STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ನೀಲಿ ಸೀರೆಯ ಕನಸು###

ನೀಲಿ ಸೀರೆಯ ಕನಸು###

2 mins
248

ಅವನು ಮುಂಜಾನೆಯ ಚಳಿಗೆ ಅವಳನ್ನು ಬಾಚಿ ತಬ್ಬಿದ

ಅವಳಿನ್ನೂ ಕನಸಿನಲೋಕದಲ್ಲಿ ಮುಗುಳು ನಗುತ್ತಿದ್ದಳು

ಆ ನಗೆಗೊಂದು ಹೂಮುತ್ತನಿತ್ತ.

ಕನಸು ಹಾರಿ ಹೋಗಿ ಮುನಿಸಿನಿಂದ ಅವಳೆಂದಳು

ಅಯ್ಯೋ ಎಂತಾ ಒಳ್ಳೇ ಕನಸು ಹಾಳು ಮಾಡಿದಿರಲ್ಲಾ ಎಂದು. ನಾನಿಲ್ಲಿರುವಾಗ ಇನ್ನೆಂತಾ ಕನಸೇ ನಿಂದು ಎಂದ. ನೀವೇನೂ ನನ್ನ ಕನಸಲ್ಲಿರಲಿಲ್ಲ. ಅದು ಬೇರೇನೇ ಇತ್ತು. ಎಂದಳು. ನಾನಿಲ್ಲದ ಕನಸು ಯಾಕೆ ಚಿನ್ನಾ ಎಂದ. ಅದಕ್ಕವಳೆಂದಳು ನೀನಿಲ್ಲದ ಕನಸು ತುಂಬಾ ಸೊಗಸಾಗಿರುತ್ತೆ. ಪಿರಿಪಿರಿ ಇರೋಲ್ಲ. ತಲೆ ತಿನ್ನೋರಿರೋಲ್ಲ. ಅದು ಮಾಡು ಇದು ಮಾಡು ಕಾಫೀ ಕೊಡು ತಿಂಡಿ ಕೊಡು ಊಟ ಕೊಡು ಅಂತ ಯಾರೂ ಕೇಳೋರಿರಲ್ಲ. ಎಂದಳು. ಮತ್ತೇನಿರುತ್ತೆ ನಿನ್ನ ಕನಸಲ್ಲಿ.ಎಂದ. ಛೀ ಹೋಗಿ ಅದೆಲ್ಲಾ ಹೇಳೋಕಾಗಲ್ಲ. ನಾಚಿ ಹೇಳಿದಳು. ಛೀ ಕಳ್ಳಿ ನನ್ಹತ್ರಾನೇ ನಾಚಿಕೆನಾ ಎಂದ. ಹುಂ ಮತ್ತೇ ನಾ ನಿಜ ಹೇಳಿದ್ರೆ ನೀವು ಕೋಪ ಮಾಡ್ಕೋತೀರಾ ಅಂದಳು. ಇಲ್ಲ ಹೇಳು ಅಂದ. ಅದಕ್ಕವಳು ಮೊನ್ನೆ ನೀವು ತಂದಿದ್ ನೀಲೀ ಸೀರೆ ಕನಸಲ್ಲಿ ಉಟ್ಟಿದ್ದೆ. ಪಕ್ಕದ್ಮನೇ ಶ್ಯಾಮಣ್ಣ ನನ್ನ ಹೊಗಳಿದ್ದೇ ಹೊಗಳಿದ್ದು. ನಾ ಅಷ್ಟು ಚೆನ್ನಾಗಿದೀನಿಂತ ನೀವು ಒಂದಿನಾನೂ ಹೇಳೇ ಇಲ್ಲ. ನನಗಂತೂ ನಂಬೋಕೇ ಆಗ್ಲಿಲ್ಲ. ಕನ್ನಡೀಲಿ ತೋರಿಸಿದಾಗ ನಾನು ತುಂಬಾ ಚೆಲುವೆ ಅನಿಸ್ತು. ಶ್ಯಾಮಣ್ಣ ಸುಳ್ಳು ಹೇಳಿಲ್ಲ ಅಂತ ಗೊತ್ತಾಯಿತು. ಎಂದಳು. ಏನೇ ಅವನ್ಯಾಕೆ ನಿನ್ನ ಕನಸಲ್ಲಿ ಬಂದಾ ಎಂದನು. ಕೋಪ ಇತ್ತು ದನಿಯಲ್ಲಿ. ಕನಸೇನು ನಿಂದಾ ನನ್ನಿಷ್ಟ ಯಾರು ಬೇಕಾದರೂ ಬರಬಹುದು. ನಿನ್ನಪ್ಪಣೆ ಬೇಕಿಲ್ಲ ಅಂದಳು. ಇದ್ದಕಿದ್ದಂತೆ ಏಕವಚನ ಬಂದದ್ದು ಯಾಕೋ ಇರುಸುಮುರುಸಾಯಿತು ಇವನಿಗೆ. ಮಾತು ಎಲ್ಲಿಗೋ ಹೋಗುತ್ತಿದೆ ಅನಿಸಿ ಸುಮ್ಮನಾದ. ಮೌನ ಇಬ್ಬರಲ್ಲೂ. ಒಂದು ಕ್ಷಣ ಅಷ್ಟೇ. ಅವಳು ಕಿಸಕ್ಕನೆ ನಕ್ಕಳು. ಅವನು ಹೌಹಾರಿದ. ಏನಾಯಿತೇ ಎಂದ. ನಾನೆಸೆದ ಒಂದೇ ಬಾಂಬ್ಗೇ ನೀವು ಸುಸ್ತಾದಿರಿ ಎಂದಳು. ಏನದು ಬಿಡಿಸಿ ಹೇಳೆ ಎಂದ. ಕನಸು ನಮ್ಮ ಸ್ವಂತದ್ದು ಯಾರು ಬೇಕಾದರೂ ಬರಬಹುದು ಅಲ್ವಾ. ಯಾವಾಗಲೂ ನೀವೇ ಇರಬೇಕೆಂದು ಬಯಸುವುದು ತಪ್ಪಲ್ವಾ ಎಂದಳು. ಹಾಗೇ ನಾನೂ ಬಯಸಿದರೆ ನಿಮ್ಮಿಂದ ಸಾಧ್ಯಾನಾ ಎಂದಳು. ಈ ಕನಸುಗಳೆಲ್ಲಾ ನಿಜ ಆಗೋ ಹಾಗಿದ್ರೆ ಯಾವ ಗಂಡ ಹೆಂಡತಿಯೂ ನೆಮ್ಮದಿಯಾಗಿರೋಕೆ ಸಾಧ್ಯವಾಗ್ತಿರಲಿಲ್ಲ ಅಲ್ವಾ.ಎಂದಳು. ಅವನು ಹೂಂ ಅಂದ. ಕನಸಿಲ್ಲದ ಜೀವನ ಇಲ್ಲ. ಇರುವುದ ಬಿಟ್ಟು ಇರದುದರ ಎಡೆಗೆ ಕೈ ಚಾಚುವುದೇ ಕನಸಿನ ಲೋಕದಲ್ಲಿ ನಡೆಯೋದು.ಅವನಿಗರಿವಾಗಿತ್ತು. ತನ್ನ ಕನಸಲ್ಲೂ ಒಬ್ಬ ಚೆಲುವೆ ಇರುವುದ ನೆನೆದು ಮುಗುಳುನಕ್ಕ...


ಮುದ್ಮುಂಜಾನೆಯ ಶುಭಾಶಯಗಳು....


Rate this content
Log in

Similar kannada story from Romance