Vijaya Bharathi

Abstract Children Stories Others

4  

Vijaya Bharathi

Abstract Children Stories Others

ಸಾಮ್ರಾಜ್ಯ

ಸಾಮ್ರಾಜ್ಯ

1 min
531


ನಾನ್ ಸ್ಟಾಪ್ ನವೆಂಬರ್ 3 ಬೆಗಿನೆರ್


ದಿನ 13


ವಿಷಯ :ಸಾಮ್ರಾಜ್ಯ


ಮಹಾರಾಜ ಅಶ್ವಪತಿ 


ಹಿಂದೆ ಮದ್ರದೇಶವನ್ನು ಅಶ್ವಪತಿ ಮಹಾರಾಜನು ಆಳುತ್ತಿದ್ದನು. ಅವನು ತನ್ನ ಸಾಮ್ರಾಜ್ಯವನ್ನು ಎಲ್ಲಾ ಕಡೆಯಲ್ಲೂ ವಿಸ್ತರಿಸಿ, ಸಾಮ್ರಾಟ್ ಎನಿಸಿಕೊಂಡಿದ್ದನು. ಅವನಿಗೆ ಬಹಳ ಕಾಲ ಮಕ್ಕಳಾಗದೆ, ಕಡೆಗೆ ಸಾವಿತ್ರಿ ಮಂತ್ರೋಪಾಸನೆಯಿಂದ ಒಂದು ಹೆಣ್ಣುಮಗು ಜನಿಸಿತು. ಅದಕ್ಕೆ "ಸಾವಿತ್ರಿ" ಎಂದು ನಾಮಕರಣ ಮಾಡಿದನು. 


ಸಾವಿತ್ರಿ ವಯಸ್ಕಳಾದಾಗ, ಮಹಾರಾಜ ಆಶ್ವಪತಿ ಅವಳಿಗೆ ಮದುವೆ ಮಾಡಲು ಒಬ್ಬ ಯೋಗ್ಯ ವರನನ್ನು ಹುಡಕಬೇಕಾಗಿತ್ತು. ಆ ಕೆಲಸವನ್ನು ಸಾವಿತ್ರಿಗೇ ವಹಿಸಿದಾಗ, ಅವಳು ತಂದೆಯ ಆಜ್ಞೆಯಂತೆ ಎಲ್ಲ ಸಾಮ್ರಾಜ್ಯಗಳಲ್ಲೂ ತಿರುಗಿ, ಯಾವ ರಾಜಕುಮಾರನೂ ಅವಳಿಗೆ ಇಷ್ಟವಾಗದಿದ್ದಾಗ, ಕಡೆಗೆ ಅರಣ್ಯದಲ್ಲಿ ತನ್ನ ವೃದ್ಧ ತಂದೆ ತಾಯಿಯರ ಸೇವೆಯನ್ನು ಮಾಡುತ್ತಿದ್ದ  ಸತ್ಯವಾನ್ ಎಂಬ ಯುವಕನನ್ನು ಕಂಡು ತಾನು ಅವನನ್ನು ಮೆಚ್ಚಿರುವುದಾಗಿ ತಿಳಿಸುತ್ತಾಳೆ, ಮಗಳ ಆಯ್ಕೆಯನ್ನು ಕಂಡು, ಅಶ್ವಪತಿ ಮಹಾರಾಜನಿಗೆ ತುಂಬಾ ಬೇಸರವಾಗುತ್ತದೆ. ತಾನೊಬ್ಬ ಒಂದು ಸಾಮ್ರಾಜ್ಯದ ಅಧಿಪತಿಯಾಗಿ ತನ್ನ ಮಗಳನ್ನು ಒಬ್ಬ ತಾಪಸನ ಮಗನಿಗೆ ಹೇಗೆ ಮದುವೆ ಮಾಡಿಕೊಡುವುದು? ಎಂದು ಯೋಚಿಸಿ,ಮಹಾರಾಜ ಆಶ್ವಪತಿ ಮಹರ್ಷಿ ನಾರದರನ್ನು ಸಲಹೆ ಕೇಳಿದಾಗ, ಸತ್ಯವಾನನು ಶಾಲ್ವದೇಶದ ರಾಜ ದುದುತ್ಸ್ಯುವಿನ ಮಗ, ದುರದೃಷ್ಟವಶಾತ್, ಶತೃಗಳ ಆಕ್ರಮಣದಿಂದ ದುದುತ್ಸು,ಅವನ ಹೆಂಡತಿ ಮತ್ತು ಸತ್ಯವಾನ್ ಅರಣ್ಯ ಸೇರುವಂತಾಯಿತು. ಅವನೂ ಸಹ ಯಾವುದರಲ್ಲೂ ಕಡಿಮೆಯಿಲ್ಲ, ಆದರೆ ಅವನು ಅಲ್ಪಾಯುಷಿ, ಇನ್ನು ಕೇವಲ ಒಂದು ವರ್ಷ ಮಾತ್ರ ಅವನು ಬದುಕಿರುತ್ತಾನೆ ಎಂಬ ನಾರದರ ಮಾತುಗಳನ್ನು ಕೇಳಿದ ಮಹಾರಾಜ,

ತನ್ನ ಮಗಳಿಗೆ ಬೇರೆ ವರನನ್ನು ನೋಡಿಕೊಳ್ಳುವಂತೆ ತಿಳಿಸಿದಾಗ, ಸಾವಿತ್ರಿಯು ತಾನು ಸತ್ಯವಾನನನ್ನು ಮನಸ್ಸಿನಲ್ಲೇ ವರಿಸಿಯಾಗಿದೆ ,ಅವನ ಜೊತೆಯಲ್ಲೇ ತನ್ನ ಮದುವೆ ಮಾಡಿಕೊಡಬೇಕೆಂದು ಪಟ್ಟು ಹಿಡಿಯುತ್ತಾಳೆ,. 


ಮಗಳ ಹಠಕ್ಕೆ ಮಣಿದು ಅಶ್ವಪತಿಯು ಮಗಳನ್ನು ಸತ್ಯವಾನನಿಗೆ ಕೊಟ್ಟು ವಿವಾಹ ಮಾಡುತ್ತಾನೆ. ನಂತರ ಮಗಳು ತನ್ನ ಪತಿಯೊಡನೆ ಅರಣ್ಯಕ್ಕೆ ಹೋಗಿ ಅವನೊಂದಿಗೆ ಸಂಸಾರ ನಡೆಸುತ್ತಾಳೆ. ಗಂಡನ ದೀರ್ಘಾಯುಸ್ಸಿಗಾಗಿ ಸಾವಿತ್ರಿ ಅನೇಕ ವ್ರತಗಳನ್ನು ಮಾಡಿದರೂ, ಅವಳಿಗೆ ಗಂಡನ ಸಾವನ್ನು ತಡೆಯಲಾಗಲಿಲ್ಲ. ಸತ್ಯವಾನ್ ಸತ್ತಮೇಲೆ, ಸಾವಿತ್ರಿ ಯಮನೊಡನೆ ಸಂಭಾಷಣೆ ನಡೆಸಿ, ಅವನನ್ನು ತನ್ನ ಮಾತ್ತುಗಳಿಂದಲೇ ಕಟ್ಟಿ ಹಾಕಿ, ತನ್ನ ಪತಿಯನ್ನು ಬದುಕಿಸಿಕೊಳ್ಳುತ್ತಾಳೆ.ಜೊತೆಗೆ ತನ್ನ ಮಾವ ದುದುತ್ಸ್ಯುವು ಕಳೆದುಕೊಂಡಿದ್ದ ಸಾಮ್ರಾಜ್ಯವನ್ನೂ ಸಹ ಮರಳಿ ಪಡೆಯಲು, ಯಮನನ್ನೇ ಪ್ರಾರ್ಥಿಸುತ್ತಾಳೆ. 


ಸಾವಿತ್ರಿಯಂತಹ ಮಹಾ ಸತಿಯ ಪೂಜಾಫಲದಿಂದ ಸತ್ಯವಾನ್ ಬದುಕುಳಿದು ,ತಮ್ಮ ಕಳೆದು ಹೋಗಿದ್ದ ರಾಜ್ಯವನ್ನೂ ಮತ್ತೆ ಪಡೆಯುತ್ತಾನೆ.


ಆಕರ (ಮಹಾಭಾರತ )





Rate this content
Log in

Similar kannada story from Abstract