ಹೀಗಿದ್ದವರು ಅವರು
ಹೀಗಿದ್ದವರು ಅವರು


ಒಂದು ಸಾವಿರ ಇನ್ನೂರು ಜನ ಕೆಲಸಮಾಡುವ ಸ್ಥಳ. ದೇಶದಲ್ಲೇ ಎಲ್ಲೂ ಕಾಣದಂತಹ ದೊಡ್ಡ ಹೂದೋಟ. ಒಂದು ನಾಯಿಯೂ ಒಳಗೆ ಬರಲಾಗದಷ್ಟು ವ್ಯವಸ್ಥಿತ ಭದ್ರ ಕೋಟೆ. ಅಪಾರ ಪುಸ್ತಕಗಳ ಭಂಡಾರ ದಂತಿರುವ ಬೃಹತ್ ಕೋಣೆ. ದೇಶ ವಿದೇಶಗಳಲ್ಲಿ ದೊರೆಯುವ ಎಲ್ಲ ಬಗೆಯ ಊಟದ ವ್ಯವಸ್ಥೆ. ಹೀಗೆ ಅನೇಕ ಸುವ್ಯವಸ್ಥೆಗಳ ನ್ನ ಹೊಂದಿರುವ ಇಲ್ಲಿಗೆ ಮುಖ್ಯಸ್ಥ ರಾಗಿ ಬರುವವರು ಕೇವಲ ಐದು ವರ್ಷ ಇದ್ದು ನಿರ್ಗಮಿಸುತ್ತಾರೆ. ಹೀಗೆ ಒಂದು ಅವಧಿಗೆ ಬಂದ ಮಹಾನ್ ಸರಳ ಸಜ್ಜನ ವ್ಯಕ್ತಿಯೊಬ್ಬರು ಒಳಗೆ ಬಂದ ಮೊದಲ ದಿನವೇ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಇವರು ನಿಂತಾಗ ಅವನು ಕಾಲ
ಬಳಿ ಕೂತ. ಇವರಿಗೆ ಏನು ಮಾಡುತ್ತಾನೆ ಎನ್ನುವುದು ತಿಳಿಯದೆ ಒಂದು ಹೆಜ್ಜೆ ಹಿಂದೆ ಹೋಗಿ ಕೇಳಿದರೆ ಅವನು ಹೇಳಿದ್ದು ನಿಮ್ಮ ಶೂ ಬಿಚ್ಚುತ್ತೀನೆಂದು. ಇದು ನೀಚ ಕೆಲಸ ಯಾರು ನಿನಗೆ ಹೇಳಿದ್ದು ಎಂದಾಗ ಪಕ್ಕದಲ್ಲಿದ್ದ ಅಧಿಕಾರಿ ಹೇಳಿದರು ಸರ್ ಇದು ವೈಸ್ರಾಯ್ ಕಾಲ ದಿಂದಲೂ ನಡೆದು ಬಂದಿದೆ. ಹಿಂದಿನವರು ಯಾರೂ ಬೇಡವೆನ್ನಲಿಲ್ಲ ಹಾಗಾಗಿ ಮುಂದುವರೆದಿದೆ ಎಂದರು, ಈ ಮನುಷ್ಯನನ್ನ
ಬೇರೆ ಯಾವುದಾದರೂ ಗಿಡಗಳಿಗೆ ನೀರು ಹಾಕೋದೋ ಅಥವಾ ರಸ್ತೆ ಗುಡಿಸುವ ಕೆಲಸಕ್ಕೋ ಹಾಕಿ. ಪಾಪ ಎಷ್ಟು ಜನರ ಕಾಲು ಹಿಡಿದುಹೇಳಿಕೊಳ್ಳದೆ ನೊಂದಿದ್ದಾನೋ ಅಂದರು.
ಐದು ವರ್ಷ ಪೂರೈಸಿ ಮನೆಗೆ ಹೊರಡುವ ಸಮಯ ಬಂದಾಗ ತಮ್ಮ ಎರಡು ದೊಡ್ಡ ಸೂಟ್ ಕೇಸ್ ಒಂದು ಕಡೆ ಇಟ್ಟು, ಅಂದು ಶೂ ಬಿಚ್ಚಲು ಇದ್ದ ಅದೇ ಕೆಲಸದವನನ್ನ ಮರೆಯದೆ ಕರೆಸಿ ತಮಾಷೆಯಾಗಿ ಹೇಳಿದರು ಅಂದು ನಿನ್ನ ಕೆಲಸ ನಾನು ಕಿತ್ತು ಕೊಂಡೆ. ಇಂದು ನನ್ನ ಕೆಲಸ ಸರ್ಕಾರ ಕಿತ್ತು ಕೊಂಡಿದೆ. ನೀನು ಗಿಡಗಳಿಗೆ ನೀರು ಬಿಡುವ ಪೈಪು ತೆಗೆದುಕೊಂಡು ಬಾ ಅಂತಹೇಳಿ ಎರಡೂ ಸೂಟ್ ಕೇಸ್ ಮೇಲೆ ನೀರು ಬಿಡಲು ಹೇಳಿದರು. ಅಲ್ಲಿದ್ದವರಿಗೆಲ್ಲಾ ಅರ್ಥವಾಗಲಿಲ್ಲ. ಮತ್ತೆ ಹೇಳಿದಾಗ ಅವನು ನೀರು ಬಿಟ್ಟ. ಆಗ ಹೇಳಿದರು ಇಲ್ಲಿಂದ ಒಬ್ಬ ವ್ಯಕ್ತಿ ಇಲ್ಲಿನ ಧೂಳನ್ನು ಕೂಡ ತನ್ನೊಂದಿಗೆ ತೆಗೆದು ಕೊಂಡು ಹೋಗಿಲ್ಲ ಎನ್ನುವ ವಿಷಯ ಜನರಿಗೆ ತಿಳಿಯಲು ಹೀಗೆ ಮಾಡಿದೆ ಎಂದಾಗ ಎಲ್ಲರ ಹೃದಯ ಭಾರವಾಗಿ ಕಣ್ಣುಗಳು ಒದ್ದೆ ಆಯ್ತು. ಎಷ್ಟೋ ಜನರು ಕಣ್ಣೀರು ಸುರಿಸಿ ಬೀಳ್ಕೊಟ್ಟರು.ಇವರು ಮತ್ಯಾರೂ ಅಲ್ಲ ನಮ್ಮ ನೆಚ್ಚಿನ ಮಾಜಿ ರಾಷ್ಟ್ರಪತಿ ಭಾರತ ರತ್ನ Dr ಅಬ್ದುಲ್ ಕಲಾಂರವರು.