shristi Jat

Classics Inspirational Others

4.5  

shristi Jat

Classics Inspirational Others

ಹುಟ್ಟುಹಬ್ಬ

ಹುಟ್ಟುಹಬ್ಬ

2 mins
262


ಹುಟ್ಟು ಅನ್ನುವುದು ಒಂದು ಸುಂದರವಾದ ಸೃಷ್ಟಿ ನಮ್ಮ ವಯಸ್ಸಿನ ಏರಿಕೆಯನ್ನು ಹಬ್ಬವಾಗಿ ಆಚರಿಸುವುದು ಒಳ್ಳೆಯದೆ ಆದರೆ ಆಚರಿಸದೆ ಇದ್ದರೂ ಅಭ್ಯಂತರ ಇಲ್ಲ ಯಾಕೆಂದರೆ ನಮಗಾದಿನ ಹಬ್ಬವೆ ಆಗಿರುತ್ತದೆ ಏರಿಕೆಯ ವಯಸ್ಸಿನ ಮಧ್ಯೆ ಜೀವನ ಅನ್ನೊ ಅಮೂಲ್ಯವಾದ ಕ್ಷಣಗಳಿರುತ್ತವೆ.ಆ ಕ್ಷಣಗಳು ದುಃಖವಾಗಿರಲಿ ಅಥವಾ ಸುಖವಾಗಿರಲಿ ಅವುಗಳನ್ನು ಸ್ವಿಕರಿಸಿ ಆಕಾಂಕ್ಷೆಗಳೊಂದಿಗೆ ಮುನ್ನಡೆಯುವುದು ಎಲ್ಲದಕ್ಕೂ ಮೀರಿದ ಕಾರ್ಯವದು.

ನಮ್ಮ ಹುಟ್ಟು ಇನ್ನೊಬ್ಬರಿಗೆ ಮಾದರಿಯಾದರೆ ಅದಕ್ಕಿಂತ ಸಾಧನೆ ಇನ್ನೊಂದಿಲ್ಲ ಮಾದರಿ ಅಂದರೆ ಅವರ ಉಡುಗೆ ತೊಡುಗೆ ಶೈಲಿಯನ್ನು ಕಲಿಯುವದಲ್ಲ ಅವರ ವ್ಯಕ್ತಿತ್ವ ಅವರ ಯೋಚನೆಗಳನ್ನು ಪಾಲಿಸಿ ಯಾವಾಗ ಇನ್ನೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ವಿಯನ್ನು ಪಡೆಯುತ್ತಾನೆ.ಮಾದರಿಯಾಗಿರುವ ವ್ಯಕ್ತಿಯ ಹುಟ್ಟು ಸಾರ್ಥಕವಾಗಿರುತ್ತದೆ.

ಯಾವ ವ್ಯಕ್ತಿಯಿಂದ ಮಾದರಿ ಸಿಕ್ಕಿರಿತ್ತದೊ ಆ ವ್ಯಕ್ತಿಯಿಂದ ಕಲಿತದ್ದಲ್ಲದೆ ಅದೆ ವ್ಯಕ್ತಿಯೊಡನೆ ಸ್ಪರ್ಧೆಗೆ ಇಳಿದು ಯಶಸ್ವಿಯಾಗಿ ಅದಕ್ಕೆ ತನ್ನ ಹೆಸರಿಡುವುದು ದುಷ್ಟರ ಲಕ್ಷಣ ಅಂತವರದ್ದು ಯಶಸ್ವಿನೆ ಅಲ್ಲ ಸಾಧನೆಯ ಮಾತು ದೂರದ್ದು ಸ್ಪರ್ಧೆಗೆ ಇಳಿದು ಯಶಸ್ವಿಯಾಗುವ ಹಂಬಲ ಇದ್ದವನು ತನ್ನದೆ ವ್ಯಕ್ತಿತ್ವ ಸ್ವತಹ ಆಲೋಚನೆಗಳಿಂದ ಜಯಿಸಬೇಕು.

ಇನ್ನೊಬ್ಬರ ವ್ಯಕ್ತಿತ್ವ ನಿನಗೆ ಸ್ಪೂರ್ತಿಯಾದಲ್ಲಿ ಅವರ ಬಗ್ಗೆ ನಿನಗೆ ಕೃತಜ್ಞತೆ ಇರಬೇಕು ನಿನಗೆ ಮಾದರಿಯಾಗಿರುವ ವ್ಯಕ್ತಿಯ ಹೆಸರು ಎದೆ ತಟ್ಟಿ ಹೇಳುವ ಧೈರ್ಯ ಇರಬೇಕು.

ತಿಂದು ಮನೆಗೆ ದ್ರೋಹ ಬಗೆಯುವ ಹೇಡಿಗಳದ್ದು ಯಾವತ್ತು ಯಶಸ್ಸಿನ ಹೆಸರಿಗೆ ಅರ್ಹರಾಗಿರುವುದಿಲ್ಲ.

ನಾವು ಜೀವನ ಸಾಗಿಸುವಾಗ ಒಬ್ಬೊಬ್ಬರಿಂದ ಒಂದನ್ನು ಕಲಿಯುತ್ತೇವೆ ನಮ್ಮ ತಾಯಿಯಿಂದ,ತಂದೆಯಿಂದ, ನೆರೆಹೊರೆಯವರಿಂದ,ಸ್ನೇಹಿತರಿಂದ,ಗುರುಗಳಿಂದ ಇತ್ಯಾದಿ.

ಹುಟ್ಟಿಂದಲೆ ಎಲ್ಲಾ ಕಲಿತುಕೊಂಡು ಬಂದಿರುವುದಿಲ್ಲಾ ನಾವೂ ಅದರಲ್ಲಿ ಒಳ್ಳೆಯದು ಕಂಡಿರುತ್ತೇವೆ ಕೆಟ್ಟದ್ದು ಕಂಡಿರುತ್ತೇವೆ ಇನ್ನೊಬ್ಬ ವ್ಯಕ್ತಿಯಲ್ಲಿರುವ ಯಾವ ಅಂಶ ನಾವು ತೇಗೆದುಕೊಂಡು ನಾವು ನಮ್ಮ ವ್ಯಕ್ತಿತ್ವ ಹೇಗೆ ರೂಪಿಸಿಕೊಂಡಿದ್ದೆವೆ ಅನ್ನೊದು ಮುಖ್ಯವಾಗಿರುತ್ತದೆ.

ಇನ್ನೊಬ್ಬರ ನೋಡಿ ಕಲಿಯುವುದು ಸಹಜ ಒಳ್ಳೆಯ ವಿಷಯಗಳನ್ನು ಕಲಿತರೆ ಇನ್ನೂ ಒಳ್ಳೆಯದು ಇದನ್ನು ಹೊರತು ನಮ್ಮದೆ ಆದ ಒಂದು ಸ್ವಂತ ವ್ಯಕ್ತಿತ್ವ ಇರುತ್ತದೆ ನಮ್ಮ ಆಸೆಗಳು,ಯೋಚನೆಗಳು, ಜ್ಞಾನ, ಬುದ್ಧಿ ಶಕ್ತಿ ನಮ್ಮ ಕೆಲಸದಿಂದ ಗುರುತಿಸಲಾಗುತ್ತದೆ.ಉದಾಹರಣೆಗೆ ಭಾರತದ ಪ್ರತಿಭಾವಂತ ಇಂಜಿನಿಯರ್ ಸರ್.ಎಂ ವಿಶ್ವೇಶ್ವರಯ್ಯನವರ ಬುದ್ಧಿ ಶಕ್ತಿ, ಜ್ಞಾನ ಮತ್ತು ಸಮಾಜಕ್ಕೆ ಕೊಟ್ಟಿರುವ ಅವರ ಕೋಡುಗೆಗಳು ಸ್ಪರ್ಧೆಗೋಸ್ಕರ ಅಲ್ಲ ಅವರು ತಮ್ಮಲ್ಲಿರುವ ಜ್ಞಾನವನ್ನು ಉಡುಗೊರೆ ರೂಪದಲ್ಲಿ ಜನರಿಗಾಗಿ ಉತ್ತಮ ಕೆಲಸವನ್ನು ಮಾಡಿದರು.

ಹಾಗೂ ಇನ್ನು ಕೆಲವರಿರುತ್ತಾರೆ ಸಮಾಜ ಹಾಳು ಮಾಡುವ ದುಷ್ಟರು ಅವರಲ್ಲಿಯೂ ಸಹ ಸ್ವತಹ ಅವರದ್ದೆ ಆದ ಆಸೆ,ಯೋಚನೆ, ಬುದ್ಧಿಶಕ್ತಿ ಇರುತ್ತದೆ ಅದರಲ್ಲಿ ಬರಿ ಕೆಟ್ಟದ್ದೆ ತುಂಬಿರುತ್ತದೆ.

ಹೀಗೆ ಏರಿಕೆಯ ಪ್ರತಿಯೊಂದು ವರ್ಷ ನಮಗೆ ಅಮೂಲ್ಯವಾಗಿರುತ್ತದೆ ಮೋದಲಿನಿಂದ ಪಡೆದುಕೊಂಡು ಬಂದ ಉಡುಗೊರೆ ಅಂದರೆ ವಯಸ್ಸು 

ನಮ್ಮ ಜೀವನದಲ್ಲಿ ಬರುವ ಸಂಬಂಧಗಳು ಬಂದು ಹೋಗುವ ಪಾತ್ರಗಳಿದ್ದಂತೆ ಆದ್ಯತೆ ಎಲ್ಲಾದಕ್ಕೂ ಕೊಡಲಾಗುವುದಿಲ್ಲ ನಮ್ಮ ಜೀವನ ನಮಗೆ ಬೇಕಿರುವ ಹಾಗೆ ಬದುಕಬೇಕು ಆದರೆ ಇನ್ನೊಬ್ಬರಿಗೆ ಕೇಡಕ್ಕುಂಟು ಮಾಡುತ್ತಾ ಅಲ್ಲಾ ಕೈಲಾದರೆ ಒಳಿತುಂಟು ಮಾಡಿ ಇಲ್ಲಂದರೆ ನಿನ್ನಷ್ಷಕ್ಕೆ ನೀನು ಇರುವುದು ಸರಿ.

ನನಗೂ ತುಂಬಾ ಖುಷಿ ಕೊಟ್ಟ ಒಂದು ಹುಟ್ಟುಹಬ್ಬ ಅಂದರೆ ನನ್ನ ವುಡ್ಬೀ ನನಗೆ ಹೂಗುಚ್ಛ ಮತ್ತು ಕೇಕ್ ಕಳುಹಿಸಿದ್ದು

ಇನ್ನೊಂದು ಆರನೆ ತರಗತಿಯಲ್ಲಿದ್ದಾಗ ನನ್ನ ಸ್ನೇಹಿತರು ಕೇಕ್ ತಂದು ಕಟ್ ಮಾಡಿಸಿದ್ದರು ಮೋದಲ ಸಲ ನಾನು ಕೇಕ್ ಕಟ್ ಮಾಡಿದ್ದು ವಿಶೇಷ ಏನೆಂದರೆ ನಮ್ಮನೆಯಲ್ಲಿ ಹುಟ್ಟು ಹಬ್ಬದ ಆಚರಣೆ ಮಾಡುತ್ತಿದ್ದರು ಆದರೆ ಕೇಕ್ ಕಟ್ ಮಾಡಿ ಆಚರಿಸುತ್ತಿರಲಿಲ್ಲ ಸಿಹಿ ತಿಂಡಿ ಮಾಡುತ್ತಿದ್ದರು.

ಇದಲ್ಲದೆ ವ್ಯಾಸಾಂಗ ಮಾಡುವಾಗ ತುಂಬಾ ಸಲ ಸ್ನೇಹಿತರು ಹುಟ್ಟು ಹಬ್ಬದ ಸರ್ ಪ್ರೈಸಸ್ ಕೊಟ್ಟಿದ್ದಾರೆ ಹಾಗೂ ಉಡುಗೊರೆಗಳು ಅವೆಲ್ಲಾ ನೆನಪಿನ ಕಾಣಿಕೆಗಳು

ಆಚರಣೆ ಇದ್ದರೆನು ಇಲ್ಲದ್ದಿದ್ದರೆನೂ ನಮ್ಮ ಪ್ರತಿ ಹುಟ್ಟು ಹಬ್ಬ ನಮಗೆ ಉಡುಗೊರೆ ಇದ್ದ ಹಾಗೆ ನಾವು ಖುಷಿಯಿಂದ ಆಹ್ವಾನ ಮಾಡಬೇಕು ಅಲ್ಲದೆ ಖುಷಿಯಿಂದ ಇರಬೇಕು.

"ಹುಟ್ಟು ದೇವರ ಕೈಯಲ್ಲಿದೆ ಸಾವು ದೇವರ ಕೈಯಲ್ಲಿದೆ ಅವೆರಡರ ಮಧ್ಯ ಇರುವ ಜೀವನ ನಮ್ಮ ಕೈಯಲ್ಲಿದೆ ನಮಗಿಷ್ಟದಂತೆ ಬದುಕೊಣ"



Rate this content
Log in

Similar kannada story from Classics