ಚಿರು ಕನ್ನಡಿಗ ( Chiru)

Inspirational Others

3  

ಚಿರು ಕನ್ನಡಿಗ ( Chiru)

Inspirational Others

ಮಾನವೀಯತೆ?!

ಮಾನವೀಯತೆ?!

2 mins
511



ನಾವು ಎಂತಹ ಒಂದು ಜಗತ್ತಿನಲ್ಲಿ ಬದುಕುತ್ತಾ ಇರುವೆವು ಎಂದರೇ, ನಮ್ಮಲ್ಲಿ ನಿಜವಾಗಿಯೂ ಮಾನವೀಯತೆ ಇದೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸುವಂತಹ ಒಂದು ವಾತಾವರಣವನ್ನು ಹುಟ್ಟಿ ಹಾಕಿಕೊಂಡು ಬದುಕು ನಡೆಸುತ್ತಾ ಬರುತ್ತಿದ್ದೇವೆ. ನಮಗೆ ತಿನ್ನಲು ರುಚಿ ರುಚಿಯಾದ ತಿಂಡಿ - ತಿನಿಸುಗಳು ಬೇಕು. ಆಡಂಬರದ ಜೀವನ ಬೇಕು. ಒಳ್ಳೆಯ ಶಾಲೆಗಳಲ್ಲಿ ಶಿಕ್ಷಣ ಬೇಕು. ನಮ್ಮ ದೇಶದಲ್ಲಿ ಅರ್ಧದಷ್ಟು ಹಣ ನಮ್ಮ ದೇಶದ ಮೊದಲ ನೂರು ಶ್ರೀಮಂತರಲ್ಲಿಯೇ ಇದೆ. ಕೊಡುವ ಮನಸ್ಸು ಇರುವವರಲ್ಲಿ ಕೊಡಲು ಏನೂ ಇಲ್ಲಾ, ಎಲ್ಲಾ ಇರುವವನಿಗೆ ಕೊಡಬೇಕು ಎನ್ನುವ ಮನಸೇ ಇರುವುದಿಲ್ಲ. ನಾವು ಎಲ್ಲದಕ್ಕೂ ವ್ಯಯ ಮಾಡುತ್ತೇವೆ ಆದರೆ ನಿಜವಾಗಲೂ ಯಾವುದಕ್ಕೆ ಎಷ್ಟು ವ್ಯಯ ಮಾಡಬೇಕು ಎನ್ನುವುದು ಮರೆತುಬಿಡುತ್ತೇವೆ. ನಾವು 10 ರೂಪಾಯಿ ತೆಗೆದು ಕೈ ನೀಡಿ ಬೇಡಿದವರಿಗೆ ಕೊಟ್ಟರೆ ಪಕ್ಕದಲ್ಲಿ ಇದ್ದವನು ಹೇಳುತ್ತಾನೆ, "ನಿಮಗೇನು ದುಡ್ಡು ಹೆಚ್ಚಾಗಿದಿಯಾ ಎಂದು, ಇನ್ನೊಬ್ಬಾತ ಹೇಳುತ್ತಾನೆ ಸಾರ್ ಇದೆಲ್ಲಾ ನಾಟಕ ಕೊಡಬೇಡಿ ಅವರಿಗೆ" ಎಂದು. ಇದನ್ನೆಲ್ಲ ಕೇಳಿದರೆ ನನ್ನ ಮನಸ್ಸಲ್ಲಿ ಮೂಡುವ ಪ್ರಶ್ನೆ ಒಂದೇ, ನನ್ನ ಹತ್ತು ರೂಪಾಯಿ ಮೌಲ್ಯವನ್ನು ಪಡೆದವರು ಮನೆಯನ್ನು ಕಟ್ಟಿ ಕೊಳ್ಳುವರೇ? ಅವನು ಸುಳ್ಳೆ ಹೇಳಿದ್ದರು ಅವನಿಗೆ ಸುಳ್ಳು ಹೇಳಲು ಕಾರಣ ಜನರ ಒಂದು ಮನಸ್ಥಿತಿ. ಇಲ್ಲಿ ನಿಜವಾಗಲೂ ಕಷ್ಟ ಇದೆ ಎಂದರೇ ಒಂದು ಬಿಡಿಗಾಸು ಹುಟ್ಟುವುದಿಲ್ಲ. ಆ ಕಷ್ಟವನ್ನು ಬಿಡಿಸಿ ಬಿಡಿಸಿ ಹೇಳಿದರೆ ಬಹುಶಃ ಚೂರಾದರು ಅವನಲ್ಲಿ ಸತ್ತ ಆ ಒಂದು ಮಾನವೀಯತೆ ಮತ್ತೆ ಮರುಕಳಿಸು ಬಹುದು. ನಮಗೆ ಎರಡು ಕಿ ಮೀ ನಡೆಯಲು 40 ರೂಪಾಯಿ ಆಟೊ ಚಾಲಕರಿಗೆ ನೀಡಲು ಗೊತ್ತಿದೆ. ಒಬ್ಬರು ಕೈ ನೀಡಿ ಹಸಿವು ಎಂದು ಬೇಡಿದರೇ ಅದನ್ನು ನಿರ್ಲಕ್ಷಿಸಿ ನಮ್ಮ ಹೊಟ್ಟೆಗೆ ರುಚಿ ರುಚಿಯಾದ ತಿನಿಸುಗಳನ್ನು ತುಂಬಿಸುವುದು ಗೊತ್ತಿದೆ. ಆದರೆ, ಆ ಒಂದು ಬಿಡಿಗಾಸಿನಲ್ಲಿ ಇನ್ನೊಬ್ಬರಿಗೆ ಎಷ್ಟೋ ದಿನದ ಹಸಿವು ನಿಗಾಬಹುದು. ಜಗತ್ತಿನಲ್ಲಿ ಅತಿ ಕ್ರೂರಿ ಎಂದರೆ ಹಸಿವು. ನಮ್ಮ ದೇಶದ ಜನರ ಮನೋಭಾವ ಬದಲಾಗದೆ ಹೋದಲ್ಲಿ ಯಾವ ಬದಲಾವಣೆಯು ಕನಸಿನ ಕಲ್ಪನೆಗೆ ಸಮಾನ. *ಸರ್ವ ದಾನಗಳಲ್ಲು ಶ್ರೇಷ್ಠವಾದ ದಾನ, ಅನ್ನದಾನ*. ಕೈಲಾದಷ್ಟು ಮಾನವಿಯನ್ನು ಹೊರಹಾಕಿ. ಮೂಢ ನಂಬಿಕೆಗಳನ್ನು ಮತ್ತು ಅಹಂಕಾರವನ್ನಲ್ಲ. ಕೊಟ್ಟವನು ಎಂದಿಗೂ ಕೆಡುವುದಿಲ್ಲ. ನೀವು ಹತ್ತು ರೂಪಾಯಿ ಕೊಟ್ಟರೆ, ಖಂಡಿತಾ ನಿಮ್ಮ ದುಡ್ಡಿನ ಬೊಕ್ಕಸಕ್ಕೆ ನಷ್ಟ ಸಂಭವಿಸುವುದಿಲ್ಲ. *ಹೌದು ಒಂದೊಂದು ಬಿಡಿಗಾಸಿಗೂ ಬೆಲೆಯಿದೆ, ಆದರೆ ನಿಜವಾಗಲೂ ನಿಮ್ಮ ಮಾನವೀಯತೆಗೆ ಮತ್ತು ನಿಮಗೆ ಅದಕ್ಕಿಂತ ಹೆಚ್ಚು ಬೆಲೆಯಿದೆ.

                          

                           


Rate this content
Log in

Similar kannada story from Inspirational