STORYMIRROR

Vijaya Bharathi.A.S.

Abstract Romance Others

4  

Vijaya Bharathi.A.S.

Abstract Romance Others

ಮೊದಲ ಉಡುಗೊರೆ

ಮೊದಲ ಉಡುಗೊರೆ

1 min
5

ಮದುವೆಯಾದ ಮೊದಲ ವಾರ್ಷಿಕೋತ್ಸವ.ಅಂದು ಧನ್ಯ ತನ್ನ ಗಂಡ ಕೊಡಬಹುದಾದ ಮೊದಲ ಉಡುಗೊರೆಗಾಗಿ ರಾತ್ರಿ ಹನ್ನೆರಡು ಗಂಟೆ ಆಗುವುದನ್ನೇ ಕಾಯುತ್ತಾ ಇದ್ದಳು. ಬೆಳಿಗ್ಗೆಯಿಂದ ತನ್ನ ಗಂಡ ಯಾವ ಮಾತನ್ನೂ ಆಡದೆ ಗುಂ ಅಂತ ಇದ್ದದ್ದನ್ನು ನೋಡುತ್ತಾ ಇದ್ದ ಅವಳಿಗೆ, ಗಂಡನ ಬಗ್ಗೆ ಒಂದು ರೀತಿಯ ಬೇಸರವಾಗಿತ್ತು. ಬಾಯಿ ಮಾತಿಗೆ ವಿಶ್ ಮಾಡದಿದ್ದ ಅವನು, ತನ್ನ ಕೆಲಸದ ಒತ್ತಡದಿಂದಾಗಿ ಈ ದಿನವನ್ನು ಮರೆತಿರುತ್ತಾನೇನೋ?, ಅವನಿಗೆ ನಾನೇ ಸರ್ಪ್ರೈಸ್ ಕೊಡುತ್ತೇನೆ, ಆಗಲಾದರೂ ಅವನಿಗೆ ನೆನಪಾಗಬಹುದು, ಎಂದು ಕೊಳ್ಳುತ್ತಾ ಗಡಿಯಾರದ ಮುಳ್ಳನ್ನೇ ನೋಡುತ್ತಾ, ಗಂಡನ ಕಡೆಗೆ ಒಂದು ಸಲ ನೋಡುತ್ತಾ, ಒದ್ದಾಡುತ್ತಿದ್ದಳು. ಆದರೆ ಅವಳು ಗಂಡ

ಧವನ್ ಕೂಲ್ ಆಗಿ ನಿದ್ರೆ ಮಾಡುತ್ತಿದ್ದ.

ಗಡಿಯಾರ ಹನ್ನೆರಡು ಹೊಡೆದಾಗ, ಅವಳು ತಾನೇ ಮೊದಲು ಎದ್ದು ಅವನ ಕಿವಿಯಲ್ಲಿ "ಹ್ಯಾಪಿ ಆನಿವರ್ಸರಿ"ಎಂದು ಹೇಳುತ್ತಾ, ಅವಳು ಅವನಿಗಾಗಿ ತಂದಿದ್ದ ಗಿಫ್ಟ್ ಕೊಡಲು ಹೋದಾಗ, ಅವನು ತಕ್ಷಣ ತನ್ನ ದಿಂಬಿನ ಕೆಳಗೆ ಇಟ್ಟು ಕೊಂಡಿದ್ದ ಒಂದು ಪ್ಯಾಕೆಟ್ ಅನ್ನು ಅವಳಿಗೆ ಕೊಡುತ್ತಾ,"ಸೇಮ್ ಟು ಯು", ಎಂದಾಗ,ಧನ್ಯಾಳಿಗೆ ಆಶ್ಚರ್ಯ ವಾಯಿತು. 'ಅಂದರೆ ತನ್ನ ಗಂಡನಿಗೆ ನಮ್ಮ ಆನಿವರ್ಸರಿ ನೆನಪಿದೆ , ನನ್ನೆದುರು ಬೇಕಂತೆ ನಾಟಕವಾಡಿದ್ದಾರೆ.'

ಧವನ್ ಅವಳ ಗಿಫ್ಟ್ ಓಪನ್ ಮಾಡಿದಾಗ, ಅವನಿಗಾಗಿ ಒಂದು ಒಳ್ಳೆಯ ವಾಚ್ ಇರುವುದನ್ನು ನೋಡಿ ಸಂತೋಷ ಪಟ್ಟ.ನಂತರ ಅವನು ಅವಳಿಗೆ ಗಿಫ್ಟ್ ಪ್ಯಾಕ್ ಓಪನ್ ಮಾಡುವಂತೆ ಹೇಳಿದಾಗ, ಧನ್ಯ ಖುಷಿ ಯಿಂದ ಅದನ್ನು ಓಪನ್ ಮಾಡಿದಳು.

ಅವಳಿಗೆ ಆಶ್ಚರ್ಯವಾಯಿತು.ಧವನ್ ಅವಳಿಗಾಗಿ ಒಂದು ಮುತ್ತಿನ ಸೆಟ್ ತಂದು ಕೊಟ್ಟಿದ್ದ.

ಗಂಡನ ಮೊದಲ ಉಡುಗೊರೆ ಯನ್ನು ನೋಡಿ ಧನ್ಯಳ

ಮುಖ ಊರಗಲವಾಯಿತು. ಯಾವಾಗಲೂ ಸೀರಿಯಸ್ ಆಗಿ ಇರುತ್ತಿದ್ದ ಅವನು ಇಂತಹ ಅಮೂಲ್ಯವಾದ ಉಡುಗೊರೆ ತಂದಿರಬಹುದೆಂಬ ಕಲ್ಪನೆ ಅವಳಿಗಿರಲಿಲ್ಲ. ಗಂಡನ ಮೊದಲ ಈ ಅಮೂಲ್ಯ ಉಡುಗೊರೆ ಅವಳಿಗೆ ವಿಪರೀತ ಖುಷಿ ಕೊಟ್ಟಿತು.


Rate this content
Log in

Similar kannada story from Abstract