ಪರೋಪಕಾರ್ಥಮಿದಂ
ಪರೋಪಕಾರ್ಥಮಿದಂ
ಸಮುದ್ರದ ಒಳಗೆ ತನಗೆ ತಾನೇ ಸ್ವತಂತ್ರವಾಗಿ ಪಾದರಸದಂತೆ ಚುರುಕಾಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡಿಕೊಂಡಿರುವ ಮೀನುಗಳು,ಬೆಸ್ತನ ಬಲೆಗಳನ್ನು ,ತನ್ನ ನೀಳವಾದ ಹೊಳಪು ಕಣ್ಣು ಗಳಿಂದ ನೋಡಿ ಪ್ರಾಣ ಭೀತಿಯಿಂದ ದೂರ ದೂರಕ್ಕೆ ಓಡುತ್ತಾ ತಪ್ಪಿಸಿಕೊಳ್ಳಲು ಪ್ರಯತ್ನ ಪಡುತ್ತಿರುತ್ತವೆ. ಅತ್ಯಂತ ಚುರುಕು ಬುದ್ಧಿಯ ಮೀನುಗಳು ಎಷ್ಟೇ ಜಾಣತನ ತೋರಿದರೂ, ಕಡೆಗೆ ಕೆಲವು ಮೀನುಗಳು ಬೆಸ್ತನ ಬಲೆಗೆ ಸಿಕ್ಕಿ ಬಿಡುತ್ತವೆ. ನೀರಿನಿಂದ ಹೊರಬಂದ ಅವುಗಳು, ಉಸಿರುಗಟ್ಟಿ ಪ್ರಾಣ ಬಿಡುವವು. ಮೀನುಗಳಿಗೆ ನೀರಿಲ್ಲದೆ ಬದುಕಿಲ್ಲ ,ಆದರೆ ಮೀನುಗಾರರಿಗೆ ಮೀನುಗಳಿಲ್ಲದೆ ಬದುಕಿಲ್ಲ..
ನಂತರ ಮೀನಿನ ದೇಹಗಳು ಹಾಯಿದೋಣಿಯಲ್ಲಿ ಮಾರುಕಟ್ಟೆಗೆ ಸಾಗಿಸಲ್ಪಡುತ್ತವೆ. ಈ ರೀತಿ ಮೀನಿಗೆ ಪ್ರಾಣ ಸಂಕಟವಾದರೆ ಮೀನುಗಾರರಿಗೆ ಜೀವನೋಪಾಯ. ಒಂದು ಜೀವದ ಅಳಿವು ಮತ್ತೊಂದು ಜೀವದ ಬದುಕು. ಇದು ಭೂಮಿಯ ಜೀವ ಸಂಕುಲದ ಜೀವನ ವೃತ್ತಿ.
ಇನ್ನೊಬ್ಬರ ಬದುಕಿಗಾಗಿ ಮತ್ತೊಂದು ಜೀವದ ಪ್ರಾಣತ್ಯಾಗ. "ಪರೋಪಕಾರ್ಥಮಿದಂ ಶರೀರಂ"ಎಂಬಂತೆ ಮನುಷ್ಯನ ಆಹಾರಕ್ಕಾಗಿ ತನ್ನ ಪ್ರಾಣವನ್ನೇ ಕೊಡುವ ಮೀನು, ಮಾನವ ಕುಲಕ್ಕೆ ಮಾದರಿಯಾಗಿ ನಿಲ್ಲುತ್ತದೆ.
