Vijayalaxmi C Allolli

Abstract Action Classics

3  

Vijayalaxmi C Allolli

Abstract Action Classics

ಪೌರಾಣಿಕ

ಪೌರಾಣಿಕ

1 min
184


ಪೌರಾಣಿಕ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೌರಾಣಿಕ ಕಥೆಗಳು ಉತ್ತಮ ಸಂದೇಶವನ್ನು ನೀಡುತ್ತವೆ.ಅಲ್ಲಿ ಬರುವ ಪಾತ್ರಗಳು ಜೀವನ ಮೌಲ್ಯಗಳನ್ನು ಎತ್ತಿ ತೋರಿಸುತ್ತವೆ.ದಾನ ಮಾಡುವುದು,ಇನ್ನೊಬ್ಬರಿಗೆ ಒಳಿತನ್ನು ಬಯಸುವುದು, ದುಷ್ಕೃತ್ಯಗಳನ್ನು ಮಾಡಲು ಪ್ರಚೋದನೆ ನೀಡದಿರುವುದು,ಪರೋಪಕಾರತ್ವ, ನಿಷ್ಠೆ ಈ ಎಲ್ಲ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮೌಲ್ಯಯುತ ಬಾಳನ್ನು ಬಾಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಯಬೇಕಾಗಿದೆ.

ಯಾರಿಗೂ ತೊಂದರೆ ಕೊಡದೆ, ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ,ಇದ್ದವರಿಗೆ ಸಹಾಯ ಮಾಡುತ್ತಾ ಯಶಸ್ವಿ ಜೀವನ ನಡೆಸುವುದನ್ನು ಪೌರಾಣಿಕ ಕಥೆಗಳ ಮೂಲಕ ತಿಳಿಯ ಬಹುದಾಗಿದೆ.ವೈರತ್ವ ಕಟ್ಟಿ ಕೊಳ್ಳದೆ,ಶಾಂತಿ ಸಹಬಾಳ್ವೆಯ ಜೀವನ ನಡೆಸಿ ಪ್ರೀತಿ ,ವಾತ್ಸಲ್ಯ ಮತ್ತು ಮಮತೆಯ ಬಂದಗಳನ್ನು ಬೆಸೆದು ನಡೆಯುವುದನ್ನು ಪೌರಾಣಿಕ ಕಥೆಗಳ ಮೂಲಕ ತಿಳಿಯಬಹುದಾಗಿದೆ.

ದುಷ್ಟರಿಗೆ,ದುಷ್ಟತನಕ್ಕೆ ಅಂತ್ಯ ತುಂಬಾ ಕೆಟ್ಟದಾಗಿರುತ್ತದೆ.ಒಳ್ಳೆಯವರಿಗೆ, ಒಳ್ಳೆಯತನಕ್ಕೆ ವಿಜಯ ಯಾವಾಗಲೂ ಶುಭ ಪ್ರದವಾಗಿರುತ್ತದೆ ಎಂಬ ಸಂದೇಶವನ್ನು ಪೌರಾಣಿಕ ಕಥೆಗಳ ಮೂಲಕ ತಿಳಿಯಬಹುದಾಗಿದೆ.ಉತ್ತಮ ನಡೆ ನುಡಿ,ಆಚಾರ ವಿಚಾರಗಳನ್ನಿಟ್ಟು ಕೊಂಡು ಜೀವನ ನಡೆಸಬೇಕು.ಪರೋಪಕಾರಿ ಗುಣವನ್ನು,ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎನ್ನುವುದನ್ನು ಪೌರಾಣಿಕ ಕಥೆಗಳು ಸಾರಿ ಹೇಳುತ್ತವೆ.ಅವರವರ ಪಾಪ ಕರ್ಮಗಳಿಗೆ, ಪುಣ್ಯ ಕರ್ಮಗಳಿಗೆ ತಕ್ಕ ಫಲವನ್ನು ಅವರೆ ಅನುಭವಿಸುತ್ತಾರೆ ಎನ್ನುವುದು ಪುರಾಣಗಳಿಂದ ನಾವು ಕಲಿಯಬಹುದಾಗಿದೆ.



Rate this content
Log in

Similar kannada story from Abstract