Gireesh pm Giree

Abstract Action Inspirational

4  

Gireesh pm Giree

Abstract Action Inspirational

ಎರಡು ರೂಪಾಯಿ

ಎರಡು ರೂಪಾಯಿ

2 mins
413



ಬಸ್ ಪಯಣ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿಯಾದರೂ ಬಸ್ನಲ್ಲಿ ಪಯಣಿಸಿ ಇರುತ್ತಾರೆ. ನನಗೂ ಬಸ್ಸು ಬಾಲ್ಯದಿಂದಲೇ ಒಡನಾಟ ಇತ್ತು. ಯಾಕೆಂದರೆ ನಮಗೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಬಸ್ಸು ಅಗ್ಗದ ದರದಲ್ಲಿ ನಮ್ಮ ತಲುಪಿಸುತ್ತಿತ್ತು. ನನ್ನ ಹೈಸ್ಕೂಲ್ ಶಿಕ್ಷಣ ಕೇಂದ್ರ ಹತ್ತಿರದ ನಗರದಲ್ಲಿತ್ತು. ಅಲ್ಲಿಗೆ ಹೋಗಲು ಬಸ್ಸನ್ನು ಹತ್ತದೇ ಬೇರೆ ವಿಧಿ ಇಲ್ಲ. ಆಟೋ ಇದ್ದರು ಹೋಗುವಷ್ಟು ಕಾಸು ಇರಲಿಲ್ಲ.

ಬಸ್ ಸ್ಟ್ಯಾಂಡಿಗೆ ಮುಂಜಾನೆಯೇ ಹೋಗುತ್ತಿದ್ದೆ ಇದರ ಹಿಂದೆ ಒಂದು ಬಲವಾದ ಕಾರಣವೂ ಇತ್ತು. ಆ ಸಮಯ ಪ್ರಯಾಣಿಕರ ಸಂಖ್ಯೆ ಬಹಳ ವಿರಳ. ಇನ್ನು ಆರಾಮವಾಗಿ ಸೀಟಲ್ಲಿ ಹಾಯಾಗಿ ನಿದ್ರಿಸಿಕೊಂಡೆ ಹಾಕಬಹುದೆಂಬ ಲೆಕ್ಕಚಾರ. ಇನ್ನು ಆರಾಮವಾಗಿ ಸೀಟಲ್ಲಿ ಹಾಯಾಗಿ ನಿದ್ರಿಸಿ ಕೊಂಡೆ ಹೋಗಬಹುದೆಂಬ ಲೆಕ್ಕಚಾರ. ನಾನು ಹೆಚ್ಚಾಗಿ ಖಾಸಗಿ ಬಸ್ಸನ್ನೇ ಅವಲಂಬಿಸುತ್ತಿದೆ ಯಾಕೆಂದರೆ ಅದಕ್ಕೆ ಎರಡರ ನಾಣ್ಯ ಕೊಟ್ಟರೆ ಸಾಕಿತ್ತು. ಕೆಲವೊಂದು ಬಾರಿ ಹಾಗೆಯೇ ಉಚಿತ ಪ್ರಯಾಣ ಮಾಡಿದ್ದು ಇದೆ. ಆದರೆ ಉಚಿತವಾಗಿ ಪಯಣಿಸಿದ ಉದಾಹರಣೆಗಳು ಕಡಿಮೆ ಯಾಕೆಂದರೆ ಕಂಡಕ್ಟರನ ಕಣ್ಣು ಹದ್ದಿನಂತೆ ತೀಕ್ಷ್ಣವಾಗಿತ್ತು. ಅವನಿಂದ ಬಚಾವಾಗುವುದು ಸ್ವಲ್ಪ ಕಷ್ಟವೇ ಸರಿ. ಶಾಲೆಯ ಸಮವಸ್ತ್ರ ಇದ್ದರೂ ಪಾಸ್ ಇಲ್ಲದಿದ್ದರೆ ಎರಡು ರುಪಾಯಿ ತೆಗೆಯುತ್ತಿರಲಿಲ್ಲ. ಕೆಲವು ಬಾರಿ ನಾನು ಪಾಸ್ ಮರೆತು ಫುಲ್ ಟಿಕೆಟ್ ಕೊಟ್ಟ ಚರಿತ್ರೆಯು ಇದೆ.


ಹೀಗೆ ಟಿಕೆಟ್ ಕೊಡುವವನ ಕಾಯಕ ಒಂದುಕಡೆಯಾದ್ರೆ ವಿಂಡೋ ಸೀಟಿಗಾಗಿ ನಮ್ಮಲಿ ಧಾವಂತ . ಅಲ್ಲಿ ಕುಳಿತುಕೊಂಡರೆ ಸ್ವರ್ಗ ಸುಖ. ನಿದ್ರೆಯ ಅನ್ವೇಷಣೆಯ ಮಾಡಬಹುದಲ್ಲವೇ ಎಂಬ ಉತ್ಸಾಹ ಆನಂದ. ಆದರೆ ಕಂಡಕ್ಟರ್ ಗೆ ಕೆಲವೊಮ್ಮೆ ಇದು ಇಷ್ಟ ಆಗದೇ ನಿಂದಿಸಿದ ಘಟನೆಗಳು ಅಂದು ಸರ್ವೇಸಾಮಾನ್ಯವಾಗಿತ್ತು. ಅವ ಎಷ್ಟು ಹೇಳಿದರು ಕೇಳಿ ಕೇಳಿದಂತೆ ಮಾಡುತ್ತಿದ್ದೆನು. ಕೆಲವೊಮ್ಮೆ ಸುಮ್ಮನೆ ನಿದ್ರೆ ಮಾಡುವಂತೆ ನಟನೆ ಮಾಡುತ್ತಿದ್ದೆ. ಮಾಡಿದ್ರೆ ಸರಿಯಾಗಿ ಬಂದದ್ದು ಇದೆ.


ಕಂಡಕ್ಟರ್ ನ ಚಿಲ್ಲರೆಯ ಸದ್ದಿನ ನಾದವು ನಿದ್ದೆಯ ಮಂಪರಿನಲ್ಲ್ಲೂ ಕೇಳುತ್ತಿತ್ತು. ಅವನ ಗಟ್ಟಿ ಧ್ವನಿ, ರೈಟ್ ಪೋಯಿ ರೈಯ ರೈಯಾ ಎಂಬ ಸಂದೇಶ, ಟಿನ್ ಟಿನ್ ಎಂಬ ಬೆಲ್ ಸದ್ದು, ಗಡಗಡವಾಗುವ ಬಸ್ಸ್ , ಮಳೆಯ ರಭಸಕ್ಕೆ ಹಾರುವ ವಿಂಡೋದ ಹೊದಿಕೆಗಳು ಅದನ್ನು ಗಟ್ಟಿಯಾಗಿ ಹಿಡಿದು ನಿಲ್ಲುವ ನಮ್ಮಂತಹ ವಿದ್ಯಾರ್ಥಿಗಳು ಅಬ್ಬಬ್ಬಾ ಎಷ್ಟೊಂದು ಖುಷಿ . ಈ ಸುಂದರ ನೆನಪಿನ ದೋಣಿಯ ಇಂದಿಗೂ ನನ್ನ ಮನವೆಂಬ ಕಡಲಿನಲ್ಲಿ ತೇಲುತ್ತದೆ ಯಾವುದೇ ಭಯವಿಲ್ಲದೆ. ಇಂದಿಗೂ ಖಾಸಗಿ ಬಸ್ಸನ್ನು ನೋಡುವಾಗ ಹಳೆಯ ಘಟನೆಗಳನ್ನು ಮೆಲುಕು ಹಾಕುವಂತೆ ಭಾಸವಾಗುತ್ತದೆ. ಆದರೆ ಆ ಕಾಲ ಮರಳಿ ಬರದು ಎನ್ನುವುದೇ ನೋವಿನ ಸಂಗತಿ. ನನಗೆ ಎರಡರ ನಾಣ್ಯ ಕಂಡಾಗ ಹಳೆ ಘಟನೆಗೆ ಬೆಳಕು ಚೆಲ್ಲುತ್ತದೆ.




Rate this content
Log in

Similar kannada story from Abstract