ಪವಾಡ
ಪವಾಡ
ಇದೊಂದು ಸತ್ಯ ಘಟನೆ. ಎಲ್ಲ ರಾಜ್ಯಗಳಲ್ಲೂ ಸರ್ಕಾರದಿಂದಲೇ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ಕಾಲ .ಕೇರಳದ ಗುರುವಾಯೂ ರಿನಲ್ಲಿ ಆಗ ನಡೆದ ಘಟನೆ.ಒಬ್ಬ ಬಿಕ್ಷುಕ ಒಮ್ಮೆ
ಗುರುವಾಯೂರು ಕೃಷ್ಣನಲ್ಲಿ, ನನಗೇನಾದರೂ ಲಾಟರಿ ಯಲ್ಲಿ ಹಣ ಬಂದರೆ ಒಂದು ಕೊಡ ನೀರನ್ನ ಅಭಿಷೇಕಕ್ಕೆ ಕೊಡುತ್ತೇನೆ ಅಂದುಕೊಂಡ. .ಕಾರಣ ಆಗ ಐವತ್ತು ರೂಪಾಯಿ
ಕನಿಷ್ಟ ಬಹುಮಾನ. ಅಂದಿನ ಇವನ ಸ್ಥಿತಿಯಲ್ಲಿ ಹತ್ತು ರೂಪಾಯಿ ಕೊಟ್ಟು ಟಿಕೆಟ್ ತೆಗೆದು ಕೊಳ್ಳುವುದು ಸಹಾ ಕಷ್ಟವಿತ್ತು. ಬಸ್ ಹತ್ತುವಾಗ ಯಾರೋ ಒಂದು ಲಾಟರಿ ಟಿಕೆಟ್ ಕಳೆದುಕೊಂಡಿದ್ದಾರೆ ಅದು ಗಾಳಿಗೆ ಇವನು ಕುಳಿತಿದ್ದ ಜಾಗದಲ್ಲಿ ಬಂದು ಬಿದ್ದಿದೆ. ಯಾವುದೋ ಹಳೆಯ ಟಿಕೆಟ್ ಅಂತ ತಿಳಿದು.ಅ ವನು ಸುಮ್ಮನೆ ಜೇಬಿನಲ್ಲಿ ಇಟ್ಟುಕೊಂಡ. ಸಂಜೆ ಪಕ್ಕದ ಅಂಗಡಿಯವನಿಗೆ ತೋರಿಸಿದಾಗ
ಅದು ನಾಳೆಯ ಲಾಟರಿ .ಈ ಸಲ ಬಂಪರ್ ಬೇರೆ ಇದೆ .ಒಂದು ಕೋಟಿ ಅದಕ್ಕಾಗಿಯೆ ಟಿಕೆಟ್ ಬೆಲೆ ಈ ತಿಂಗಳು ಐವತ್ತು ರೂಪಾಯಿ ಅಂದ. ಅದನ್ನ ಹಿಂದಕ್ಕೆ ಪಡೆದು ಅಲ್ಲಿಂದ ಹೊರಟ .ಒಂದು ನೂರು ರೂಪಾಯಿ ಬಂದರು ಸಾಕು ಅಂತ ಇದ್ಧ ವನಿಗೆ ಅದೃಷ್ಟ ಲಕ್ಷ್ಮಿ ಒಲಿದು ಒಂದು ಕೋಟಿ ಗೆದ್ದ . .ಇವನು ಬುದ್ದಿವಂತ ಯಾರಲ್ಲೂ ಹೇಳದೆ ಬ್ಯಾಂಕ್ ಗೆ ಹೋಗಿ ಟಿಕೆಟ್ ಕೊಟ್ಟು ರಶೀದಿ ಪಡೆದ ಆಗೆಲ್ಲಾ ಬ್ಯಾಂಕ್ನಲ್ಲಿ ಟಿಕೆ
ಟ್ ಡೆಪಾಸಿಟ್ ಮಾಡಬೇಕಿತ್ತು . ಭಾರಿ ಮೊತ್ತವಾದರೆ ಅದು ಒರಿಜಿನಲ್ ಟಿಕೆಟ್ ಅಂತ ತಿಳಿದ ನಂತರವೇ ಹಣ ಕೊಡುವ ಪದ್ಧತಿ.
ರಾತ್ರೋ ರಾತ್ರಿ ಬಿಕ್ಷುಕನೊಬ್ಬ ಕೋಟಿ ರೂಪಾಯಿ ಗೆದ್ದಿರುವ ವಿಷಯ ಇಡೀ ರಾಜ್ಯದಲ್ಲಿ ಸಂಚಲನ ವಾಯ್ತು. ಮರೆಯದೆ ದೇವಸ್ಥಾನಕ್ಕೆ ಹೋದ ಕೋಟ್ಯಾಧಿಪತಿಯಾದ ಬಿಕ್ಷುಕನಿಗೆ ಒಳ್ಳೆಯ ಆಮಂತ್ರಣ. ಅಧಿಕಾರಿಗಳು ಕೇಳಿದರು ಏನು ಸೇವೆ ಮಾಡಿಸಬೇಕು . ಕೋಟಿ ಹಣ ಗಳಿಸಿ ಇವರ ಮುಂದೆ ಒಂದು ಬಿಂದಿಗೆ ನೀರು ಕೊಟ್ಟರೆ ಅವಮಾನ ವೆಂದುಕೊಂಡು ಕಲ್ಲುಸಕ್ಕರೆ ತುಲಾಭಾರ ಎಂದುಬಿಟ್ಟ. ಇವನ ತೂಕಕ್ಕೆ ಕಲ್ಲುಸಕ್ಕರೆ ಮೂಟೆಗಳನ್ನ ತರಿಸಿದರು ಎಷ್ಟು ಮೂಟೆ ಹಾಕಿದರು ತಕ್ಕಡಿ ಮೇಲೆ ಏಳುತ್ತಿಲ್ಲ.
ಅಧಿಕಾರಿ ಆಗ ಕೇಳಿದರು. ನೀವು ಬೇರೆ ಏನಾದರೂ ಮನಸ್ಸಿನಲ್ಲಿ ಕೊಡಬೇಕೆಂದು ಅಂದುಕೊಂಡಿದ್ದರೆ ಹೇಳಿ ಅಂದಾಗ ಹೇಳಿದ, ಹೌದು ನಾನು ಆಗ ಒಂದು ಕೊಡ ಅಭಿಷೇಕಕ್ಕೆ ನೀರು ಕೊಡುವುದಾಗಿ ಹೇಳಿದ್ದೆ. ತಕ್ಷಣ ಒಂದು ಕೊಡ ನೀರು ತರಿಸಿ ಮೇಲೆ ಇಟ್ಟು ಕಲ್ಲು ಸಕ್ಕರೆ ಮೂಟೆ ಗಳನ್ನೆಲ್ಲಾ ತೆಗೆದರು. ಅಂದು ಅಲ್ಲಿದ್ದ ಅಧಿಕಾರಿ ವರ್ಗ ಆ ಧೃಷ್ಯ ಕಂಡು ಚಕಿತರಾದರು. ಕಲಿಯುಗದಲ್ಲೂ ಪವಾಡ ನಡೆಯುತ್ತದೆ ಎಂದು ತಿಳಿದು ಆಡಳಿತ ವರ್ಗಕ್ಕೆ ಗುರುವಾಯೂರಪ್ಪನಲ್ಲಿ ನಂಬಿಕೆ ಇನ್ನೂ ಹೆಚ್ಚಾಯ್ತಂತೆ .