಯನಾ ಕೇಳಲಿಲ್ಲ. ಆ ಹುಡುಗ ಸರಿಯಿರಲಿಲ್ಲ, ಅವನಿಂದ ನಿನ್ನನ್ನು ಉಳಿಸಿದ್ದಕ್ಕಾಗಿ ನೀನು ನನಗೆ ಮತ್ತು ಮಹಮ್ಮದನಿಗೆ ಋಣಿಯಾಗಿರಬೇಕಿತ್ತು. ಆದರೆ ನೀನು ಕಾರಣವಿಲ್ಲದೆ ನಿನ್ನ ಜೀವವನ್ನು ಹತ್ಯೆ ಮಾಡಿಕೊಂಡು ಮಹಮ್ಮದನನ್ನು ಕೊಂದುಬಿಟ್ಟೆ ನಮ್ಮ ಗೆಳೆತನವನ್ನೆಲ್ಲ ಮರೆತೆ. ನಾನು ಈಗಷ್ಟೆ ಮದುವೆಯಾಗಿದ್ದೇನೆ. ನನ್ನನ್ನಾದರೂ ಬಿಟ್ಟು ಬಿಡು. ನಿನ್ನ ಸಾವಿಗೆ ನಿನ್ನ ದುಡುಕು ಬುದ್ಧಿ ಕಾರಣ, ನಾವಲ್ಲ. ಸಾಯಿಸುವುದಿದ್ದರೆ ನಿನ್ನನ್ನು ಬಂಧಿಸಿಟ್ಟ ನಿನ್ನ ಅಪ್ಪ, ಅಣ್ಣನನ್ನು ಸಾಯಿಸು. ಅವರೇ ತಾನೇ ನಿನ್ನನ್ನು ಬಂಧಿಸಿದ್ದು."


ಮಗಳ ಜೊತೆ ನಯನಾಳ ಆತ್ಮ ಕಂದ ವೀಣಾಳ ತಾಯಿ ಮಗಳತ್ತ ದೌಡಾಯಿಸಿದರು. "ಲೇ ನಯನಾ, ನನ್ನ ಮಗಳು ಯಾವ ತಪ್ಪು ಮಾಡಿದಳು ಅಂತ ಅವಳಿಗೆ ಹಿಂಸೆ ನಿಡುತ್ತಿರುವೆ? ಇನ್ನೂ ಬಾಳಿ ಬದುಕುವ ವಯಸ್ಸು ಅವಳದು, ನಿನಗೆ ನಾನು ವೀಣಾಳ ಜೊತೆ ಕೈತುತ್ತು ನೀಡಿದ್ದಕ್ಕೆ ನನಗೆ ಈ ಶಿಕ್ಷೆ ಕೊಡುತ್ತಿರುವೆ? ಎಂದು ಜೋರಾಗಿ ಅಳುತ್ತಿದ್ದರು.


ನಯನಾಳ ಮನಸ್ಸು ಕರಗಿತು. ತನು ಮಾಡುತ್ತಿರುವುದು ತಪ್ಪೆನಿಸಿದರೂ, ತನ್ನ ಆತ್ಮ ಪಿಶಾಚಿಯಂತೆ ಅಲೆಯುತ್ತಿರುವುದಕ್ಕೆ ನಯನಾಳಿಗೆ ಸಂಕಟವಾಗುತ್ತಿತ್ತು.


ಆಗ ನಯನಾ " ನಾನು ಪ್ರೀತಿಸಿದ ಹುಡುಗನೊಂದಿಗೆ ನಾನು ಹೇಗೋ ಜೀವನ ನಡೆಸುತ್ತಿದ್ದೆ. ಅದಕ್ಕೆ ಕಲ್ಲು ಹಾಕಿದ್ದೆ ಈ ವೀಣಾ, ಆ ಮಹಮ್ಮದ್. ಅದಕ್ಕೋಸ್ಕರ ನಾನು ಸತ್ತು ಆತ್ಮವಾಗಿದ್ದೇನೆ.

ನಾನು ಬರಬಾರದು ಅಂತಾ ದಿಗ್ಬಂಧನ ಊರವರು ಮಾಡಿಸಿದರು ಅಲ್ಲವೇ? ಆದರೆ ಈಗ ಏನಾಯಿತು? ಊರಿಂದ ಆಚೆ ಬರಲಿ ಎಂದು ಕಾಯುತ್ತಿದ್ದೆ.  ಈಗ ಇವಳನ್ನು ಕೊಂದರೆ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ" ಎಂದು ನಯನಾ ಹೇಳಿದಾಗ ಅದಕ್ಕೆ ವೀಣಾಳ ತಾಯಿ ಹೇಳಿದರು.

"ಒಬ್ಬರ ಜೀವ ತೆಗೆದರೆ ಇನ್ನೊಬ್ಬರ ಆತ್ಮಕ್ಕೆ ಶಾಂತಿ ಸಿಗುವಂತಿದ್ದಿದ್ದರೆ ಭೂಮಿ ಮೇಲೆ ಯಾರೂ ಉಳಿಯುತ್ತಿರಲಿಲ್ಲ ಮಗಳೇ. ವೀಣಾಳ ಹೊಟ್ಟೆಯಲ್ಲಿ ನೀನು ಹುಟ್ಟಿ ಬಂದು ಮತ್ತೊಮ್ಮೆ ಸಂತೋಷದಿಂದ ಬಾಳು. ಈಗ ಪದ್ಧತಿ ಪ್ರಕಾರ ನಿನ್ನ ಆತ್ಮಕ್ಕೆ ನಾವು ಶಾಂತಿ ಸಿಗುವಂತೆ ಮಾಡುತ್ತೇವೆ ಎಂದಾಗ ನಯನಾ ತನ್ನ ತಪ್ಪಿನ ಅರಿವಾಗಿ ವೀಣಾ ಮತ್ತು ಅವಳ ತಾಯಿಗೆ ಕ್ಷಮೆ ಕೋರಿ ಕಣ್ಮರೆಯಾದಳು.



Rate this content
Log in

Similar kannada story from Horror