Vijaya Bharathi

Abstract Classics Others

4  

Vijaya Bharathi

Abstract Classics Others

ಮಗಳು

ಮಗಳು

2 mins
273



ದಷ್ಟಪುಷ್ಟವಾಗಿ ದೃಷ್ಟಿ ತಾಗುವಂತೆ ಬೆಳೆಯುತ್ತಿದ್ದ ಮಗಳು ರಜನಿಯನ್ನು ನೋಡುವಾಗ, ತಾಯಿ ವತ್ಸಲಳಿಗೆ ಪ್ರೀತಿ ವಾತ್ಸಲ್ಯಗಳು ಉಕ್ಕಿ ಹರಿಯುವುದರ ಜೊತೆಗೆ ಒಳಗೊಳಗೇ ಆತಂಕವೂ ಶುರುವಾಗಿತ್ತು. ಹತ್ತರ ಪೋರಿ ರಜನಿ ಇತ್ತೀಚೆಗೆ ಎಲ್ಲಾ ವಿಷಯಗಳಿಗೂ ಜಗಳ ಮಾಡುತ್ತಾ, ಏನಾದರೂ ಸ್ವಲ್ಪ ಜೋರಾಗಿ ಗದರಿದರೂ ಹೋ ಎಂದು ಅಳುತ್ತಾ, ಎಲ್ಲದಕ್ಕೂ ಬೇಜಾರು ಎಂದು ಹೇಳಿ ಪಿರಿ ಪಿರಿ ಮಾಡುತ್ತಿದ್ದಾಗ ವತ್ಸಲಾ ಳಿಗೆ ತುಂಬಾ ನೋವಾಗುತ್ತಿತ್ತು. "ಈ ನನ್ನ ಮಗಳಿಗೇನಾಗಿದೆ? ಎಷ್ಟು ಚೆನ್ನಾಗಿ ಹೇಳಿದ ಹಾಗೆ ಕೇಳಿಕೊಂಡು ಎತ್ತಿದ್ದ ಕೈ ಕೂಸಿನಂತೆ ಸೌಮ್ಯ ಸ್ವಭಾವದ ಹುಡುಗಿ ಆಗಿದ್ದವಳು ಈಗ ಹೀಗೇಕೆ ಆಡುತ್ತಿದ್ದಾಳೆ?"

ವತ್ಸಲ ಯೋಚಿಸಿ ಯೋಚಿಸಿ ಸುಸ್ತಾಗಿ ಹೋದಳು.


ಒಂದು ದಿನ ವತ್ಸಲಳ ವೈದ್ಯೆ, ಗೆಳತಿ ಡಾ.ಮೀರಳ ಕ್ಲಿನಿಕ್ ಗೆ ಹೋಗಿ, ಗೆಳತಿಯನ್ನು ಮಾತನಾಡಿಸಿಕೊಂಡು ಹಾಗೇ ರಜನಿಯ ಪಿರಿಪಿರಿ ಯ ವಿಷಯವನ್ನೂ ತಿಳಿಸಿ, ಅದಕ್ಕೇ ನಾದರೂ ಮೆಡಿಸಿನ್ ಕೊಡುವಂತೆ ಕೇಳಿದಾಗ ,ಡಾ.ಮೀರ, ವತ್ಸಲಳಿಗೆ ಕಿವಿಮಾತುಗಳನ್ನು ಹೇಳಿದಳು.

"ಅಯ್ಯೋ ವತ್ಸಲಾ, ಇದಕ್ಕೆಲ್ಲ ಯಾವ ಔಷಧಿಗಳೂ ಬೇಕಾಗಿಲ್ಲ. ಇದು ನಿನ್ನ ಮಗಳ ಬದುಕು ಅರಳುವ ಸಮಯ. ಇಂತಹ ಸಮಯದಲ್ಲಿ ಪ್ರತಿ ಹೆಣ್ಣು ಮಕ್ಕಳಲ್ಲೂ ಈಸ್ಟ್ರೋಜನ್ ಹಾರ್ಮೋನ್ಗಳ ಏರುಪೇರು ಆಗುತ್ತಾ ಇರುತ್ತದೆ. ಇದರಿಂದ ಅವರಲ್ಲಿ ದೈಹಿಕ ಬದಲಾವಣೆಗಳಾಗುವುದರ ಜೊತೆಗೆ ಸ್ವಭಾವಗಳಲ್ಲಿಯೂ ಬದಲಾವಣೆಗಳು ಆಗುತ್ತಾ ಇರುತ್ತದೆ. ಇಂತಹ ಸಮಯದಲ್ಲಿ ಮನೆಯಲ್ಲಿ ತಾಯಂದಿರು ಹೆಚ್ಚು ಗಮನ ನೀಡಬೇಕು. ಅವರು ಎಷ್ಟೇ ಕಿರುಚಾಡಿ ಜಗಳ ಮಾಡಿ ಅತ್ತು ಪಿರಿಪಿರಿ ಗುಟ್ಟುತ್ತಿದ್ದರೂ ತಾಯಂದಿರು ತಾಳ್ಮೆ ಕಳೆದುಕೊಳ್ಳದೆ ಅವರನ್ನು ಸಂಭಾಳಿಸಬೇಕು"

ಡಾ.ಮೀರಳ ಮಾತು ಕೇಳಿ ವತ್ಸಲಳಿಗೆ ಆಶ್ಚರ್ಯ ವಾಯಿತು.


"ಏಯ್ ಮೀರ ನನ್ನ ಮಗಳಿಗೆ ಈಗ ತಾನೇ ಹತ್ತು ತುಂಬಿದೆ ಕಣೆ. ಇಷ್ಟು ಬೇಗ ಇದೆಲ್ಲಾ ಯೋಚನೆ ಮಾಡಬೇಕಾ?"

ವತ್ಸಲ ಆತಂಕದಿಂದ ಕೇಳಿದಳು.


"ಹೌದಮ್ಮ ಈ ಕಾಲದಲ್ಲಿ ನಾವು ನೀಡುವ ಆಹಾರ, ವಿಹಾರ, ಪರಿಸರ ,‌ ಸಾಮೂಹಿಕ ಮಾಧ್ಯಮ ಎಲ್ಲವೂ ಮಕ್ಕಳನ್ನು ಅತಿ ವೇಗವಾಗಿ ಪ್ರಬುದ್ಧರನ್ನಾಗಿಸುವುದಕ್ಕೆ ಪೋಷಕವಾಗಿದೆ. ಹೀಗಾಗಿ ಹಾರ್ಮೋನ್ಗಳ ಏರುಪೇರುಗಳು ಬಹಳ ಬೇಗ ಕೆಲಸ ಮಾಡಲು ಪ್ರಾರಂಭಿಸುತ್ತವೆ‌ ಹೀಗಾಗಿ ಹತ್ತು ವರ್ಷಗಳು ಕಳೆದು ಹೋದರೆ, ಹೆಣ್ಣು ಮಕ್ಕಳಲ್ಲಿ ಬದಲಾವಣೆ ಯಾವ ಸಮಯದಲ್ಲಾದರೂ ಆಗಬಹುದು. ಈಗ ನೀನು ನಿನ್ನ ಮಗಳ ಬದುಕು ಅರಳುವ ಸಮಯದಲ್ಲಿ ಮಗಳನ್ನು ‌ಸಮಾಧಾನದಿಂದ ನೋಡಿಕೊಳ್ಳುವುದು ತುಂಬಾ ಮುಖ್ಯವಷ್ಟೇ ಅಲ್ಲದೆ, ಅವಳಿಗೆ ದೇಹದಲ್ಲಾಗುವ ಬದಲಾವಣೆಯ ಬಗ್ಗೆಯೂ ಎಜುಕೇಟ್ ಮಾಡುತ್ತಾ ಹೋಗು. ಜೋಪಾನವಾಗಿ ನೋಡಿಕೊ."


"ಥ್ಯಾಂಕ್ಸ್ ಮೀರ. ತುಂಬಾ ಚೆನ್ನಾಗಿ ತಿಳಿಸಿದೆ. ನಾನು ಮಗಳ ಬಗ್ಗೆ ಎಚ್ಚರಿಕೆ ಯಿಂದ ಇರುತ್ತೇನೆ".

ಗೆಳತಿಯೊಂದಿಗೆ ಕನ್ಸಲ್ಟಿಂಗ್ ಆದ ನಂತರ ವತ್ಸಲಾಳಿಗೆ ರಜನಿಯ ಪಿರಿಪಿರಿಯ ಬಗ್ಗೆ ಉತ್ತರ ಸಿಕ್ಕಿತು.

ಮುಂದೆ ಅವಳು ತನ್ನ ಮಗಳನ್ನು ಎಚ್ಚರಿಕೆ ವಹಿಸಿ ನೋಡಿಕೊಳ್ಳುತ್ತಾ ಹೋದಳು.



Rate this content
Log in

Similar kannada story from Abstract