Travel the path from illness to wellness with Awareness Journey. Grab your copy now!
Travel the path from illness to wellness with Awareness Journey. Grab your copy now!

Kalpana Nath

Abstract Inspirational Others

2  

Kalpana Nath

Abstract Inspirational Others

ಹೆಚ್.ವಿ.ಸಾವಿತ್ರಮ್ಮ

ಹೆಚ್.ವಿ.ಸಾವಿತ್ರಮ್ಮ

2 mins
126ಸ್ತ್ರೀ ಶೋಷಣೆ ಸ್ವಾತಂತ್ರ್ಯ ಪೂರ್ವ ಕ್ಕಿಂತ ಸ್ವಾತಂತ್ರ್ಯ ಭಾರತದಲ್ಲೇ ಹೆಚ್ಚಾಗಿತ್ತು ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ವರದಕ್ಷಿಣೆ ಪದ್ಧತಿ ಎಂದು ಪರಿಸ್ಥಿತಿ ಅವಲೋಕಿಸುತ್ತದೆ. ತಮ್ಮ ಕೃತಿಗಳಲ್ಲಿ ಸ್ತ್ರೀ ಶೋಷಣೆಯ ವಿವಿಧ ಮುಖಗಳನ್ನು ಚಿತ್ರಿಸಿ ಪುರುಷ ದ್ವೇಷಿ ಎಂಬ ಆಪಾದನೆಗೆ ಗುರಿಯಾಗಿ ಪ್ರಚಾರ, ಪ್ರಶಸ್ತಿ ,ಸನ್ಮಾನಗಳಿಂದ ದೂರ ಉಳಿದು ನಾನು ನನ್ನ ಸಂತೋಷಕ್ಕಾಗಿ ಬರೆಯುತ್ತ ನನ್ನ ಭಾವನೆ ಗಳನ್ನ ಈ ಮಾಧ್ಯಮದ ಮುಖಾಂತರ ಹೊರಹಾಕುತ್ತೇನೆಂದು ನುಡಿಯುವ ಸಹಸ್ರ ಚಂದ್ರ ದರ್ಶನ ಕಂಡ ಅಪರೂಪದ ಲೇಖಕಿ ಅನುವಾದಕಿ ಸಾವಿತ್ರಮ್ಮ.


1913ರಲ್ಲಿ ಜನಿಸಿದ ಸಾವಿತ್ರಮ್ಮನವರ ಪೂರ್ಣ ಹೆಸರು ಹೆಬ್ಳಳಲು ವೆಲಪನೂರು. ಸಾವಿತ್ರಮ್ಮ. ತಂದೆ ಎಂ. ರಾಮರಾವ್. ಮೈಸೂರಿನ ಸಂಸ್ಥಾನದ ಲ್ಲಿ ಉನ್ನತ ಹುದ್ದೆಯ ಅಧಿಕಾರಿ. ತಂದೆಯ ವರ್ಗಾವಣೆ ಇವರನ್ನು ಬೇರೆ ಬೇರೆ ಊರುಗಳಲ್ಲಿ ವಿಧ್ಯಾಭ್ಯಾಸ ಮಾಡಿಸಿತು. ಮಂಡ್ಯ, ಹಾಸನ ,ರಾಮ ನಗರ ಕೋಲಾರ,ಮೈಸೂರು ಹೀಗೆ ಹಲವೆಡೆ ಓದಿ, 1931ರಲ್ಲಿ ಮೈಸೂರು ಮಹಾರಾಣಿ ಕಾಲೇಜಿನಿಂದ ಬಿ .ಎ. ಪದವಿಯನ್ನು ಮೂರು ಬಂಗಾರದ ಪದಕ ಪಡೆಯುವ ಮೂಲಕ ಗಳಿಸಿದರು. ಸಾವಿತ್ರಮ್ಮ ಮೈಸೂರು ವಿಶ್ವ ವಿಧ್ಯಾಲಯದಿಂದ ಪದವಿ ಪಡೆದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. ಪ್ರೊ ಎ. ಎನ್ ಮೂರ್ತಿ ರಾವ್ ಹಾಗೂ ತಿ .ನಂ .ಶ್ರೀ ಅವರ ವಿಧ್ಯಾರ್ಥಿನಿಯಾಗಿದ್ದ ಇವರು, ಅವರಿಂದ ಸಾಹಿತ್ಯಾಭಿರುಚಿ ಹಾಗೂ ಸಂಸ್ಕಾರ ಪಡೆದು ಕೊಂಡರು. ಅದನ್ನು ತಂದೆ ಹಾಗೂ ಪತಿ ಹೆಚ್ .ವಿ .ನಾರಾಯಣ ರಾವ್ ಪೋಷಿಸಿ ಪ್ರೋತ್ಸಾಹಿಸಿ ಬೆಳೆಸಿದರು. ಲೇಖಕಿ ಪ್ರೌಢ ಶಾಲೆ ವ್ಯಾಸಂಗ ಮಾಡುತ್ತಿದ್ದಾಗಲೇ ಸೋದರ ಮಾವನ ಮಗನ ಕೈಹಿಡಿದು ಗೃಹಿಣಿಯಾದರು‌. ಪತಿ ತಾಂತ್ರಿಕ ವ್ಯಾಸಂಗಕ್ಕೆಂದು ಇಂಗ್ಲೆಂಡ್ ಗೆ ಹೋದರು. ಆದ್ದ ರಿಂದ ಇವರಿಗೆ ಪವೀಧರಳಾಗಲು ಅನುಕೂಲವಾಯಿತು. ಮಾತೃ ಭಾಷೆ ತೆಲುಗು. ಕಲಿತದ್ದು ಇಂಗ್ಲಿಷ್ ಸಾಹಿತ್ಯ. ಬರವಣಿಗೆ ಮಾಡಿದ್ದು ಕನ್ನಡ ದಲ್ಲಿ. ಮೈಸೂರು ವಿ ವಿ ಪ್ರಥಮ ಕುಲಪತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲನೆ ಅಧ್ಯಕ್ಷರಾಗದ್ದ ಹೆಚ್ .ವಿ .ನಂಜುಂಡಯ್ಯ ನವರಮೊಮ್ಮಗಳು ಈ ಸಾವಿತ್ರಮ್ಮ. ತೀನ್ ಪೂಲ್ "ಮಿಡಿವ ಇಂಡಿಯಾ"ಎಂಬ ಕ್ರತಿಯನ್ನ "ಮಧ್ಯ ಕಾಲದ ಇಂಡಿಯಾ"ಎಂದು ಭಾಷಾಂತರಿಸಿ ತಮ್ಮ. ಚೊಚ್ಚಲ ಕ್ರುತಿಯನ್ನ ನಾಡು ನುಡಿಗೆ ನೀಡಿದರು.

 

ಶಶಿ ಲೇಖ, ನೀಲನೇತ್ರ, ಮಹಾದೇವ ಜಟಾಜೂಟ ದಲ್ಲಿ, ಹಸಿವೋ ಹಸಿವು ,ಹಾಗೂ ರವೀಂದ್ರ ನಾಥ್ ಟಾಗೋರರ ನೌಕಾಘಾತ, ಮನೆ ಜಗತ್ತು, ಗೋರ,ಚಿನ್ನದ ದೋಣಿ,ಲೂಯಿಸ್ ಷಿಷರ್

ಅವರ ಮಹಾತ್ಮಾ ಗಾಂಧಿ ಜೀವನ ಚರಿತ್ರೆ, ರಷ್ಯನ್ ಲೇಖಕ ಚೆಕೋವ್ ರ ಮದುವಣಗಿತ್ತಿ, ಅಲ್ಲದೆ ಇನ್ನೂ ಅನೇಕ ಇಂಗ್ಲಿಷ್ ಹಾಗೂ ಇತರ ಭಾರತೀಯ ಕೃತಿಗಳನ್ನು ಅನುವಾದಿಸಿ ನಾಡಿನ ಒಬ್ಬ ಉತ್ತಮ ಅನುವಾದಕರು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಇವರ ಕೆಲವು ಅನುವಾದಗಳು ಮೂಲಕ್ಕಿಂತ.ಅನುವಾದವೇ ಹೆಚ್ಚು ಖುಷಿ ಕೊಡುತ್ತದೆ. ಮದುವಣಗಿತ್ತಿ ಗೆ ಸೋವಿಯತ್ ಲ್ಯಾಂಡ್ ಪ್ರಶಸ್ತಿ ದೊರೆತಿದೆ. 

ಅನುವಾದ ದಿಂದ ಸಾಹಿತ್ಯ ಕ್ರುಷಿಗೆ ಬಂದ.ಇವರ ಸ್ವತಂತ್ರ್ಯ ಕ್ರುತಿಗಳು ಹಲವಾರು ಇವೆ. ನಿರಾಶ್ರಿತ, ಮರುಮದುವೆ ,ಸರಿದ ಬೆರಳು, ಲಕ್ಷ್ಮೀ ಇವರ ಕಥಾ ಸಂಕಲನಗಳು. ವಿಮುಕ್ತಿ ಹಾಗೂ ಸೀತ -ರಾಮ- ರಾವಣ ಕಾದಂಬರಿಗಳು ಮತ್ತು ಅಜ್ಜಿಯ ಕಥೆಗಳು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ.ಇವರ ಪತಿ ನಾರಾಯಣ ರಾಯರು ವ್ರತ್ತಿಯಿಂದ ಇಂಜಿನಿಯಿರ್ ಆದರೂ ಸಾಹಿತ್ಯಾಸಕ್ತರು. ಸುಮಾರು ಐದು ದಶಕಗಳ ಕಾಲ ಸಾಹಿತ್ಯ ಕ್ರುಶಿಮಾಡಿರುವ ಸಾವಿತ್ರಮ್ಮ ನವರಿಗೆ 1975 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ರುವುದೇ ಅಲ್ಲದೆ ಕರ್ನಾಟಕ ಲೇಖಕಿಯರ ಸಂಘ "ಅನುಪಮ" ಪ್ರಶಸ್ತಿ ಕೊಟ್ಟು 1992ರಲ್ಲಿ ಗೌರವಿಸಲಾಗಿದೆ.Rate this content
Log in

More kannada story from Kalpana Nath

Similar kannada story from Abstract