STORYMIRROR

Gireesh pm Giree

Abstract Children Stories Action

3  

Gireesh pm Giree

Abstract Children Stories Action

ಮನದಲ್ಲಿ ಅರಳಲು ಮರುಳು ಪ್ರೇಮ!*

ಮನದಲ್ಲಿ ಅರಳಲು ಮರುಳು ಪ್ರೇಮ!*

1 min
154


ನನ್ನದು ಹೇಳಿಕೇಳಿ ಯಾವಾಗಲೂ ರೈಲು ಪಯಣ. ಕಿಟಕಿಯ ಬಳಿ ಕೂತು ಪಯಣಿಸುವುದು ಎಂದರೆ ಅಚ್ಚುಮೆಚ್ಚು. ಒಮ್ಮೆ ಹಾಗೇ ಕೂತು ಮೊಬೈಲ್ ನೋಡುತ್ತಿದ್ದೆ. ನಿಲ್ದಾಣ ಬಂದಿತ್ತು, ಏದುಸಿರು ಬಿಡುವಂತೆ ಸದ್ದು ಮಾಡುತ್ತಾ ರೈಲು ನಿಂತಿತು. ಅದೇ ಸಮಯಕ್ಕೆ ಮತ್ತೊಂದು ರೈಲು ಪಕ್ಕದ ಪ್ಲಾಟ್ಫಾರ್ಮ್ಗೆ ಬಂದು ತಲುಪಿತು. ಸಹಜವಾಗಿಯೇ ಕಣ್ಣು ಆ ರೈಲಿನ ವಿಂಡೋ ಸೀಟಿನತ್ತ ಹೊರಳಿತ್ತು. 


ಮನದಲ್ಲಿ ಹೂ ಮಳೆ ಸುರಿದಂತೆ, ಬಾಯಾರಿದ ದೇಹಕ್ಕೆ ನೀರು ಸಿಕ್ಕಿದ ಅನುಭವ. ಹೊಸದೊಂದು ಅಧ್ಯಾಯ ಜೀವನದಲ್ಲಿ ಸಂಧಿಸಿದಂತಾಯ್ತು! ಅಲ್ಲಿದ್ದ ಆ ತರುಣಿಯ ಅಂದಕ್ಕೆ ಅರೆಕ್ಷಣದಲ್ಲೇ ಮನ ಸೋತುಬಿಟ್ಟಿತ್ತು. ನನ್ನನ್ನೇ ನಾನು ಮರೆತುಬಿಟ್ಟಿದ್ದೆ. ನೋಡುತ್ತಾ ನೋಡುತ್ತಾ ಅವಳಿದ್ದ ರೈಲು ಮುಂದೆ ಹೋಯಿತು. ʼಅಯ್ಯೋ ಇನ್ನೊಂದಷ್ಟು ಹೊತ್ತು ಇರಬಾರದಿತ್ತೇ…,ʼ ಎಂದು ಅನಿಸದೇ ಇರಲಿಲ್ಲ. 


ದಿನಗಳು ಕಳೆದರೂ, ಆ ಮುಖ ಇನ್ನೂ ಮನಸ್ಸಲ್ಲಿದೆ. ಏನೋ ಗೊಂದಲ.. ಇದು ಬರೀ ಆಕರ್ಷಣೆಯೋ ಅಥವಾ ಅದೇ ಪ್ರೀತಿಯೋ?!




Rate this content
Log in

Similar kannada story from Abstract