Vijaya Bharathi

Abstract Inspirational Children

2.6  

Vijaya Bharathi

Abstract Inspirational Children

ಮೃಗರಾಜ

ಮೃಗರಾಜ

2 mins
110


ಒಂದು ದಿನ ಬಂಡಿಪುರ್ ಅಭಯರಾಣ್ಯದಲ್ಲಿ ಎಲ್ಲಾ ಪ್ರಾಣಿಗಳು ಒಂದು ಕಡೆ ಸಭೆ ಸೇರಿ, ತಮ್ಮ ವನರಾಜ ಸಿಂಹದ ಅಧ್ಯಕ್ಷತೆಯಲ್ಲಿ ತಮ್ಮ ಅಹವಾಲನ್ನು ಇಡುತ್ತಾ,ತಮ್ಮ ರಕ್ಷಣೆಗಾಗಿ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಕೇಳಿಕೊಂಡವು.

ಮೊದಲಿಗೆ ಗಜರಾಜ ಎದ್ದು ನಿಂತು ತನ್ನ ಸಮಸ್ಯೆಯನ್ನು ಹೇಳಿಕೊಂಡಿತು.

"ಮಹಾರಾಜರೆ,ಇತ್ತೀಚೆಗೆ ನಮ್ಮ ಪ್ರದೇಶಕ್ಕೆ ಮನುಷ್ಯರು ಲಗ್ಗೆ ಇಡುತ್ತಾ, ನಮ್ಮ ಮನೆಯಲ್ಲಿ ನಾವೇ ಹೊರಗಿನವರಂತೆ ಇರಬೇಕಾಗಿದೆ, ಆನೆ ನಡೆದದ್ದೇ ಹಾದಿ ಅಂತ ನಾವು ನಮ್ಮ ಈ ಕಾಡಿನಲ್ಲಿ ಎಲ್ಲಂದರಲ್ಲಿ, ಸ್ವೇಚ್ಚೆಯಿಂದ ಅಲೆದಾಡುತ್ತಿದ್ದೆವು. ಆದರೆ ಇಂದು ಕಾಡುಗಳನ್ನು ಕಡಿಯುತ್ತಿರುವ ಮನುಷ್ಯರು, ಸಸ್ಯಾಹಾರಿಯಾದ ನಮ್ಮ ಆಹಾರವನ್ನು ಕಡಿಮೆ ಮಾಡುತ್ತಿದ್ಡಾರೆ. ಹೀಗೇ ಆದರೆ ಮುಂದೊಂದು ದಿನ ನಮ್ಮಸಂತಾನವೇ ಇಲ್ಲದಂತಾಗಬಹುದು. ಹೀಗಾಗಿ ನಮ್ಮ ಉಳಿವು ನಿಮ್ಮ ಕೈಯಲ್ಲಿದೆ. ನಮ್ಮ ಕಾಡಿಗೆ ಯಾರೂ ಒಳಗೆ ಬಂದು, ನಮ್ಮ ಆಹಾರವನ್ನು ಹಾಳುಗೆಡವದಂತೆ ನೋಡಿಕೊಳ್ಳಬೇಕು."ಆನೆ ತನ್ನ ಅಹವಾಲನ್ನು ರಾಜನ ಮುಂದೆ ಸಲ್ಲಿಸಿ ಕುಳಿತುಕೊಂಡಿತು.


ನಂತರ ಹುಲಿಯಣ್ಣ ಮುಂದೆ ಬಂದು,ತನ್ನ ಕಷ್ಟವನ್ನು ರಾಜನ ಮುಂದೆ ಹೇಳಿಕೊಂಡಿತು.

" ಮಹಾರಾಜರೆ, ನಮ್ಮ ಪಾಡೂ ಸಹ ಗಜರಾಜ

ನಿಗಾಗಿರುವಂತಹುದೇ. ಇತ್ತೀಚೆಗೆ ನಮ್ಮ ಸಂತತಿಯ ಮೇಲೆ ಮನುಷ್ಯರು ಬೇಟೆಯಾಡುವುದು ಹೆಚ್ಚಾಗಿ, ನಮ್ಮ ಸಂತತಿಯೇ ಅಳಿಯುವಂತೆ ಮಾಡಿದ್ದಾರೆ. ಇದರ ಬಗ್ಗೆ ನಮ್ಮ ಮಹಾರಾಜರು ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ,ನಮ್ಮ ಸಂತತಿಯು ದಿನೇ ದಿನೇ ಕ್ಷೀಣಿಸುತ್ತ ಹೋಗುತ್ತದೆ. ನಮ್ಮ ಅಳಿವು ಉಳಿವು ನಿಮ್ಮ ಕೈಯಲ್ಲಿದೆ"ಹುಲಿರಾಯ ಒಮ್ಮೆ ಘರ್ಜಿಸಿ ಕುಳಿತುಕೊಂಡಿತು.

ನಂತರ ಮುದ್ದುಜಿಂಕೆ ಎದ್ದುನಿಂತು ತನ್ನ ಅಳಲನ್ನು

ತೋಡಿಕೊಂಡಿತು.

"ಮೃಗರಾಜ,ನಮಗಂತೂ ಸದಾಕಾಲ ಬೇಟೆಗಾರರದೇ ಭಯ, ಕಾಡಿನೊಳಗೆ ನುಗ್ಗುವ ಬೇಟೆಗಾರರು,ನಮ್ಮ ಮೇಲೇ ಕಣ್ಣಿಡುವುದೇ ಹೆಚ್ಚು.ನಮ್ಮಚಂದದ ಚರ್ಮ,ನಮ್ಮ ಮಾಂಸ,ನಮ್ಮಕಣ್ಣುಗಳ ಮೇಲೇ ಮನುಷ್ಯರಿಗೆ ಕಣ್ಣು.ನಮ್ಮ ದೇಹದ ಅಂಗಗಳಿಗೆ ತುಂಬಾ ಬೆಲೆಯಂತೆ ಅವುಗಳನ್ನು ಮಾರಿಕೊಂಡು ದೊಡ್ಡ ಸಿರಿವಂತರಾಗುತ್ತಿದ್ದಾರಂತೆ. ಮುಂದೆ ನಮ್ಮ ಈ ಅರಣ್ಯಕ್ಕೆ ಮನುಷ್ಯರು ನುಗ್ಗದಂತೆ ಎಚ್ಚರ ವಹಿಸಿ ಮಹಾರಾಜ".

ನಂತರ ,ಕಾಡಿನ ಗೋವುಗಳು ಎದ್ದು ನಿಂತು

"ನಮ್ಮನ್ನು ನಮ್ಮ ಮಾಂಸಕ್ಕಾಗಿ ಕುಟುಕರ ಬಳಿ ಕದ್ದೊಯ್ಯುತ್ತಿದ್ದಾರೆ.ಪುಣ್ಯಕೋಟಿಯ ವಂಶದವರಾದ ನಮಗೆ ಎಂತಹ ಹೀನಾಯ ಸ್ಥಿತಿ ಮಹಾರಾಜ.ಎಲ್ಲರಿಗೂ ಅಮೃತಸದೃಶವಾಧ ಕ್ಷೀರ ವನ್ನು ಕೊಡುವ ನಮ್ಮನ್ನೇ ಮುಗಿಸುತ್ತಿರುವ ಈ ಮನುಷ್ಯರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಮಹಾರಾಜರೆ"

ಹೀಗೆ ಕಾಡಿನ ಎಲ್ಲಾ ಪ್ರಾಣಿ ಪಕ್ಷಿಗಳ ಅಳಲನ್ನು ಸಮಾಧಾನವಾಗಿ ಆಲಿಸಿದ ಮೃಗರಾಜ ಸಿಂಹ ಒಂದು ಬಾರಿ ತನ್ನ ಕೇಸರವನ್ನು ಒದರುತ್ತಾ, ಎಲ್ಲರನ್ನೂ ಗಂಭೀರವಾಗಿ ಅವಲೋಕಿಸಿತು.

ಒಮ್ಮೆ ಗಂಭೀರವಾಗಿ ಹೂಂಕರಿಸಿ, ಅತ್ತಿಂದಿತ್ತ ಇತ್ತಿಂದತ್ತ ನಿಧಾನವಾಗಿ ಹೆಜ್ಜೆ ಹಾಕಿತು ನಂತರ ತನ್ನ ರಾಜಗಾಂಭೀರ್ಯದಿಂದ ಎಲ್ಲರಿಗೂ ಆಶ್ವಾಸನೆ ನೀಡಿತು.

" ನನ್ನ ಪೀತಿಯ ಪ್ರಾಣಿ ಪಕ್ಷಿಗಳೆ, ನಿಮ್ಮ ದೂರುಗಳನ್ನು ಆಲಿಸಿದ ಮೇಲೆ ನಾವು ಎಷ್ಟು ಕಷ್ಟಪಡುತ್ತಿದ್ದೀವೆ ಎಂಬುದು ನನ್ನ ಗಮನಕ್ಕೆ ಬಂದಿದೆ.ಇದರ ಬಗ್ಗೆ ನಾನು ಒಂದು ಪ್ಲಾನ್ ಮಾಡಿದ್ದೇನೆ. ಈಗ ನೀವೆಲ್ಲಾ ಗಮನವಿಟ್ಟು ಕೇಳಿ"

ಮೃಗರಾಜನ ಸಭೆಯಲ್ಲಿ ಪುಟ್ಟ ಪಕ್ಷಿಗಳು ಕಿಚಿಪಿಚಿ ಕಿಚಿಪಿಚಿ ಎಂದು ಸದ್ದು ಮಾಾಡುತ್ತಾ ಇದ್್ದಾಗ ಒಮ್ಮೆ ಮೃೃಗರಾಜ ಅತ್ತ ತಿರುಗಿ ಹೂಂಂಕರಿಸಿದಾಗ ಗಪ್ಚಚಿಪ್್ಆಗಿ ಕುಳಿತವು. 

ಎಲ್ಲಾ ಪ್ರಾಣಿಗಳೂ ರಾಜನ ಪ್ಲಾನ್ ಏನಿರಬಹುದೆಂದು ಯೋಚಿಸುತ್ತಿದ್ದವು.

ಸ್ವಲ್ಪ ಸಮಯದ ಸಿಂಹಾವಲೋಕನದ ನಂತರ, ಕಾಡಿನ ಕೇಸರಿ ದೊಡ್ದ ಬಂಡೆಯ ಮೇಲೆ ನೆಗೆದು ಎಲ್ಲರಿಗೂ ಕಾಣುವಂತೆ ನಿಂತುಕೊಂಡು ತನ್ನ ಮುಂದಿನ ಯೋಜನೆಯನ್ನು ತಿಳಿಸಿತು.

"ಮಕ್ಕಳಿರಾ, ನಿಮ್ಮ ಕಷ್ಟಗಳು ನನ್ನ ಕಷ್ಟವೂ ಹೌದು.

ಇತ್ತೀಚೆಗೆ ದಟ್ಟವಾದ ನಮ್ಮ ವಾಸಸ್ಥಾನ ಅಭಯಾರಣ್ಯಗಳ ಮೇಲೆ ಮನುಷ್ಯನ ಧಾಳಿ ಅತಿಯಾಗಿ, ನಮ್ಮ ಕಾಡಿನಲ್ಲಿ ನಮಗೇ ಜಾಗವಿಲ್ಲವಾಗಿದೆ. ಈ ನಾಡಿನ ಜನರಿಗೆ ನಾವೆಲ್ಲರೂ ಸೇರಿ ಪಾಠ ಕಲಿಸಬೇಕು.

ಹೇಗೆ ನಾಡಿನ ಜನರು,ನಮ್ಮ ಕಾಡನ್ನೇ ಕಡಿದು ಬರಡು ಮಾಡಿ, ನಮ್ಮ ಜೀವನವನ್ನು ನಮ್ಮ ಸಂತತಿಯನ್ನು ನಾಶ ಮಾಡುತ್ತಿದ್ದಾರೋ, ಅದರಂತೆಯೇ ಇನ್ನು ಮುಂದೆ ನಾವೆಲ್ಲರೂ ಸೇರಿ ನಾಡಿಗೆ ಧಾಳಿ ಮಾಡಿ, ಸಿಕ್ಕ ಸಿಕ್ಕ ಮನುಷ್ಯರನ್ನು ತಿಂದು ಮುಗಿಸೋಣ. ಮತ್ತು ನಮ್ಮ ಕಾಡಿನೊಳಗೆ ಯಾರಾದರೂ ನುಗ್ಗಿದರೆ,ಅವರ ಮೇಲೆ ಆಕ್ರಮಣ ಮಾಡಿ ಬುದ್ಧಿ ಕಲಿಸೋಣ. ಮನುಷ್ಯರ ಅತಿ ಬುದ್ಧಿವಂತಿಕೆಗೆ ಸವಾಲಾಗಿ ನಾವೂ ಸಹ ಉಪಾಯಗಳನ್ನುಯೋಚಿಸಬೇಕಾಗಿದೆ.ಇದಕ್ಕೆನಮ್ಮ ನರಿಯಣ್ಣನ ಸಲಹೆ ಪಡೆಯೋಣ.ನಮ್ಮ ಗಜರಾಜನದೇಹಬಲದ ಮುಂದೆ ಮನುಷ್ಯನ ಯಾವ ಯಂತ್ರವೂ ಕೆಲಸ ಮಾಡದು. ಈಗ ನೀವೆಲ್ಲರೂ ನಿಶ್ಚಿಂತೆಯಿಂದ ನಿಮ್ಮ ನಿಮ್ಮ ಜಾಗಕ್ಕೆ ತೆರಳಿರಿ."

ತಮ್ಮ ರಾಜನ ಯೋಜನೆಗಳನ್ನು ಕೇಳಿದ ಮೇಲೆ ಎಲ್ಲಾಪ್ರಾಣಿಗಳು ಜೈಕಾರ ಹಾಕುತ್ತ, ಖುಶಿಯಿಂದ ಧೂಳೆಬ್ಬಿಸುತ್ತಾ,ಸಂಚಾರಕ್ಕೆ ಹೊರಟವು.


Rate this content
Log in

Similar kannada story from Abstract