ಚಿರು ಕನ್ನಡಿಗ ( Chiru)

Inspirational Others

3  

ಚಿರು ಕನ್ನಡಿಗ ( Chiru)

Inspirational Others

ಯಾವುದು ಸರಿಯಾದ ಶಿಕ್ಷೆ?

ಯಾವುದು ಸರಿಯಾದ ಶಿಕ್ಷೆ?

2 mins
267


ನಿರ್ಭೀತಿಯಿಂದ ಜನರೆಲ್ಲಿ ಓಡಾಡುತ್ತಿರುವರು? ಎಲ್ಲರಿಗೂ ಒಂದಲ್ಲದಿದ್ದರೇ, ಇನ್ನೊಂದರ ಭಯ. ಭಯಾನಕ ಘಟನೆಗಳು ನಡೆದರೂ ನಮ್ಮ ಮಧ್ಯೆ ಯಾರಿಗಿದೆ ತಪ್ಪನ್ನು ಮಾಡುವ ಭಯ? ನಿರ್ಭಯ ಘಟನೆಯ ನಂತರವು ಬಿಡದೆ ನಡೆಯುತ್ತಿರುವ ಅತ್ಯಾಚಾರ ನನ್ನ ಈ ಒಂದು ಬರಹದ ಮೂಲ. ನಮ್ಮ ನ್ಯಾಯಾಂಗ ನಿಜವಾಗಲೂ ಸರಿಯಾಗಿ ಇದೆಯೇ? ಅಂದು ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ಸಾಕು ಅವರ ತಲೆಯನ್ನು ತೆಗೆಯುತ್ತಿದ್ದ ಕಾಲ. ಇಂದು ಒಂದು ಹೆಣ್ಣನ್ನು ನಿರ್ದೋಷಣ್ಯವಾಗಿ ಚಿತ್ರ ಹಿಂಸೆ ಮಾಡಿ ಬಲತ್ಕರಿಸಿ ಕೊಂದರು ಅವರನ್ನು ಕೆಲ ಕಾಲ ಊಟ ಹಾಕಿ ನಂತರ ಯಾವುದೇ ನೋವಿಲ್ಲದೇ ಕಣ್ಣಿಗೆ ಬಟ್ಟೆ ಕಟ್ಟಿ, ಯಾವುದೇ ಭಯವಿಲ್ಲದೆಯೇ ನಿರಾಳವಾಗಿ ಕೊಲ್ಲುವ ನಮ್ಮ ಕಾನೂನು. ಶಿಕ್ಷೆ ಇಷ್ಟೊಂದು ಸರಳವಾಗಿ ಇದ್ದರೆ ತಪ್ಪು ಮಾಡುವ ಭಯ ಹೇಗೆತಾನೆ ಹುಟ್ಟುತ್ತದೆ? ನಮ್ಮ ನ್ಯಾಯಾಂಗ ಕದ್ದು ತಿನ್ನುವನ್ನು ಬೇಕಾದರೂ ಮನ್ನಿಸಲಿ, ಸಾದಾರಣ ದಂಡನೇ ನೀಡಲಿ. ಆದರೆ, ನಮ್ಮ ದೇಶ, ನಮ್ಮ ಭೂಮಿ, ನಮ್ಮ ಕಾಡು ನಾಡಿಗೆ ಹೋಲಿಸುವ ಸ್ತ್ರೀಯನ್ನು ಕೆಟ್ಟದಾಗಿ ನೋಡಿದರೆ, ಬಲತ್ಕಾರದಂತಹ ಗೋರ ಅಪರಾಧವನ್ನು ಮಾಡಿದರೆ ನೀಡುವ ಶಿಕ್ಷೆ, ಸಾವನ್ನೆ ಹೆದರಿಸುವಂತಾಗಬೇಕು. ನೇತ್ತರವ ಭಸಿದೆಮಗೆ ಜನ್ಮವನು ನೀಡುವ ದೇವತೆ ಒಂದು ಹೆಣ್ಣಾಗಿರುವಾಗ ಒಂದು ಹೆಣ್ಣಿನ ನೆತ್ತರಿನಲ್ಲಿ ಆಟ ಆಡಲು ಬಯಸುವವರನ್ನು ಅನ್ನ ಹಾಕಿ ಜೈಲಿನಲ್ಲಿಟ್ಟು ಕಾಪಾಡಿ ನಂತರ ಒಂದು ಸಮಯ ಸಂದರ್ಭ ನೋಡಿ ನೇಣಿಗೆ ಹಾಕುವುದಲ್ಲ, ಅದರ ಹೊರತಾಗಿ ಅವರ ಸಾವು ಕೂಡ ಆ ಸಾವಿನಿಂದ ಭಯ ಬೀಳಬೇಕು. ಬಡವರಾಗಲಿ, ಶ್ರೀಮಂತರಾಗಲಿ ಯಾರೇ ಆದರು ಒಂದು ಹೆಣ್ಣನ್ನು ಸುಮ್ಮನೆಯಾದರು ಮುಟ್ಟುವಲ್ಲಿ ಭಯ ಬೀಳುವ ಸಂದರ್ಭ ಬಾರದೇ ಹೋದಲ್ಲಿ ಇಂದು ಆಗೊಂದು- ಇಗೊಂದು ಎನ್ನುವ ಭಲತ್ಕಾರದ ಪಟ್ಟಿ ದಿನಕ್ಕೊಂದು ಆಗುವ ಸಂದೇಹವೇ ಇಲ್ಲಾ. ಇಲ್ಲಿ ಸಾವಿನ ನಂತರ ನಾವು ಹಚ್ಚುವ ಕ್ಯಾಂಡಲ್ ನಿಂದ ಅಥಾವ ಹಾಕುವ ಸ್ಟೇಟಸ್ ನಿಂದ ಆ ಹೆಣ್ಣಿಗೆ ಅವಳ ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ. ಮೊನ್ನೆ ನಡೆದ ಘಟನೆ, ನಾಲಿಗೆ ಕತ್ತರಿಸಿ, ಕುತ್ತಿಗೆಯ ಮೂಳೆ ಮುರಿದು ಮೈ ಕೈ ಎಲ್ಲ ಗಾಯಗೊಳಿಸಿ ರಾಕ್ಷಸರು ಆ ಒಂದು ಹೆಣ್ಣನ್ನು ಚಿತ್ರ ಹಿಂಸೆ ಮಾಡಿ ಕೊಂದರೇ, ಅವರಿಗೆ ನೀಡುವ ಶಿಕ್ಷೆ ಹೆಚ್ಚೆಂದರೆ ಕಣ್ಣನ್ನು ಕಪ್ಪು ಬಟ್ಟೆಯಲ್ಲಿ ಮುಚ್ಚಿ ಯಾವುದೇ ಅತಿಯಾದ ಹಿಂಸೆ ಇಲ್ಲದೆಯೆ ಹಗ್ಗದಲ್ಲಿ ನೇಣು ಹಾಕುವುದು. ಹೇಗೆತಾನೆ ಇಷ್ಟಕ್ಕೆ ಈಗಿನ ಪ್ರಪಂಚದಲ್ಲಿ ಜನ ಹೆದರಿಕೆಯನ್ನು ತೋರುವರು? ಇಂತಹ ಕ್ರೂರಿಗಳ ಶಿಕ್ಷೆ ನಮ್ಮ ವ್ಯವಸ್ಥೆಯಲ್ಲಿ ಬದಲಾಗದೆ ಹೋದಲ್ಲಿ ಜನ ಭಯಬೀತರಾಗುವುದಿಲ್ಲ. ಹೆಣ್ಣನ್ನು ಬಲತ್ಕರಿಸಿದವರ ಸಾವು ಕೇವಲ ಸಣ್ಣ ಸರಳವಾದ ಸಾವು ಆಗದೆ ಉಳಿಯಬೇಕು. ಎಲ್ಲರಿಗೂ ಪರಿಪೂರ್ಣ ಪರಿಪಾಠವಾಗಬೇಕು. *ಒಮ್ಮೆ ನಮ್ಮ ನ್ಯಾಯಾಂಗದ ಕೆಲವು ಶಿಕ್ಷೆಗಳ ಬದಲಾವಣೆ ಆಗಲಿ*


Rate this content
Log in

Similar kannada story from Inspirational