murali nath

Classics Inspirational Others

4  

murali nath

Classics Inspirational Others

ಕಣ್ಣೀರ ಕಥೆ

ಕಣ್ಣೀರ ಕಥೆ

3 mins
77



(ಸತ್ಯ ಘಟನೆ)


ಸುಮಾರು ನಲವತ್ತು ವರ್ಷಗಳ ಹಿಂದೆ ಕೇರಳದ ಅನೇಕ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ದೇಶ ಮತ್ತು ಸಮಾಜ , ನಾಡು ನುಡಿ ಬಗ್ಗೆ ಮನ ಮುಟ್ಟುವಂತೆ ತಿಳಿಸಿ ಹೇಳಲು ,ಒಬ್ಬ ಖ್ಯಾತ ಬರಹಗಾರ ಹಾಗೂ ವಾಗ್ಮಿ "ಬಾಲಚಂದರ್ "ಅವರನ್ನ ಆಹ್ವಾನಿಸುವುದು ಆಗ  ಕಾಲೇಜುಗಳಿಗೆ ಒಂದು ಹೆಮ್ಮೆಯ ವಿಷಯವಾಗಿತ್ತು. ಇವರು ಅಂತಹ ಪ್ರಚಂಡ ಭಾಷಣಕಾರ. ಹಾಗೆಯೇ ಇವರ ಅನೇಕ ಪುಸ್ತಕಗಳು ರಾಜ್ಯದ ಜನಮನ ಗೆದ್ದಿದ್ದವು. ಇವರು ಆಗಿನ ಸರ್ಕಾರಗಳ ಅನೇಕ ಕಾರ್ಯಕ್ರಮಗಳನ್ನು ಒಪ್ಪುತ್ತಿರಲಿಲ್ಲ. ನೇರ ನುಡಿಯ ಇವರು ಅನೇಕ ಪತ್ರಿಕೆಗಳಲ್ಲಿ ಸರ್ಕಾರದ ವಿರುದ್ಧ ಲೇಖನಗಳನ್ನು ಬರೆಯುತ್ತಿದ್ದರು. ಹೀಗೇ ಬರೆದ ಒಂದು ಲೇಖನ ದಿಂದ ಇಡೀ ಕೇರಳದಲ್ಲಿ ಒಮ್ಮೆ ಬೆಂಕಿ ಹೊತ್ತಿಕೊಂಡಿತು.ಆಗ ವಿಧಿ ಇಲ್ಲದೆ ತಲೆ ಮರೆಸಿಕೊಳ್ಳಬೇಕಾಯ್ತು. ಒಬ್ಬ ಆಪ್ತ ಸ್ನೇಹಿತನ ಮನೆಯಲ್ಲಿ ಕೆಲಸಮಯವಿದ್ದು ಪಕ್ಕದ ತಮಿಳುನಾಡಿಗೆ ಒಂದು ರಾತ್ರೀ ಯಾವುದೋ ಲಾರಿ ಹಿಡಿದು ಬಂದು ಬಿಟ್ಟರು . ಜೇಬಲ್ಲಿ ಕಾಸಿಲ್ಲ ಹೊಸ ಜಾಗ.


ಹೊಟ್ಟೆ ಹಸಿವು ಏನು ಮಾಡಬೇಕೋ ತಿಳಿಯುತ್ತಿಲ್ಲ. ಬೆಳಗಾಯಿತು.ರಸ್ತೆ ಬದಿಯ ನಲ್ಲಿಯಲ್ಲಿ ಮುಖ ತೊಳೆದು ಅದೇ ನೀರನ್ನ ಹೊಟ್ಟೆ ತುಂಬಾ ಕುಡಿದರು.ಖಾಲಿ ಹೊಟ್ಟೆಯಲ್ಲಿ ಕುಡಿದಿದ್ದರಿಂದ ಎಲ್ಲ ವಾಂತಿ ಆಯ್ತು. ಲಾರಿಯಲ್ಲಿ ಪ್ರಯಾಣ ಮಾಡಿದ್ದು ಬಟ್ಟೆಯೆಲ್ಲಾ ಮಣ್ಣು ಗಲೀಜು. ನೋಡಿದರೆ ಯಾರೋ ಬಿಕ್ಷುಕ ಎಂದು ತಿಳಿಯುವ ಹಾಗಿದೆ. ಆಗ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಡಗರ..ಎಲ್ಲಿ ನೋಡಿದರೂ ಹೊಸ ಬಟ್ಟೆ ತೊಟ್ಟು ಎಲ್ಲೆಡೆ ಪೊಂಗಲ್ ಮೂರು ದಿನ ಭರ್ಜರಿಯಾಗಿ ಆಚರಿಸುತ್ತಿದ್ದಾರೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಒಂದು ಬೋರ್ಡ್ ಇವರ ಕಣ್ಣಿಗೆ ಬಿತ್ತು. ಅದೊಂದು blood bank . ರಕ್ತ ಕೊಟ್ಟರೆ ನಲವತ್ತು ರೂಪಾಯಿ ಕೊಡುತ್ತಾರೆ ಎಂದು ಇವರ ಮುಂದೆ ನಿಂತಿದ್ದವನು ಹೇಳಿದ. ಇವರೂ ರಕ್ತ ಕೊಟ್ಟು ಹೊರಬಂದರು. ರಕ್ತ ಕೊಟ್ಟವನ ಹತ್ತಿರ ಇಲ್ಲಿ ಒಳ್ಳೆಯ ಹೋಟೆಲ್ ಎಲ್ಲಿದೆ ಎಂದು ವಿಚಾರಿಸುವಾಗ ನಾನೂ ಬರ್ತೀನಿ tea ಕುಡಿಯಬೇಕು. ಒಟ್ಟಿಗೆ ಹೋಗೋಣ ಎಂದ. ಅದಕ್ಕೆ ಮೊದಲು ನಾನು ಮೆಡಿಕಲ್ ಸ್ಟೋರ್ ಗೆ ಹೋಗಿ ಔಷದಿ ಖರೀದಿ ಮಾಡಬೇಕು ನನ್ನ ಒಬ್ಬಳೇ ತಂಗಿ ಆಸ್ಪತ್ರೆಯಲ್ಲಿ ಇದ್ದಾಳೆ ಎಂದ. ಆಗ ಇವರ ತಂಗಿ ಅಪ್ಪ ಅಮ್ಮ ನ ನೆನಪಾಗಿ ಒಂದು ಕ್ಷಣ ಮೌನವಾದರು. ಅವನು ಅಂಗಡಿಯಲ್ಲಿ ಔಷದಿ ಖರೀದಿಸಿದ. ನೋಡಿದರೆ ಅದರ ಬೆಲೆ ಎಂಭತ್ತು ರೂಪಾಯಿ .ಅವನ ಹತ್ತಿರ ನಲವತ್ತು ಮಾತ್ರ ಇದೆ. ತಕ್ಷಣ ಇವರ ಬಳಿ ಇದ್ದ ನಲವತ್ತು ಕೊಟ್ಟು ಮೊದಲು ಔಷದಿ ನಂತರ ಹೊಟ್ಟೆ ಅಂತ ಹೇಳಿ ಅಲ್ಲಿಂದ ಒಬ್ಬರೇ ಹೊರಟರು. ಎಲ್ಲಿಗೆ ಹೋಗಬೇಕು ಎಂದೇ ಗೊತ್ತಿಲ್ಲ. 

ಒಂದು ದೊಡ್ಡ ಮನೆ ಮುಂದೆ ಬಹಳ ಜನ ಸೇರಿ ಹಬ್ಬ ಆಚರಿಸುತ್ತಿದ್ದಾರೆ. ಪೊಂಗಲ್ ವಾಸನೆ ಮೂಗಿಗೆ ಬಡಿಯುತ್ತಿದೆ. ಅಲ್ಲಿಗೆ ಬಂದು ಜನಗಳ ಮಧ್ಯೆ ನಿಂತರು.ಬಗೆ ಬಗೆ ತಿಂಡಿಗಳು ಇಟ್ಟು ಪೂಜೆ ಮಾಡ್ತಾ ಇದಾರೆ .ಹಸಿವು ತಡೆಯಲು ಆಗ್ತಿಲ್ಲ . ಮಧ್ಯಾನ್ಹ ಒಂದು ಘಂಟೆ . ಉರಿ ಬಿಸಿಲು. ಆಗ ಕೆಲವರು ಅಲ್ಲೇ ನೆಲದ ಮೇಲೆ ಊಟಕ್ಕೆ ಕೂತಾಗ ಇವರೂ ಅವರೊಂದಿಗೆ ಕೂತರು.ಒಬ್ಬರು ಬಂದು ನೀನು ಆ ಕಡೆ ಹೋಗು. ಇಲ್ಲಿ ಕುಳಿತು ಕೊಳ್ಳಬಾರದು ,ನಮದೆಲ್ಲಾ ಆದಮೇಲೆ ಅಲ್ಲಿ ಊಟ ಹಾಕ್ತಾರೆ ಅಂದಾಗ ಹೋಗಿ ದೂರ ಮರದ ಕೆಳಗೆ ನಿಂತರು. ಅರ್ಧ ಘಂಟೆ ಆದ ಮೇಲೆ ಬೇರೆ ಕಡೆ ಎಲೆ ಹಾಕಿ ಊಟ ಬಡಿಸಿದರು . ಹಸಿವು ಏನೆಂದು ಅಂದು ತಿಳಿ ಯಿತು.. ಎಲೆಗೆ ಹಾಕಿದ್ದೇಲ್ಲಾ ಗಭ ಗಭನೆ ತಿಂದರು. ಹೊಟ್ಟೆಗಾಗಿ ಮನುಷ್ಯ ಎಷ್ಟು ಕಷ್ಟ ಪಡ್ತಾನೆ ಅಂತ ಅರಿವಾಯ್ತು. ಊಟ ಮಾಡುವಾಗ ಇವರ ಎಲೆ ಹತ್ತಿರ , ಓಡಾಡುತ್ತಿದ್ದ ಒಂದು ಹೆಣ್ಣಿನ ಗೆಜ್ಜೆಯ ಕಾಲುಗಳು ಅಲ್ಲೇ ನಿಂತವು. ಅಲ್ಲಿಯವರೆಗೆ ತಲೆ ಎತ್ತದೆ ಊಟ ಮಾಡುತ್ತಿದ್ದವರು ತಲೆ ಎತ್ತಿ ನೋಡಿದರು. ಸುಂದರ ತರುಣಿ. ಇವರ ಮುಖವನ್ನೇ ದಿಟ್ಟಿಸಿ ನೋಡಿ ಒಳಗೆ ಓಡಿ ಹೋಯ್ತು. ಹತ್ತು ನಿಮಿಷದಲ್ಲಿ ಮನೆ ಮಂದಿ ಎಲ್ಲಾ ಇವರ ಸುತ್ತಲೂ ಬಂದು ನಿಂತಿದ್ದಾರೆ. ಮತ್ತೇನು ಕಾದಿದೆಯೋ ಅಂತ ಭಯವಾಯಿತು. ಇವರೂ ಹೆದರಿ ನಿಂತು ಕೈಮುಗಿದು ಹಸಿವಾಗಿತ್ತು ತಿಂದೆ ಅಂತ ಹೇಳಿದರು.

ಒಬ್ಬರು ಕೈ ತೊಳೆಯಲು ನೀರು ಕೊಟ್ಟರು. ಮತ್ತೊಬ್ಬರು ಒಂದು ಟವಲ್ ಹಿಡಿದು ನಿಂತಿದ್ದಾರೆ. ಇದು ಇಲ್ಲಿನ ಪದ್ಧತಿ ಇರಬಹುದೆಂದು ಸುಮ್ಮನಾದರು. ಆದರೆ ಈ ಆತಿಥ್ಯ ಇವ ರೊಬ್ಬರಿಗೆ ಮಾತ್ರ ಅಂತ ತಿಳಿಯಲು ಹೆಚ್ಚು ಸಮಯ ಆಗಲಿಲ್ಲ. ಮನೆ ಯಜಮಾನ ಕೈ ಹಿಡಿದು ಒಳಗೆ ಕರೆದು ಕುರ್ಚಿಯಲ್ಲಿ ಕುಳಿತು ಕೊಳ್ಳಲು ಹೇಳಿದಾಗ , ಇವರಿಗೆ ನನ್ನ ಬಗ್ಗೆ ತಿಳಿದಿರಬಹುದು . ಪೊಲೀಸರಿಗೆ ತಿಳಿಯುವ ಮೊದಲು ಇಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಬೇಕು ಅಂತ ಯೋಚಿಸುತ್ತಿದ್ದಾಗ. ಅವರಮಗಳು ಬಂದು ಇವರ ಕಾಲಿಗೆ ನಮಸ್ಕಾರ ಮಾಡಿ , ನಾನು ತಿರುವನಂತಪುರದಲ್ಲಿ ಓದುತ್ತಿದ್ದಾಗ ನಿಮ್ಮ ಭಾಷಣಗಳನ್ನು ಕೇಳಿದ್ದೇನೆ. ನೆನ್ನೆ ಪೇಪರಿನಲ್ಲಿ ನಿಮ್ಮ ಫೋಟೋ ನೋಡಿದೆ ಎಂದಾಗ ಇವರಿಗೆ ಆಶ್ಚರ್ಯ.ಹೆದರಬೇಡಿ . ಕೇರಳ ಪೊಲೀಸ್ ನಿಮ್ಮನ್ನ ಹುಡುಕುತ್ತಿರುವ ವಿಷಯ ನಮಗೆ ಗೊತ್ತು. ಇವರು ನಮ್ಮ ತಂದೆ . ಇವರು ಲಾಯರ್ .ನಿಮಗೆ ಸಹಾಯ ಮಾಡ್ತಾರೆ.ಸಧ್ಯಕ್ಕೆ ನಿಮಗೆ ಬೇಲ್ ದೊರೆಯುವ ವರೆಗೂ ನೀವು ನಮ್ಮ ಮನೆಯಿಂದ ಹೊರ ಹೋಗಬೇಡಿ ಅಂತ ಹೇಳಿದಳು. ಆಗ ಮನಸ್ಸಿಗೆ ಸ್ವಲ್ಪ ನೆಮ್ಮದಿ ಆಯ್ತು.

.

.



Rate this content
Log in

Similar kannada story from Classics