Read #1 book on Hinduism and enhance your understanding of ancient Indian history.
Read #1 book on Hinduism and enhance your understanding of ancient Indian history.

ಚಿರು ಕನ್ನಡಿಗ ( Chiranjeevi P)

Drama Classics Inspirational


1  

ಚಿರು ಕನ್ನಡಿಗ ( Chiranjeevi P)

Drama Classics Inspirational


ಗುರುವಿನ ಮಹತ್ವ

ಗುರುವಿನ ಮಹತ್ವ

5 mins 110 5 mins 110

ಪರದೆ - 1

(ದೇವರನ್ನು ಪೂಜಿಸುತ್ತಾ ಕುಳಿತ ಒಂದು ಸುಂದರ ಭಕ್ತ ಕುಟುಂಬ. ಪತಿ ಶಂಭುಲಿಂಗ, ಪತ್ನಿ ಅಂಬಿಕಾ) 

ಎಲ್ಲರೂ :- ಓಂ ನಮಃ ಶಿವಾಯ, ಓಂ ನಮಃ ಶಿವಾಯ...... 

ಶಂಭು:- ಪೂಜೆ ಮುಗಿಯಿತು. ಬನ್ನಿ ಎಲ್ಲರೂ ಸೇರಿ ಗುರು ಸಾನಿಧ್ಯಕ್ಕೆ ತೆರಳಿ ಗುರುಗಳಿಗೆ ನಮಸ್ಕರಿಸಿ ಬರೋಣ. 

(ಎಲ್ಲರೂ ಹರ್ಷದಿ ಬನ್ನಿ ಹೋಗೋಣ.. ಬನ್ನಿ ಹೋಗೋಣ) 


ಪರದೆ - 2 

(ಗುರುಕುಲದಲ್ಲಿ ಗುರುಗಳು ತನ್ನ ಶಿಷ್ಯರೊಂದಿಗೆ ಕುಳಿತು ಮಾತನಾಡುತ್ತಿದ್ದಾರೆ) 

ಗುರು:- ಎಲ್ಲರೂ ಪ್ರತಿ ನಿತ್ಯ ಶಿವನ ಸ್ಮರಣೆ ಮಾಡಬೇಕು. ನಾವೆಲ್ಲರೂ ಶಿವ ಭಕ್ತರು, ಶಿವ ಶರಣರಾದ ನಾವು ಯಾವುದೇ ಅನ್ಯ ಆಹಾರ ಸೇವಿಸಿದೆ ದೇವರ ಆರಾಧನೆಯಲ್ಲಿ ಸದಾ ತಲ್ಲಿನರಾಗಬೇಕು. 

(ಇತ್ತ ಭಕ್ತ ಕುಟುಂಬದ ಸದಸ್ಯರು ಬಂದು ಗುರು ಕಾಣಿಕೆಯನ್ನು ಗುರುಗಳ ಪಾದ ಕಮಲಕ್ಕೆ ಅರ್ಪಿಸುತ್ತ ಗುರು ಆಶೀರ್ವಾದ ಪಡೆವರು).

ಗುರು :- ಎಲ್ಲರಿಗೂ ಮಂಗಳವಾಗಲಿ. 

ಶಂಭು :- ಗುರುಗಳೇ ನಮ್ಮ ಮಕ್ಕಳ ಮೇಲೆ ಸದಾ ನಿಮ್ಮ ಆಶೀರ್ವಾದವಿರಲಿ ನಿಮ್ಮ ಆಶೀರ್ವಾದ ಇಲ್ಲದೆ ನಮ್ಮ ಗುರಿ ಎಂದಿಗೂ ಸಾಗದು. 

ಗುರು :- ಯಾರು ಸಾದಾ ಶಿವನ ಸ್ಮರಣೆ ಮಾಡುವರೋ ಅಂತಹವರಿಗೆ ನನ್ನ ಆಶೀರ್ವಾದ ಎಂದಿಗೂ ಇರುತ್ತದೆ. ನಿಮ್ಮ ಶಿವ ಭಕ್ತಿ ಸದಾ ಕಾಲ ಹೀಗೆ ಇರಲಿ. 

ಶಂಭು :- ಎಲ್ಲವೂ ತಮ್ಮ ಆಶೀರ್ವಾದ. 


ಪರದೆ - 3 

(ಪ್ರಪಂಚದ ಎಲ್ಲೆಡೆ ಮಳೆ ಬೆಳೆ ಇಲ್ಲದೆ ಜನರು ಒಂದು ಹೊತ್ತಿನ ಊಟಕ್ಕೂ ಅಲೆದಾಡುತ್ತಿದ್ದಾರೆ) 

ಶಂಭು :- ಇದೆಂತಹ ಗತಿ ಓದಗಿ ಬಂದಿತು ನಮಗೆ. ತಿನ್ನಲು ಒಂದು ಹೊತ್ತು ಊಟ ಕೂಡ ನನ್ನ ಮಕ್ಕಳಿಗೆ ಹಾಕದಂತಾಯಿತೇ? ಏನು ನನ್ನ ಈ ಪರಿಸ್ಥಿತಿ ಹೇಗೆ ಮಕ್ಕಳ ಹೊಟ್ಟೆ ತುಂಬಿಸಲಿ? ಯಾರು ಕೆಲಸ ನೀಡುತ್ತಿಲ್ಲವಲ್ಲ. 

(ಅಲೆಯುತ್ತಾ ಅಲೆಯುತ್ತ ಅರಮನೆಯ ಆವರಣ ತಲುಪಿದನು. ಅಲ್ಲೇ ರಾಜರ ಬಳಿ ಹೋಗಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತಾನೆ) 

ಶಂಭು :- ರಾಜರಿಗೆ ನನ್ನ ಪ್ರಾಣಮಗಳು. ಮಹಾ ರಾಜರೇ ಬರಗಾಲ ಬಂದು ನಮಗೆ ತಿನ್ನಲು ಆಹಾರವಿಲ್ಲ. ಮಾಡಲು ಕೆಲಸವಿಲ್ಲ ದಯಮಾಡಿ ಸಹಕರಿಸಿ. 

ರಾಜ :- ಮಂತ್ರಿಗಳೇ ನಮ್ಮ ಆಸ್ಥಾನದಲ್ಲಿ ಯಾವುದಾದರೂ ಕೆಲಸವಿದೆಯೇ? 

ಮಂತ್ರಿ :- ಸದ್ಯಕ್ಕೆ ಮಾಡಲು ಸಣ್ಣ ಪುಟ್ಟ ಕೆಲಸವಿದೆ ಮಹಾರಾಜ. ಆದರೆ ಅದನ್ನು ಪ್ರತಿ ದಿನವು ಇಲ್ಲೇ ಇದ್ದು ಮಾಡಾಬೇಕಾಗಿ ಬರುವುದು. ಬೇರೆಯಾರು ತಮ್ಮ ಮನೆ-ಮಠವನ್ನು ಬಿಟ್ಟು ಇಲ್ಲಿ ಬಂದಿರಲು ಒಪ್ಪುತ್ತಿಲ್ಲ. ಎಲ್ಲರೂ ಶಿವನ ಸ್ಮರಣೆಯ ಕಾರಣ ತಮ್ಮ ತಮ್ಮ ಊರುಗಳನ್ನು ಬಿಟ್ಟು ಬಂದಿರಲು ಸಾಧ್ಯ ಆಗುತ್ತಿಲ್ಲ. ಇವರಾದರು ಎಲ್ಲ ವನ್ನು ತ್ಯಜಿಸಿ ಇಲ್ಲಿ ಬಂದು ಕೆಲಸ ಮಾಡಿಕೊಂಡು ಇರುತ್ತಾರೆ ಎನ್ನುವುದಾದರೆ ನಮಗೆ ಯಾವುದೇ ಅಭ್ಯಂತರ ಇಲ್ಲ ಮಹಾರಾಜ. 

ರಾಜ :- ಸರಿ ಹಾಗಾದರೆ ಮಂತ್ರಿಗಳು ಹೇಳಿದಂತೆ ನಿನಗೆ ಆ ಕೆಲಸವೂ ಒಪ್ಪಿಗೆ ಇದ್ದರೆ ನಿನ್ನವರನ್ನೆಲ್ಲ ಕರೆತಂದು ಇಲ್ಲಿಯೇ ಉಳಿದುಕೊಳ್ಳಬಹುದು. 

ಶಂಭು :- ಸರಿ ಮಹಾರಾಜ ಎಲ್ಲಾ ತಮ್ಮ ದಯೆ. 


(ಎಲ್ಲರೂ ತೆರಳುವರು) 

ಪರದೆ - 4


ಶಂಭು :- (ಹೆಂಡತಿಯ ಬಳಿ) ಬಟ್ಟೆ-ಬರೆ ಎಲ್ಲವನ್ನೂ ಚೀಲಗಳಲ್ಲಿ ತುಂಬಿಕೊ ನಾನು ಹೋಗಿ ಗಾಡಿ ತೆಗೆದುಕೊಂಡು ಬರುವೆ. 

ಅಂಬಿಕಾ :- ಯಾಕೆ ಸ್ವಾಮಿ. ನಾವೆಲ್ಲರೂ ಎಲ್ಲಿಗೆ ಹೋಗಬೇಕಿದೆ? ಮೊದಲೇ ಬರಗಾಲ ಬಂದು ತಿನ್ನಲು ತುತ್ತು ಅನ್ನ ಕೂಡ ಇಲ್ಲ. ಇಂತಹ ಸಮಯದಲ್ಲಿ ನಮಗೆ ತಿರುಗಾಟದ ಅವಶ್ಯಕತೆ ಇದೆಯೇ?. ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ತಿರುಗಾಟದ ಅವಶ್ಯಕತೆ ಏನಿದೆ?. 

ಶಂಭು :- ನಿನಗೆ ಎಲ್ಲದರಲ್ಲೂ ಅವಸರ. ನಾವು ಹೊರಡುತ್ತೀರುವುದು ತಿರುಗಾಟಕ್ಕಲ್ಲ. ರಾಜರನ್ನು ಭೇಟಿ ಮಾಡಿ ಬಂದೆ. ಅಲ್ಲಿ ನಮಗೆ ಮಾಡಲು ಕೆಲಸ ಮತ್ತು ತಿನ್ನಲು ಅನ್ನ ಎರಡಕ್ಕು ಕೊರತೆ ಇರುವುದಿಲ್ಲ. ನಾವೆಲ್ಲರೂ ಹೊರಡಬೇಕು. 

ಅಂಬಿಕಾ :- ಇಲ್ಲ ಸ್ವಾಮಿ. ನನಗಿದು ಯಾತಕೋ ಸರಿ ಎಂದೇನಿಸುತ್ತಿಲ್ಲ. ನಾವು ಶಿವನ ಆರಾದಕರು, ಹೇಗೆ ಸ್ವಾಮಿ ಅವನ ಆರಾಧನೆ ಇಲ್ಲದೆ ಬೇರೆಡೆ ಹೋಗಿ ಕೆಲಸ ಮಾಡಿ ಬದುಕುವುದು? ನನಗಿದು ಯಾತಕ್ಕೋ ಸರಿ ಎನಿಸುತ್ತಿಲ್ಲ. ನಾವುಗಳು ನಮ್ಮ ಗುರುಗಳ ಬಳಿ ಒಮ್ಮೆ ಕೇಳಿ ನಂತರ ಬೇಕಾದರೆ ಹೋಗೋಣ. 

ಶಂಭು :- ಸರಿ ತಪ್ಪು ಎಂದು ಕುಳಿತರೆ ಹೊಟ್ಟೆ ತುಂಬುವುದೇ? ನಾವು ಕೇಳುತ್ತಾ ಕುಳಿತರೆ ಆ ಕೆಲಸ ಬೇರೆ ಯಾರದೋ ಪಲಾದರೆ?! ಆದ ಕಾರಣ ನಾವು ಈಗಲೇ ಹೊರಡಬೇಕು. ಎಲ್ಲ ಸಿದ್ಧತೆ ಮಾಡು. 

(ಇಷ್ಟ ಇಲ್ಲದೆ ಉಳಿದರೂ ಬೇರೆ ದಾರಿ ಇಲ್ಲದೆ ಅಲ್ಲಿಂದ ಎಲ್ಲರೂ ಪ್ರಯಾಣ ಬೆಳೆಸಿದರು. ಹೀಗೆ ಅಲ್ಲಿಂದ ಹೊರಟ ಅವರು ಅಲ್ಲಿಯೇ ಕೆಲಸ ಮಾಡಿಕೊಂಡು ಅಕ್ಕ ಪಕ್ಕದ ಊರುಗಳಲ್ಲಿ ಇರುವ ಬೇರೆ ಬೇರೆ ಕೆಲಸಗಳನ್ನು ಹುಡುಕಿ ಬೇರೆಡೆ ನೆಲೆಯಾದರು.) 


(ದಿನ ಕಳೆದಂತೆ ಮಕ್ಕಳೆಲ್ಲರೂ ಬೆಳೆದರು. ಮೊದಲನೇ ಮಗ ಪ್ರದೀಪ ಓದಿನಲ್ಲಿ ತುಂಬಾ ನಿಪುಣನಾಗಿದ್ದ. ಎರಡನೇ ಮಗ ವಿನಯ ವ್ಯವಹಾರದಲ್ಲಿ ಬಹಳ ಚತುರ)

ಪರದೆ - 5

ತುಂಬು ಕುಟುಂಬ ಒಟ್ಟಾಗಿ ಕುಳಿತಿದ್ದರು. 

ಶಂಭು :- ನಮ್ಮ ದೊಡ್ಡ ಮಗ ಎಷ್ಟೇ ಚೆನ್ನಾಗಿ ಓದಿದರು ಅವನಿಗೆ ಜೀವನದಲ್ಲಿ ಒಳ್ಳೆಯ ಕೆಲಸ ದೊರೆಯುತ್ತಿಲ್ಲ. ಎಷ್ಟೇ ಕಲಿತರು ಅವನಿಗೆ ಅವನ ಬುದ್ಧಿಯ ಸದುಪಯೋಗ ಆಗುತ್ತಿಲ್ಲವಲ್ಲ. ನಾವು ಯಾವುದಾದರು ತಪ್ಪು ಮಾಡಿದ್ದೇವೆಯೆ? 

ಅಂಬಿಕಾ :- ಯಾಕೆ ಸ್ವಾಮಿ ಈ ಗೊಂದಲ. ನನಗೂ ನಮ್ಮ ಎರಡನೇ ಮಗನ ಕುರಿತು ಅದೇ ಆಲೋಚನೆ ತಲೆಯಲ್ಲಿ. ದಿನ ನಿತ್ಯ ಎಷ್ಟೇ ಕಷ್ಟ ಪಟ್ಟರು ಯಾವುದೇ ವ್ಯವಹಾರ ಮಾಡಿದರು ಅವನಿಗೆ ಒಂದು ಕಡೆ ನಿಲ್ಲಲು ಆಗುತ್ತಿಲ್ಲ. 


(ಮಕ್ಕಳೆಲ್ಲಾ ಸಣ್ಣ ಪುಟ್ಟ ಕೆಲಸವನ್ನು ಮಾಡಿಕೊಂಡೇ ದೊಡ್ಡವರಾದರು. ಹಾಗೆ ಇಬ್ಬರಿಗೂ ಮದುವೆ ಆಯಿತು. ಮೊದಲನೇ ಮಗನ ಹೆಂಡತಿ ನಂದಿನಿ ಎರಡನೇ ಪುತ್ರನ ಹೆಂಡತಿಯ ಹೆಸರು ಶೋಭಿಕಾ ಅವರ ದಾಂಪತ್ಯ ಕೂಡ ತುಂಬಾ ಸುಖವಾಗಿ ನಡೆಯುತ್ತ ಇತ್ತು. ಒಬ್ಬನಿಗೆ ಎರಡು ಮಕ್ಕಳು ಮತ್ತೆ ಇನ್ನೋರ್ವನಿಗೆ ಒಂದು ಮಗು)


[ಮೊದಲನೇ ಮಗ ಮತ್ತು ಅವನ ಕುಟುಂಬ]

ಪ್ರದೀಪ :- ಮಕ್ಕಳಿಬ್ಬರು ಬೆಳೆಯುತ್ತಾ ಬರುತ್ತಿದ್ದಾರೆ. ಅವರನ್ನು ಕನ್ನಡ ಮಿಡಿಯಂ ಸೇರಿಸೋಣ್ವ? ಇಂಗ್ಲಿಷ್ ಮಿಡಿಯಂ ಸೇರಿಸೋಣ್ವ?

ನಂದಿನಿ :- ಪಕ್ಕದ ಮನೆ ಕಮಲಕ್ಕ ತನ್ನ ಮಕ್ಕಳಿಗೆ ಇಂಗ್ಲಿಷ್ ಮೀಡಿಯಂಗೆ ಸೇರಿದ್ದಾರೆ. ನಾವು ಅದಕ್ಕೆ ಸೇರಿಸಬೇಕು.

ಪ್ರದೀಪ :- ಸರಿ ನೀನು ಯಾವ ಸ್ಕೂಲ್ ಚನ್ನಾಗಿದೆ ಅಂತ ನೋಡು. ನಾನು ದುಡ್ಡು ಹೊಂದಿಸಿಕೊಂಡು ಬರ್ತಿನಿ.


ಪರದೆ - 6

(ಮಕ್ಕಳೆಲ್ಲಾ ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ, ಯಾರಿಗೂ ವಿದ್ಯೆ ಅಷ್ಟೊಂದು ಚೆನ್ನಾಗಿ ಹತ್ತುತ್ತಾ ಇರಲಿಲ್ಲ. ಹಾಗೆ ಶಾಲೆಗೆ ಕಟ್ಟ ಬೇಕಾದ ಹಣ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಬೇಸತ್ತ ತಂದೆ ಒಂದು ಪೂಜೆ ಮಾಡಿಸಿಕೊಂಡು ಬರೋಣ ಅಂತ ಹೇಳಿ ಒಂದು ದೇವಸ್ಥಾನಕ್ಕೆ ತೆರಳುತ್ತಾನೆ. )

ಪ್ರದೀಪ :- ಪುರೋಹಿತರೆ ನನ್ನ ಮಕ್ಕಳೆಲ್ಲರ ಜಾತಕವಿದು ಆದರೆ ಯಾರಿಗೂ ವಿದ್ಯೆ ಸರಿಯಾಗಿ ಹತ್ತುತ್ತಿಲ್ಲ. ನಮಗೂ ಮಾಡುವ ಕೆಲಸದಲ್ಲಿ ಅಷ್ಟೊಂದು ಏಳಿಗೆ ಕಾಣಿಸುತ್ತಿಲ್ಲ.

ಪುರೋಹಿತರು :- ಸರಿ ನಾಳೆ ಬನ್ನಿ ಒಂದು ಹೋಮ ಮಾಡಿ ನೋಡೋಣ. ಎಲ್ಲಾ ಸರಿ ಹೋಗುತ್ತದೆ.

ಪ್ರದೀಪ :- ಸರಿ ಪುರೋಹಿತರೆ. ವಂದನೆಗಳು.


(ಪ್ರದೀಪ ಅಲ್ಲಿಂದ ಹೊರಟು ಮಾರನೇ ದಿನ ತನ್ನ ಕುಟುಂಬದೊಂದಿಗೆ ಬರುತ್ತಾನೆ.

ಪುರೋಹಿತರು:- ಬನ್ನಿ ಎಲ್ಲರೂ ಹೋಮಕ್ಕೆ ಕುಳಿತುಕೊಳ್ಳಿ.

( ಎಲ್ಲರೂ ಕುಳಿತುಕೊಳ್ಳುವರು ಹೋಮ ಮುಗಿಯುವುದು)

ಪ್ರದೀಪ :- ಹಣವನ್ನು ಕೊಟ್ಟು ಪುರೋಹಿತರ ಆಶೀರ್ವಾದ ಪಡೆದು ಅಲ್ಲಿಂದ ಹೊರಡುವನು


ಪರದೆ - 7

(ಗಂಡ ಹೆಂಡತಿ ಇಬ್ಬರೂ ಮಾತನಾಡುತ್ತಿದ್ದಾರೆ.)

 ನಂದಿನಿ :- ನಮ್ಮ ಅಕ್ಕ ಪಕ್ಕದವರು ಎಲ್ಲರು ಯಾವುದೇ ಸಮಸ್ಯೆ ಇಲ್ಲದೆ ಚೆನ್ನಾಗಿ ಬದುಕುತ್ತಿದ್ದಾರೆ. ಆದರೆ ನಮಗೆ ಮಾತ್ರ ಯಾಕೆ ಇಂಥ ಪರಿಸ್ಥಿತಿ. ಹೋಮ ಹವನ ಎಲ್ಲವನ್ನೂ ಮಾಡಿ ಆಯಿತು. ಆದರು ಮಕ್ಕಳ ವಿದ್ಯಾಭ್ಯಾಸ ಸರಿ ಹೋಗುತ್ತಿಲ್ಲ. ನಾವು ಮಾಡುತ್ತಿರುವ ಕೆಲಸವೂ ಕೈ ಹಿಡಿಯುತ್ತಿಲ್ಲ.


(ನಾಲ್ಕೈದು ಜನ ಶಿವ ಶರಣರು ಶಿವ ಶಿವ ಎಂದರೆ ಭಯವಿಲ್ಲ ಎಂದು ಹಾಡನ್ನು ಹೇಳುತ್ತಾ ಬರುತ್ತಿದ್ದರು)

 ಹಾಗೆ ಬರುತ್ತಾ ಇರುವವರ ಆಶೀರ್ವಾದ ಪಡೆದು ತಮ್ಮ ದುಃಖವನ್ನೆಲ್ಲ ಅವರಿಗೆ ಹೇಳಿಕೊಳ್ಳುವರು. ಆಗ ಆ ಶಿವ ಶರಣರು ಇವರಿಗೆ ಹೇಳುತ್ತಾರೆ,


ಶಿವ ಶರಣ1:- ನಿಮ್ಮ ಗುರುಗಳು ಯಾರು?

ಶಿವ ಶರಣ2:- ನಿಮಗೆ ಗುರುವಿನ ಸಂಪೂರ್ಣ ಆಶೀರ್ವಾದ ಬೇಕಿದೆ. 

ಶಿವ ಶರಣ3:- ನೀವು ನಿಮ್ಮ ಮಠವನ್ನು ಭೇಟಿ ಮಾಡಿ ನಿಮ್ಮ ಗುರುಗಳ ಆಶೀರ್ವಾದ ಪಡೆದರೆ ಎಲ್ಲವೂ ದೂರವಾಗುವುದು. ಪ್ರತಿ ಮನುಷ್ಯನ ಜೀವನದಲ್ಲಿ ಗುರುವಿನ ಪ್ರಾಮುಖ್ಯತೆ ತುಂಬಾ ಪ್ರಮುಖ. ಆದರೆ ಬಹಳಷ್ಟು ಜನರಿಗೆ ತಿಳಿದಿಲ್ಲ. ನೀವು ಬೇಕಾದರೆ ನೋಡಿ ಬ್ರಾಹ್ಮಣರೆಲ್ಲರು ಎಂದಾದರೂ ತಮ್ಮ ಗುರುಗಳ ಆಶೀರ್ವಾದ ಪಡೆಯದೆ ಮುಂದೆ ಸಾಗುವರೇ? ಗುರುವಿನ ಮಹತ್ವ ತುಂಬಾ ಅಗತ್ಯ. ಮುಂದೆ ಗುರಿ ಇದೆ ನಿಮ್ಮಲ್ಲಿ ಆದರೆ ನಿಮಗೆ ಮಾರ್ಗದರ್ಶನ ಮಾಡುವ ಗುರುವನ್ನು ನೀವು ಮರೆತರೆ ನಿಮ್ಮ ಗುರಿ ನೀವು ಹೇಗೆ ತಲುಪುವಿರಿ?. 

ಶಿವ ಶರಣ4:- ಹೌದಮ್ಮ. ಮುಂದೆ ಗುರಿ ಇದ್ದರೆ ಮಾತ್ರ ಸಾಲದು ಹಿಂದೆ ಗುರು ಎಂದೆಂದಿಗೂ ಇರಲೇ ಬೇಕು. ಗುರು ಇಲ್ಲದೆ ಯಾವ ಕೆಲಸವು ಪೂರ್ಣಾವಲ್ಲ.

ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಹಃ. ಎಂದು ಕೇಳಿಲ್ಲವೆ? 

ಈ ಪ್ರಪಂಚದಲ್ಲಿ ಗುರುಗಳೇ ನಮಗೆ ಕಣ್ಣಿಗೆ ಕಾಣುವ ದೇವರು. 

ಶಿವ ಶರಣ3: ಸೋಲಿನಿಂದ ಗೆಲುವಿನೆಡೆಗೆ, ಕತ್ತಲಿಂದ ಬೆಳಕಿನಡೆಗೆ.

ಪ್ರೀತಿಯಿಂದ ನೀತಿವರೆಗೆ, ಧರ್ಮದಿಂದ ಕರ್ಮದರೆಗೆ. ಜಾಣ್ಮೆ - ಪ್ರತಿಭೆ, ಆಲೋಚನೆ - ಸಮಾಲೋಚನೆ. ಎಲ್ಲವನ್ನೂ ತಿಳಿಸುವ ಗುರುಗಳ ಆಶೀರ್ವಾದ ಯಾರಿಗೆ ಸದಾ ಇರುತ್ತದೆಯೋ ಅವರು ಜೀವನಲ್ಲಿ ಯಾವುದೇ ಕಷ್ಟ ಎದುರಾದರು ಕ್ಷಣ ಮಾತ್ರದಲ್ಲಿ ಕಷ್ಟದಿಂದ ದೂರಾಗುವರು.

(ಇತ್ತ ಪತಿ - ಪತ್ನಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ ಶಿವ ಶರಣರಿಗೆ ನಮಸ್ಕಾರಿಸಿ ಧನ್ಯವಾದ ಅರ್ಪಿಸಿದರು.) 


ಪರದೆ - 8 

(ಊಟಕ್ಕೆ ಕುಳಿತ ಪತಿ - ಪತ್ನಿ) 

ನಂದಿನಿ :- ಹೌದು ಸ್ವಾಮಿ ನಮಗೆ ಗುರುಗಳಿದ್ದಾರೆಯೇ? ನಮಗೂ ಒಂದು ಮಠವಿದೆಯೇ? 

ಪ್ರದೀಪ :- ಹೌದು. ನಮಗೆ ಮಾತ್ರ ಎಂದಲ್ಲ. ನಮ್ಮ ಸಮುದಾಯಕ್ಕೆ ಸಂಬಂಧಿಸಿದ ಹಾಗೆ ನಮ್ಮ ಸಮುದಾಯಕ್ಕೆಂದೆ ಒಂದು ಮಠವಿದೆ. ಅಲ್ಲಿ ನಮ್ಮ ಗುರುಗಳಿದ್ದಾರೆ. ನಾವೆಲ್ಲರೂ ಅದನ್ನು ಬಿಟ್ಟು ಬಂದು ಬಹಳ ವರ್ಷವಾಗಿದೆ. ಆಗಾಗ ನಮ್ಮ ತಂದೆ ಹೇಳುತ್ತಿದ್ದರು ನಾವೆಲ್ಲರೂ ಗುರು ಶಾಪಕ್ಕೆ ಒಳಗಾದವರು ಎಂದು. 

ನಂದಿನಿ :- ಗುರು ಶಾಪವೇ? ಹೇಗೆ ಸ್ವಾಮಿ ಇದರ ಪರಿಹಾರ? 

ಪ್ರದೀಪ :- ನಮ್ಮ ತಂದೆ ಹೇಳಿದ ಪ್ರಕಾರ ನಾವು ಮತ್ತೆ ನಮ್ಮ ಗುರುಗಳ ಪಾದಗಳಿಗೆ ಕ್ಷೀರಬಾಗಬೇಕು ಗುರುಗಳ ಸಂಪೂರ್ಣ ಆಶೀರ್ವಾದ ಪಡೆದು ಆ ಗುರು ಶಾಪದಿಂದ ಮುಕ್ತರಾಗಬೇಕು. 

ನಂದಿನಿ :- ಗುರುಗಳ ಆಶೀರ್ವಾದ ಪಡೆದರೆ ಎಲ್ಲವೂ ಸರಿ ಹೋಗುವುದಾದರೆ, ಮತ್ತಿನ್ನೆಕೆ ವಿಳಂಬ? ಹೋರಡೋಣ ಬನ್ನಿ ನಾವೆಲ್ಲರೂ ಅಲ್ಲಿಗೆ. 

ಪ್ರದೀಪ :- ಸರಿ ಹಾಗಾದರೆ. ಹೋರಡಲು ಸಿದ್ಧವಾಗು. ನಾಳೆಯೆ ಶಿವರಾತ್ರಿ ನಾವೆಲ್ಲರೂ ಶಿವ ಶರಣರಾಗಿದ್ದೆವು ನಾಳೆಗಿಂತ ಒಳ್ಳೆಯ ದಿನ ಬೇಕೇ? ಹೋಗಿ ನಮ್ಮ ಗುರುಗಳ ಆಶೀರ್ವಾದ ಪಡೆದು ಬರೋಣ. 

ನಂದಿನಿ :- ಸರಿ ಸ್ವಾಮಿ. 


ಪರದೆ - 9

(ಮಠದ ವಾತಾವರಣ. ಎಲ್ಲರೂ ಕುಳಿತಿದ್ದಾರೆ ಶಿವನ ಭಕ್ತಿಯಲ್ಲಿ ಮೈ ಮರೆತಿದ್ದಾರೆ.) 


ಗುರುಗಳು ಬರುತ್ತಿದ್ದಾರೆ, ಎಲ್ಲರೂ ಅವರ ಪಾದಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆಯುತ್ತಿದ್ದಾರೆ.

ಇತ್ತ ಕಡೆ ಮಠವನ್ನು ನೋಡುತ್ತ ತನ್ನ ಬಾಲ್ಯದ ದಿನಗಳ ನೆನಪು ಮಾಡಿಕೊಂಡು ಗುರುಗಳ ಬಳಿ ಬಂದು ಅವರ ಆಶೀರ್ವಾದ ಪಡೆಯುತ್ತಾರೆ.


ಪರದೆ - 10

ನಂದಿನಿ :- ನಮ್ಮ ಜೀವನ ಹೇಗೆ ಬದಲಾಯಿತಲ್ಲವೆ ಸ್ವಾಮಿ. ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ಹೊಸ ಚೈತನ್ಯ ತುಂಬಿದ ಜೀವನ. ಅದಕ್ಕೆ ದೊಡ್ಡೋರು ಹೇಳಿದ್ದು ಅನ್ಸುತ್ತೆ ಮುಂದೆ ಗುರಿ ಹಿಂದೆ ಗುರು ಇರಬೇಕು ಅಂತ.

ಪ್ರದೀಪ :- ನಿಜ ನಿಜ. ಮುಂದೆ ಗುರಿ ಇದ್ದ ನಮಗೆ ಹಿಂದೆ ಗುರುವಿಲ್ಲದೆ ಅದೆಷ್ಟೋ ನೋವುಗಳು ನಮ್ಮನ್ನು ಕಾಡಿದವು ಆದರೆ ಇಂದು ನಾವು ಗುರುಗಳ ಆಶೀರ್ವಾದದಿಂದ ಎಲ್ಲದರಲ್ಲೂ ಏಳಿಗೆ ನೋಡುತ್ತಿದ್ದೇವೆ. 


Rate this content
Log in

More kannada story from ಚಿರು ಕನ್ನಡಿಗ ( Chiranjeevi P)

Similar kannada story from Drama