Vijaya Bharathi.A.S.

Abstract Classics Others

2.8  

Vijaya Bharathi.A.S.

Abstract Classics Others

ಕೆಂಪು ತಂದ ಅಪಾಯ

ಕೆಂಪು ತಂದ ಅಪಾಯ

2 mins
258


ನವರಾತ್ರಿ ಬಂತೆಂದರೆ ರಾಜಾರಾಂ ಅವರ ಮನೆಯಲ್ಲಿ ಬೊಂಬೆ ಗಳನ್ನು ಜೋಡಿಸುವ ಸಂಭ್ರಮ. ಮೂವರು ಹೆಣ್ಣು ಮಕ್ಕಳು ಆ ಮನೆಯಲ್ಲಿ ಇರುವುದರಿಂದ ರಾಜಾರಾಂ ಮತ್ತು ಅವರ ಹೆಂಡತಿ ಪದ್ಮಾಸಿನಿಯವರಿಗೆ ನವರಾತ್ರಿ ಬಂತೆಂದರೆ ಏನೋ ಒಂದು ರೀತಿಯ ಉತ್ಸಾಹ. ಮಹಾಲಯ ಅಮಾವಾಸ್ಯೆ ಯ ದಿನವೇ ಬೊಂಬೆ ಗಳನ್ನು ಜೋಡಿಸುವ ಕೆಲಸ ಶುರು ವಾಗುತ್ತದೆ.

ಆ ಗೊಂಬೆಗಳನ್ನು ಇಡುವುದರಲ್ಲಿಯೂ ಒಂದು ರೀತಿಯ ಶಿಸ್ತು ಇರುತ್ತದೆ. ಅದರಂತೆಯೇ ಜೋಡಿಸಬೇಕು. 


ಮೊದಲನೇ ಸಾಲಿನಲ್ಲಿ ಪಟ್ಟದ ರಾಜ ರಾಣಿ ಯರು, ಪಕ್ಕದಲ್ಲಿ ಗಣಪತಿ, ಸರಸ್ವತಿ,ದುರ್ಗೆ ಮುಂತಾದ ದೇವದೇವಿಯರು, ,ಅದರ ಕೆಳಗಿನ ಮೆಟ್ಟಿಲಿನಲ್ಲಿ 

ಅಂಗಡಿ,ದಿನಸಿ ಗಳು, ಮನೆಗಳು, ಹೆಂಗಸರು, ಬಾವಿ, ಮುಂತಾದ. ಗೃಹಕೃತ್ಯದ ಸಾಮಾನುಗಳು, ಮತ್ತೊಂದು ಕೆಳಗಿನ ಹಂತದಲ್ಲಿ, ವಿವಿಧ ರೀತಿಯ ಕ್ರೀಡೆಗಳ ಸೆಟ್ಗಳೂ, ರಸ್ತೆಯಲ್ಲಿ ನ ವಾಹನಗಳು, ಮಕ್ಕಳ ಆಟದ ಬೆಟ್ಟಗಳು, 

ಹೀಗೆ ಬೊಂಬೆ ಗಳನ್ನು ಜೋಡಿಸಬೇಕು. ಇವೆಲ್ಲಕ್ಕೂ ಕಳಶವಿಟ್ಟಂತೆ ಬೊಂಬೆ ಮೆಟ್ಟಿಲುಗಳ ಇಕ್ಕೆಲಗಳಲ್ಲಿ

ಪಾರ್ಕ ಮಾಡಿ ಇಟ್ಟಿರುತ್ತಾರೆ. ಚಿಕ್ಕ ಮಕ್ಕಳಿಗೆ ಬೊಂಗಳನ್ನು ಜೋಡಿಸುವುದರ ಮೂಲಕ ಜೀವನ,ಸಂಸಾರದ ಪಾಠಗಳನ್ನು 

ಕಲಿಸುವುದು ಈ ಬೊಂಬೆ ಕೂರಿಸುವ ಹಿಂದಿರುವ ಮರ್ಮ.

ಹೀಗೆ ಬೊಂಬೆ ಗಳನ್ನು ಅತ್ಯಂತ ಆಕರ್ಷಣೀಯ ವಾಗಿ 

ಜೋಡಿಸಿ ಮುಗಿಸುವ ವೇಳೆಗೆ ರಾತ್ರಿ ಹನ್ನೊಂದು ಹೊಡೆದಿರುತ್ತಿತ್ತು.

ಮಾರನೇ ದಿನ ಶರನ್ನವರಾತ್ರಿಯ ಮೊದಲ ದಿನ ಪಾಡ್ಯದಂದು ಪದ್ಮಾಸಿನಿಯವರು ತಮ್ಮ ಮೂವರೂ

ಹೆಣ್ಣು ಮಕ್ಕಳಿಗೆ ಬಿಳಿಯ ವಸ್ತ್ರಗಳಿಂದ ಅಲಂಕಾರ ಮಾಡಿ , ಅವರಿಂದ ಕಳಶವಿಡಿಸಿ ಪೂಜೆ ಮಾಡಿಸಿ 

ಹಬ್ಬದ ಊಟ ಉಂಡು,ಸಂಜೆಯ ವೇಳೆ ಅಕ್ಕಪಕ್ಕದ ಪುಟ್ಟ ಮಕ್ಕಳನ್ನು ಮನೆಗೆ ಕರೆದು, ಹಾಡು ಹೇಳಿಸಿ ಬೊಂಬೆ ಬಾಗಿನ ಕೊಟ್ಟು ಕಳುಹಿಸುವುದು. ಈ ದಸರಾದಲ್ಲಿ ಒಂಭತ್ತು ದಿನಗಳೂ ಎಲ್ಲರ ಮನೆಗಳಲ್ಲೂ ಹೆಣ್ಣು ಮಕ್ಕಳ ಸಡಗರ ಸಂಭ್ರಮ ಹೇಳತೀರದು.


ಈ ಬಾರಿಯೂ ಅವರ ಮನೆಯಲ್ಲಿ ನವರಾತ್ರಿ ಯ ಸಡಗರಗಳು ಉತ್ಸಾಹ ದಿಂದ ನಡೆಯುತ್ತಿತ್ತು. 

ಇತ್ತೀಚೆಗೆ ನವರಾತ್ರಿ ಯ ಒಂಭತ್ತು ದಿನಗಳು ಆಯಾ ದಿನದ ವಿಶೇಷ ಬಣ್ಣ ಬಣ್ಣದ ಬಟ್ಟೆ ಹಾಕಿಕೊಳ್ಳುವುದು ಎಲ್ಲೆಲ್ಲೂ ಜನಜನಿತ ವಾಗಿರುವಂತೆ ರಾಜಾರಾಂ ಅವರ ಮನೆಯ ಹೆಣ್ಣು ಮಕ್ಕಳೂ ಸಹ ಆಯಾ ದಿನದಲ್ಲಿ ಆಯಾ ಬಣ್ಣದ ಬಟ್ಟೆ ಗಳನ್ನು ಹಾಕಿಕೊಳ್ಳಲು ನಿರ್ಧರಿಸಿ, ಮೂವರು ಹೆಣ್ಣು ಮಕ್ಕಳೂ ಒಂಭತ್ತು ಬಣ್ಣಗಳ ಬಟ್ಟೆಗಳನ್ನು ಖರೀದಿಸಿದ್ದರು. 

ನವರಾತ್ರಿಯ ಎರಡನೇ ದಿನ ದೇವಿಯ ಬ್ರಹ್ಮ ಚಾರಿಣಿರೂಪಕ್ಕೆ ಕೆಂಪು ವಸ್ತ್ರವನ್ನು ಧರಿಸಿ ಪೂಜಿಸಬೇಕು. ಮೂವರು ಹೆಣ್ಣು ಮಕ್ಕಳು ಕೆಂಪು ಬಣ್ಣದ ಬಟ್ಟೆ ಗಳನ್ನು ಹಾಕಿಕೊಂಡು, ಅದಕ್ಕೆ ತಕ್ಕಂತೆ ಬೆಳೆ, ಸರ , ಒಲೆಗಳನ್ನು ಧರಿಸಿಕೊಂಡು ಸಂತೋಷದಿಂದ ಬೊಂಬೆಗಳಿಗೆ ಪೂಜೆ ಮಾಡುತ್ತಿದ್ದಾಗ, ಒಂದು ಅಚಾತುರ್ಯ ನಡೆದೇ ಹೋಯಿತು. ರಾಜಾರಾಂ ಅವರಕೊನೆಯ ಮಗಳು ಮೃಣಾಲಿನಿ ಯು ದೇವರಿಗೆ ಆರತಿ ಮಾಡುವ ಸಮಯದಲ್ಲಿ ದೀಪದ ಕುಡಿ ಸೋಕಿ ಅವಳ ಕೆಂಪು ಲಂಗ ಸರಸರನೇ ಹತ್ತಿಕೊಂಡು 

ಎಲ್ಲರಿಗೂ ಗಾಬರಿಯಾಯಿತು. ಇದನ್ನು ಗಮನಿಸಿದ ರಾಜಾರಾಂ ತಕ್ಷಣ ಓಡಿಬಂದು, ತಣ್ಣೀರೆರಚಿ, ಮಗಳು ಬಟ್ಟೆಗೆ ಸುತ್ತಿಕೊಂಡಿದ್ದ ಬೆಂಕಿಯ ಸಣ್ಣ ಜ್ವಾಲೆ ತಿನ್ನು ನಂದಿಸಿದರು. ಎಂಟು ವರ್ಷ ದ ಮೃಣಾಲಿನಿ ಗಾಬರಿಯಿಂದ ಅಳಲು ಪ್ರಾರಂಭಿಸಿದಾಗ, ರಾಜಾರಾಂ ಮತ್ತು ಪದ್ಮಾಸಿನಿ ಅವಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಸಮಾಧಾನ ಮಾಡಿದರು.ಇನ್ನಿಬ್ಬರು ಹೆಣ್ಣು ಮಕ್ಕಳು ಗಾಬರಿಯಿಂದ ತಂದೆ ತಾಯಿಯ ಪಕ್ಕ ನಿಂತು ಬಿಟ್ಟರು.

"ಪಾಪ, ಮಕ್ಕಳು ಎಷ್ಟು ಸಡಗರದಿಂದ ಪೂಜೆ ಮಾಡುತ್ತಿದ್ದಾಗ ಹೀಗಾಗಿಬಿಡ್ತಲ್ಲಾ ,ಯಾಕೋ ಮನಸ್ಸಿಗೆ ಬೇಜಾರು" ಪದ್ಮಾಸಿನಿ ಚಿಂತಿತರಾದಾಗ, ರಾಜಾರಾಂ ಅವರು

"ಅಯ್ಯೋ, ದೀಪ ಹಚ್ಚಿ ಇಟ್ಟಾಗ ಎಚ್ಚರಿಕೆ ಯಾಗಿರಬೇಕು. ಏನೋ ಹೀಗೆ ಅಚಾತುರ್ಯ ಆಯಿತೆಂದರೆ ಮುಂದೆ ಎಚ್ಚರಿಕೆ ಯಿಂದ ಇಲ್ಲದಾಯಿತು.

ಏಳಿ ಮಕ್ಕಳೇ ಯಾರೂ ಹೆದರಬೇಡಿ. ಇಂದು ತಾಯಿ ಕೆಂಪು ವಸ್ತ್ರವನ್ನು ಧರಿಸಿ ದುಷ್ಟ ನಿಗ್ರಹ ಮಾಡಿದ್ದಾಳೆ. ಕೆಂಪೆಂದರೆ ಧೈರ್ಯ. ನೀವು ಮೂವರೂ ನಿಮ್ಮ ಜೀವನದಲ್ಲಿ ಧೈರ್ಯ ವಾಗಿರಬೇಕು." ಎಂದು ಹೇಳುತ್ತಾ, ಮಕ್ಕಳಿಗೆ ನವರಾತ್ರಿ ಯ ಎರಡನೇ ದಿನದ ದೇವಿಯ ಬ್ರಹ್ಮ ಚಾರಿಣೀ ರೂಪದ ಕಥೆ ಹೇಳಿ, ಮಕ್ಕಳಿಗೆ ಧೈರ್ಯ ತುಂಬಿದರು.



Rate this content
Log in

Similar kannada story from Abstract