ನಂಬಿಕೆಯ ಫಲ
ನಂಬಿಕೆಯ ಫಲ


ಕಷ್ಟದಿಂದ ಬಳಲಿದ್ದ ಮನುಷ್ಯನೊಬ್ಬ ತನ್ನ ಮನೆಗೆ ನಡೆದು ಹೋಗುತ್ತಿದ್ದಾಗ ರಸ್ತೆ ಬದಿ ಕುಳಿತ ವಯಸ್ಸಾದ ವ್ಯಕ್ತಿ ಅದೃಷ್ಟದ ಕಾಸೆಂದು ತೂತು ಇರುವ ಚೀನೀ ತಾಮ್ರದ ಹಳೆಯ ನಾಣ್ಯಗಳನ್ನ ಮಾರುತ್ತಿದ್ದ . ಅದು ಕಷ್ಟದಲ್ಲಿ ಮುಳುಗಿದ್ದವನ ಗಮನ ಸೆಳೆಯಿತು. ವಿಚಾರಿಸಲು ಅದನ್ನ ಜೇಬಿನಲ್ಲಿ ಇಟ್ಟುಕೊಂಡರೆ ಒಂದು ವಾರದಲ್ಲಿ ಆಧೃಷ್ಟದ ಬಾಗಿಲು ತೆರೆಯುತ್ತೆಂದು ಹೇಳಿದ. ಮೊದಲೇ ಕಷ್ಟದಲ್ಲಿದ್ದ ಈ ವ್ಯಕ್ತಿಗೆ ಅವಶ್ಯಕತೆ ಇದ್ದ ಕಾರಣ ಮೊದಲು ನಂಬಿಕೆ ಇಲ್ಲದಿದ್ದರೂ ಪ್ರಯತ್ನ ಮಾಡುವ ಸಲುವಾಗಿ ಹಣ ಕೊಟ್ಟು ತೆಗೆದುಕೊಂಡು ಮನೆಗೆ ಬಂದ. ಒಂದು ವಾರವಾದರೂ. ಒಂದೇ ಶರ್ಟು ಹಾಕಿಕೊಳ್ಳುತ್ತಿರುವುದನ್ನ ಗಮನಿಸಿದ ಅವನ ಹೆಂಡತಿ ಕಾರಣ ಕೇಳಿದರೂ ಹೇಳಲಿಲ್ಲ. ಆ ಕಾಸು ತಂದ ದಿನದಿಂದ ಇವನ ಕೆಲವು ಕಷ್ಟಗಳು ತಾನೇ ತಾನಾಗಿ ಪರಿಹಾರವಾಗಿತ್ತು . ಯಾರೋ ಕೊಡಬೇಕಾದ ಬಾಕಿ ಹಣ ತಂದುಕೊಟ್ಟರು. ಮನೆ ನಿರ್ಮಾಣಕ್ಕೆ ದೊರೆಯದು ಸಾಲ ದೊರೆಯುವ ಸೂಚನೆ ಸಿಕ್ಕಿತು. ಒಂದು ದಿನ ಗಂಡನಿಗೆ ತಿಳಿಸದೆ ಬಟ್ಟೆ ಒಗೆಯಲು ತೆಗೆದು ಕೊಂಡಾಗ ಅದರಲ್ಲಿ ಇದ್ದ ಕಾಸು ಕಂಡಳು.ಅದನ್ನ ಪಕ್ಕಕ್ಕೆ ಇಟ್ಟು ಒಗೆಯಲು ತೆಗೆದುಕೊಳ್ಳುವಾಗ ಆ ಕಾಸು ಉರುಳಿ ಹೋಗಿ ಮೋರಿಯಲ್ಲಿ ಬಿದ್ದು ಬಿಟ್ಟಿತು. ಹೆದರಿ ಒಗೆಯದೆ ಶರ್ಟ್ ನ್ನು ಇದ್ದ ಕಡೆ ಮತ್ತೆ ಇಟ್ಟು ಇವಳ ಬಳಿ ಇದ್ದ ಯಾವುದೋ ಹಳೆಯ ಒಂದು ಕಾಸನ್ನು ಮೊದಲು ಇದ್ದ ಹಾಗೆ ಪೇಪರಿನಲ್ಲಿಸುತ್ತಿ ಅದೇ ಜೇಬಿನಲ್ಲಿ ಇಟ್ಟಳು.
ಮತ್ತೊಂದು ವಾರ ಕಳೆಯಿತು. ಇನ್ನೂ ಕೆಲವು ಕಷ್ಟಗಳು ಇವನ ಕಠಿಣ ಪರಿಶ್ರಮದಿಂದ ಪರಿಹಾರವಾಯಿತು. ನಾಳೆ ಅಂತ ಮುಂದೂಡದೆ ಕೆಲಸಗಳಲ್ಲಿ ಅಂದೇ ಮಾಡುತ್ತಿದ್ದ. ಮನಸ್ಸಿಗೂ ನೆಮ್ಮದಿ ಇತ್ತು. ಒಂದು ದಿನ ಹೆಂಡತಿಯ ಬಳಿ ನಡೆದ ವಿಷಯವಲ್ಲ ಹೇಳಿದ . ಮರು ಮಾತಾಡದೆ ಅದು ಮೊದಲು ನಿಮ್ಮ ಬಲವಾದ ನಂಬಿಕೆ ನಂತರ ನಿಮ್ಮ ಪರಿಶ್ರಮದ ಫಲ.ಕಾಸಿನಿಂದ ಅಲ್ಲ ಏನೂ ಅಲ್ಲ ಎಂದಳು . ಮೊದಲೆಲ್ಲಾ ಇಂತಹದನ್ನೆಲ್ಲಾ ನಂಬದ ನಿಮಗೆ ನಂಬಿಕೆ ಹೇಗೆ ಬಂತು . ಪ್ರಯತ್ನ ಮಾಡಲು ತೆಗೆದು ಕೊಂಡಿರಬಹುದು .ಅದೇ ಸಮಯಕ್ಕೆ ಮೊದಲೆಲ್ಲಾ ತಲೆಮೇಲೆ ಕೈ ಹೊತ್ತು ಮನೆಯಲ್ಲೇ ಇರುತ್ತಿದ್ದ ನಿಮಗೆ ಪ್ರಯತ್ನ ಮಾಡುವ ಮನಸ್ಸು ಬಂತು. ನಂತರ ಒಂದೊಂದಾಗಿ ಒಳ್ಳೆಯದಾಗಿದೆ ಅಷ್ಟೇ ಅಂದಳು. ಆದರೆ ಕಾಸನ್ನು ಬದಲಾಯಿಸಿದ ವಿಷಯ ಮಾತ್ರ. ಹೇಳಲಿಲ್ಲ.