ಕೋಣಂಗಿ
ಕೋಣಂಗಿ


ಹೆಸರೇ ವಿಚಿತ್ರವಾಗಿದೆ ಅಲ್ಲವೇ. ಹೌದು ಇದು ಒಬ್ಬ ಖ್ಯಾತ ಕಾದಂಬರಿಕಾರನ ಕಾವ್ಯ ನಾಮ. ಹೆಸರು ಎಷ್ಟು ವಿಚಿತ್ರವೋ ಅಷ್ಟೇ ಇವನ ಸ್ವಭಾವ .ದಪ್ಪ ಫ್ರೇಮ್ ನ ಕನ್ನಡಕ, ಎಂದೂ ಇಸ್ತ್ರೀ ಕಾಣದ ಪ್ಯಾಂಟ್ ಮತ್ತು ಜುಬ್ಬಾ. ಆರು ತಿಂಗಳೋ ವರ್ಷ ವೋ ಆದಾಗ ಮನಸ್ಸು ಬಂದರೆ ಹೇರ್ ಕಟ್. ಉದ್ದನೆ ಶೋಳ್ಡರ್ ಬ್ಯಾಗ್.ಅದರಲ್ಲಿ ಕೆಲವು ಪುಸ್ತಕ. ಮತ್ತೊಂದು ವಿಶೇಷ ಅಂದರೆ ಎಂದೂ ಇವನ ಯಾವ ಜೇಬಿನಲ್ಲೂ ಹತ್ತು ಪೈಸೆ ಇರದು. ಎಲ್ಲಿಗೆ ಹೋಗ ಬೇಕಾದರೂ ಜೊತೆಯಲ್ಲಿ ಯಾರಾದರೂ ಇದ್ದೇ ಇರ್ತಾರೆ ಅವರೇ ಎಲ್ಲಾ ನೋಡಿ ಕೊಳ್ತಾರೆ. ಹಾಗಾಗಿ ಅದರ ಅವಶ್ಯಕತೆ ಇಲ್ಲ ಅಂತ ಇವನು ಹೇಳೋದು.ಸುಮಾರು ಐನೂರು ಕಾದಂಬರಿ ಬರೆದಿ ದ್ದರೂ ಒಂದು ಚೂರೂ ಬದಲಾಗದ ವ್ಯಕ್ತಿತ್ವ. ತಮಿಳು ನಾಡಿನ ಇಂದಿಗೂ ಹೆಸರಾಗಿರುವ ಎರಡು ವಾರ ಪತ್ರಿಕೆಗಳಲ್ಲಿ ಕಂತುಗಳಾಗಿ ಇವನು ಬರೆ ಯುತ್ತಿದ್ದ ಧಾರವಾಹಿಗಾಗಿ ಜನ ಮುಗಿಬಿದ್ದು ಹಿಂದಿನ ದಿನವೇ ಅಂಗಡಿಯವರಿಗೆ ಹಣ ಕೊಟ್ಟು ಮುಂಗಡ ಬುಕ್ ಮಾಡ್ತಿದ್ದರಂತೆ.
ಇವನೇ ಒಮ್ಮೆ ಒಂದು ಟಿ .ವಿ .ಸಂದರ್ಶನದಲ್ಲಿ ಹೇಳಿದ ಹಾಗೆ ಇವರದು ಬಡತನದ ಕುಟುಂಬ. ತಂದೆ ಒಂದು ಕುಗ್ರಾಮದ ಸರ್ಕಾರಿ ಪ್ರೈಮರಿ ಶಾಲೆಯ ಟೀಚರ್. ಇವನು ಒಬ್ಬನೇ ಮಗ ಮೂರು ಅಕ್ಕಂದಿರು ಇಬ್ಬರು ತಂಗಿಯರು .ತಂದೆ ಬಹಳ ಶಿಸ್ತು. ತಪ್ಪು ಮಾಡಿದರೆ ಎಲ್ಲಿ ಹೋದರೂ ಬಿಡದೇ ಅಡ್ಡಾಡಿಸಿಕೊಂಡು ಹೊಡೆಯೋದು.ಇದು ನಮ್ಮ ರಸ್ತೆಯಲ್ಲಿ ಇರೋ ಜನಕ್ಕೆಲ್ಲಾ ಗೊತ್ತು.ನಾನು ಸ್ವಲ್ಪ ದೊಡ್ಡವನಾದ ಮೇಲೆ ಇದನ್ನು ಸಹಿಸಲಾಗದೆ ಮತ್ತು ಅವಮಾನ ತಡೆಯಲಾರದೆ ಮನೆ ಬಿಟ್ಟೆ. ಇಪ್ಪತ್ತು ವರ್ಷಗಳ ಕಾಲ ಮನೆಗೆ ಹೋಗದ ಕಾರಣ ಅವರ ನ್ನ ಪೂರ್ತಿ ಮರೆತು ಬಿಟ್ಟು ಈಗ ನನ್ನದೇ ಬೇರೆ ಲೋಕ. ಊರೂರು ಅಲೆದೆ. ಬರಹ ಹೇಗೆ ನನಗೆ ಅಂಟಿಕೊಳ್ತೋ ಗೊತ್ತಿಲ್ಲ. ಯಾರೋ ಗುರ್ತಿಸಿ ಬರಿ ಅಂದಾಗ ನೈಜ ಘಟನೆಗಳನ್ನೇ ಬರೆದ. ಯಾರೋ ತೊಗೊಂಡು ಹೋಗ್ತಾ ಇದ್ರು. ಯಾರೋ ಪಬ್ಲಿಷ್ ಮಾಡ್ತಿದ್ರು. ನನಗೆ ಮಾತ್ರ ಕುಡಿಯಕ್ಕೆ.ಯಾವ ವಿದೇಶಿ ಬ್ರಾಂಡ್ ಬೇಕಿದ್ರೂ ತಂದು ಕೊಡ್ತಿದ್ರು. ನನಗೆ ಇನ್ನೇನೂ ಆಸೆ ಇರಲಿಲ್ಲ. ನನ್ನ ಸ್ನೇಹಿತ ಒಬ್ಬ ತಿರುವಣ್ಣಾಮಲೈ ನಲ್ಲಿ ಒಂದು ರೂಮ್ ಮಾಡಿ ಕೊಟ್ಟಿದ್ದ. ಆದರೆ ಅಲ್ಲಿಗೆ ಹೋಗಿ ವರ್ಷಗಳೇ ಆಯ್ತು.
ಆಗಿನ ಮುಖ್ಯ ಮಂತ್ರಿ ಅವರಿಗೆ ,ಕೋಣಂಗಿ ಬಹಳ ಕಷ್ಟದಲ್ಲಿ ಇದ್ದಾರೆಂದು ಯಾರೋ ತಿಳಿಸಿದರು. ಇವರ ಅನೇಕ ಕಥೆಗಳು ಚಲನ ಚಿತ್ರವಾಗಿ ಅದರ ನಾಯಕ ನಟ ಇವರೇ ಆಗಿದ್ದ ಕಾರಣ ಸಹಾಯ ಮಾಡಲು ಉತ್ಸುಕರಾಗಿ ದ್ದರು. ಆಗ
ಚೆನ್ನೈ ನ ಒಂದು ಚಿಕ್ಕ ಹೋಟಲ್ ರೂಮ್ ನಲ್ಲಿ ಇರುವ ವಿಷಯ ತಿಳಿದು ತಮ್ಮ ಆಪ್ತರು ಒಬ್ಬರನ್ನ ಕಳಿಸಿ ಬರ ಹೇಳಿದರು. ಆ ವ್ಯಕ್ತಿ ಬಂದಾಗ ಮಾತನಾಡಲೂ ಸಾಧ್ಯವಿಲ್ಲದಂತೆ ಕಂಠ ಪೂರ್ತಿ ಕುಡಿದಿದ್ದರು. ಮಾರನೆ ದಿನ ಮು. ಮಂತ್ರಿ ತಾವೇ ಸೆಕ್ರೆಟರಿ ಜೊತೆ ಬಂದು ಕಾರಿನ ಹತ್ತಿರ ಬರಲು ಹೇಳಿ ಕಳಿಸಿದರು.ಆದರೆ ಕೋಣಂಗಿ ಹೇಳಿ ದ್ದು ,ನನಗೆ ಅವರಿಂದ ಏನೂ ಕೆಲಸ ಆಗಬೇಕಿಲ್ಲ. ಅವರಿಗೆ ನನ್ನಿಂದ ಏನಾದರೂ ಕೆಲಸ ಇರಬಹುದು ಅದಕ್ಕೆ ಅವರೇ ಬರಲಿ ಅಂತ ಹೇಳಿದ್ದನ್ನು ಹಾಗೇ ಬಂದು ಹೇಳಿದಾಗ ಬೇಜಾರು ಮಾಡಿ ಕೊಳ್ಳದೆ ತಾವೇ ರೂಮಿಗೆ ಬಂದಾಗ ಸಾರ್ ನನ್ನಿಂದ ಏನಾ ದರೂ ಸಹಾಯ ಬೇಕೆ ಎಂದಾಗ ನಕ್ಕು , ನೀನು ಈ ರಾಜ್ಯದ ಆಸ್ತಿ .ನಿನ್ನ ನೋಡಿ ಕೊಳ್ಳೋದು ನಮ್ಮ ಕರ್ತವ್ಯ .ಇದರಲ್ಲಿ ಐದು ಲಕ್ಷ ಇದೆ. ಬ್ಯಾಂಕ್ ನಲ್ಲಿ ಹಾಕಿ ಬಡ್ಡಿ ಬರುವ ಹಾಗೆ ಮಾಡಿಕೊಂಡು ನೆಮ್ಮದಿ ಯಾಗಿ ಇರು ಅಂತ ಒಂದು ಬ್ರೀಫ್ ಕೇಸ್ ಕೊಟ್ಟರು.
ಅಲ್ಲಿಯವರೆಗೂ ಎಲ್ಲಾ ಕೇಳಿ ,ಸಾರ್ ನಿಮಗೆ ಧನ್ಯವಾದಗಳು. ಯಾರೋ ನಿಮಗೆ ನನ್ನ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ. ನಿಮ್ಮ ಹಣ ನನಗೆ ಬೇಡ.
ಅಂತಹ ಗತಿ ಬಂದಾಗ ನಾನೇ ನಿಮ್ಮ ಬಳಿ ಬರ್ತೀನಿ ಅಂದಾಗ ,ಇವನ ಸ್ವಾಭಿಮಾನಕ್ಕೆ ತಲೆ ಬಾಗಿಹೊರ ಟು ಹೋದರು.
ಇವರಿಗೆ ಅನೇಕ ರಾಜ್ಯ ಪ್ರಶಸ್ತಿ ಗಳು ದೊರೆತಿದೆ. ಅದರಲ್ಲಿ ತಾವೇ ಖುದ್ದು ಬಂದು ಕೈಲಿ ಸ್ವೀಕರಿಸಿರು ವುದು ಬೆರಳೆಣಿಕೆಯಷ್ಟು. ಮತ್ತೊಂದು ವಿಚಿತ್ರ ಸಂಗತಿ ಎಂದರೆ ಹಣ ಕೊಟ್ಟರೆ ತಮ್ಮ ಆಪ್ತರಿಗೆ ಯಾರಿಗಾದರೂ ಅಲ್ಲೇ ಕೊಟ್ಟು ಬಿಡೋದು ,ಶಾಲು ಅಥವ ಬೇರೆ ವಸ್ತುವಾದರೆ ಅಲ್ಲೇ ಬಿಟ್ಟುಬರೋದು.
ಸುಮಾರು ಅರವತೈದನೇ ವಯಸ್ಸಿನಲ್ಲಿ ಇವನ ಆಪ್ತರ ತೋಟದ ಮನೆಯಲ್ಲಿ ಒಂದು ವಾರ ಇದ್ದಾಗ ಕುಡಿಯಲು ಎಲ್ಲ ವ್ಯವಸ್ಥೆ ಮಾಡಿಕೊಟ್ಟ. ಒಂದು ರಾತ್ರಿ ಬಹಳ ಸೆಖೆ ಇದ್ದ ಕಾರಣ ಹೊರಗೆ ಮಲಗಿದ್ದ. ಬೆಳಗ್ಗೆ ಬಂದು ನೋಡಿದರೆ ಎಲ್ಲೂ ಕಾಣಲಿಲ್ಲ. ಅನುಮಾನ ಬಂದು ಬಾವಿಯಲ್ಲೂ ಮುಳುಗಿ ನೋಡಿದರೂ ಕಾಣಲಿಲ್ಲ. ಕುಡಿದ ಮತ್ತಿನಲ್ಲಿ ರಾತ್ರಿ ಯಾವಾಗಲೋ ಮುಖ್ಯ ರಸ್ತೆಗೆ ಬಂದಾಗ ವಾಹನ ಅಫಗಾತವಾಗಿ ಯಾರೋ ಆಸ್ಪತ್ರೆಗೆ ಸೇರಿಸಿ ಹೊರ ಟು ಹೋಗಿದ್ದಾರೆ. ಅಲ್ಲೇ ಕೊನೆ ಉಸಿರೆಳೆದರೂ ಆಸ್ಪತ್ರೆ ಸಿಬ್ಬಂದಿಗೆ ಈತ ಯಾರೆಂದೇ ತಿಳಿದಿರ ಲಿಲ್ಲ. ಆದರೆ ಮಧ್ಯಾನ್ಹದ ಹೊತ್ತಿಗೆ ಇಡೀ ರಾಜ್ಯವೇ ಕಣ್ಣೀರಲ್ಲಿ ಮುಳುಗಿತು.
ದಶಕಗಳೇ ಕಳೆದರೂ ಕೊಣಂಗಿ ಇಂದಿಗೂ ಓದುಗರ ಹ್ರುದಯ ಗೆದ್ದ ಆಕರ್ಷಕ ವ್ಯಕ್ತಿತ್ವದ ಬರಹಗಾರ ಎನ್ನುವುದು ಅಷ್ಟೇ ಸತ್ಯ.