Vijaya Bharathi.A.S.

Abstract Others Children

4  

Vijaya Bharathi.A.S.

Abstract Others Children

ಮಹಾಶ್ವೇತೆ

ಮಹಾಶ್ವೇತೆ

1 min
247


ಅಂದು ನವರಾತ್ರಿಯು ಮೊದಲ ದಿನ. ಆ ಶಾಲೆಯ ಮಕ್ಕಳೆಲ್ಲಾ ಬಿಳಿಯ ಯೂನಿಫಾರಂ ಧರಿಸಿದ್ದರು.

ಅಂದು ಆ  ಸರ್ಕಾರಿ ಶಾಲೆಗೆ ಹೊಸದಾಗಿ ಒಬ್ಬ ಉಪಾಧ್ಯಾಯಿನಿ ಬರುವರೆಂಬ ಸುದ್ದಿ ಶಾಲೆಯಲ್ಲಿ ಹರಡಿತ್ತು. ಆ ಶಾಲೆಯಿಂದ ಈಗ ಒಂದು ತಿಂಗಳ ಹಿಂದೆ ಬೇರೆ ಊರಿಗೆ ವರ್ಗಾವಣೆ ಆಗಿ ಹೋಗಿದ್ದ ಕನ್ನಡ ಉಪಾಧ್ಯಾಯಿನಿ ಶಾಂಭವಿ ಟಿಚರ್ ಬದಲಾಗಿ ಬರುತ್ತಿದ್ದ ಆ ಹೊಸ ಟಿಚರ್ ನ ಹೆಸರು ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಮಕ್ಕಳೆಲ್ಲರಿಗೂ ಅಂದು ತಮ್ಮ ಶಾಲೆಗೆ ಬರುವ ಹೊಸ ಟಿಚರ್ ಬಗ್ಗೆ ಎಲ್ಲಿಲ್ಲದ ಕುತೂಹಲ. ಕಡೆಗೂ ಆ ಹೊಸ ಟಿಚರ್ ನ ನೋಡುವ ಸಮಯ ಬಂದೇ ಬಿಟ್ಟಿತು.

ಅಂದು ಸ್ಕೂಲ್ ಬೆಲ್ ಹೊಡೆದು ಎಲ್ಲರೂ ಪ್ರಾರ್ಥನೆ ಗೆ ಸೇರಿದಾಗ, ಸಭಾಂಗಣದಲ್ಲಿ ಹೊಸ ಟಿಚರ್ ನಿಂತಿರುವುದನ್ನು ಮಕ್ಕಳು ಗಮನಿಸಿದರು. ಆ ಹೊಸ ಟಿಚರ್ ಎಲ್ಲರಿಗಿಂತಲೂ ಭಿನ್ನವಾಗಿರುವುದನ್ನು ಗಮನಿಸಿದರು. 

ಶುಭ್ರ ಬಿಳಿಯ ಬಣ್ಣದ ಮಿರ ಮಿರನೆ ಮಿರುಗುವ ರೇಶ್ಮೆಯ ಸೀರೆ ,ಅದಕ್ಕೆ ಒಪ್ಪುವಂತಹ ಕುಪ್ಪಸ,ಬಿಳಿಯ ಬಿಂದಿ, ಬಿಳಿಯ ಬಳೆ ಮತ್ತು ಕಿವಿಗೆ ಮುತ್ತಿನ ಓಲೆ, ಎಲ್ಲವೂ ಬಿಳಿಯದೇ. ನೋಡುವುದಕ್ಕೂ ಬೆಳ್ಳಗಿದ್ದ ಚಿಕ್ಕ ವಯಸ್ಸಿನ ಆ ಟಿಚರ್ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ವಾದುದು. ಶಾಲೆಯ ಹೆಡ್ ಮಾಸ್ಟರ್ ಹೊಸ ಟಿಚರ್ ಅನ್ನು ಎಲ್ಲರಿಗೂ ಪರಿಚಯ ಮಾಡಿಸಿಕೊಡುತ್ತಾ,

",ಮಕ್ಕಳೇ ಇಂದು ನಮ್ಮ ಶಾಲೆಗೆ ನಿಮ್ಮ ಶಾಂಭವಿ ಟಿಚರ್ ನ ಬದಲಾಗಿ ಹೊಸ ದಾಗಿ ಬಂದಿರುವ ಈ ಟಿಚರ್ ನ ಹೆಸರು 'ಮಹಾಶ್ವೇತೆ'ಎಂದು ಹೇಳಿದಾಗ, ಎಲ್ಲಾ ಮಕ್ಕಳಿಗೂ ಆ ಪಿಚ್ಚರ್ ಅನ್ನು ಹತ್ತಿರ ಮಾತನಾಡಿಸಬೇಕೆಂಬ ಆಸೆ ಆಯಿತು. 

ಅಂದು ಪ್ರಾರ್ಥನೆ ಮುಗಿಸಿ ಎಲ್ಲರೂ ತಮ್ಮ ತಮ್ಮ ತರಗತಿಗಳಿಗೆ ಸಾಲಾಗಿ ಹೋಗುವಾಗ, ಮಹಾಶ್ವೇತೆ ಟಿಚರ್ ಅನ್ನು ದಾಟಿ ಹೋಗುತ್ತಿದ್ದರು. ಹಾಗೇ ಹೋಗು ಆಗ ಎಲ್ಲಾ ಮಕ್ಕಳೂ ಆ ಹೊಸ ಟಿಚರ್ ಗೆ "ನಮಸ್ಕಾರ ಮಿಸ್ ' ಅಂತ ಹೇಳಿ ಹೋಗುವಾಗ, ಆ ಹೊಸ ಟಿಚರ್ ನ ಚರ್ಮವೂ ಸಹ ತುಂಬಾ ಬಿಳಿಯಾಗಿರುವುದನ್ನು ಗಮನಿಸಿ, ಒಬ್ಬರ ಮುಖ ಒಬ್ಬರು ನೋಡುತ್ತಾ ಸಾಗಿದರು.

"ಆ ಮಹಾ ಶ್ವೇತಾ'ಟಿಚರ್ ಹೆಸರಿಗೆ ತಕ್ಕಂತೆ ತಮ್ಮ ಚರ್ಮಕ್ಕೆ ಹೊಂದುವ ಬಿಳಿಯ ಬಟ್ಟೆಗಳನ್ನೇ ಧರಿಸಿ 

ಮಹಾಶ್ವೇತೆ ಮೇ ಆಗಿದ್ದರು. ಮಕ್ಕಳ ಕುತೂಹಲ ಕರಗಿ ಭ್ರಮನಿರಸನವಾಗಿತ್ತು.



Rate this content
Log in

Similar kannada story from Abstract