ಎಂತಾ ಮಾತು
ಎಂತಾ ಮಾತು
ಮಹಾತ್ಮರೊಬ್ಬರು ತಮ್ಮ ಆಶ್ರಮದಲ್ಲಿ ಭಕ್ತರು ತಂದುಕೊಡುವ ಹಣ್ಣು ಹಂಪಲುಗಳನ್ನ ತಾವು ತಿನ್ನದೇ ತಮ್ಮ ಇತರ ಭಕ್ತರಿಗೆ ಹಂಚುತ್ತಿದ್ದರು. ಒಮ್ಮೆ ಒಂದು ಮುದುಕಿ ಪ್ರೀತಿಯಿಂದಒಂದು ದ್ರಾಕ್ಷಿ ಗೊಂಚಲು ತಂದುಕೊಟ್ಟಾಗ ಒಂದು ಹಣ್ಣು ಕಿತ್ತು ತಾವೇ ತಿಂದರು. ತಕ್ಷಣ ಆ ಮುದುಕಿ ಅಲ್ಲೇ ನಿಂತು ಆಶ್ಚರ್ಯವಾಗಿ ನೋಡುತಿದ್ದಳು. ಮತ್ತೊಂದು ದ್ರಾಕ್ಷಿ ಹಣ್ಣು ಕಿತ್ತು ತಿಂದರು. ಹಾಗೇ ಒಂದೊಂದಾಗಿ ಎಲ್ಲವನ್ನೂ ತಿಂದಾಗ ಅಲ್ಲಿದ್ದವರಿಗೆಲ್ಲ ಆಶ್ಚರ್ಯ.ಎಂದೂ ಹೀಗೆ ಮಾಡಿದವರಲ್ಲ. ಆ ಮುದುಕಿಗಂತೂ ಬಹಳ ಸಂತೋಷ. ಆ ಮುದುಕಿ ಅಲ್ಲಿಂದ ಹೊರಟ ನಂತರ ಒಬ್ಬ ಶಿಷ್ಯ ಕೇಳಿಯೇ ಬಿಟ್ಟ. ಗುರುಗಳೇ ಇಂದು ನೀವು ಯಾರಿಗೂ ಕೊಡದೆ ಎಲ್ಲ
ದ್ರಾಕ್ಷಿಯನ್ನು ನೀವು ಒಬ್ಬರೇ ತಿಂದಾಗ ನಾವೆಲ್ಲಾ ಚಕಿತರಾದೆವು. ಕಾರಣವಿಲ್ಲದೆ ನೀವು ಹೀಗೆ ಮಾಡಿರುವುದಿಲ್ಲ. ನಮಗೂ ತಿಳಿಸಿ ಎಂದಾಗ ಅವರು ಹೇಳಿದರು ನೋಡಿ ಹಣ್ಣುನೋಡಿದಾಗ ನನಗೆ ಒಂದು ಅನುಮಾನ ಅದು ಸಿಹಿ ಇಲ್ಲದೆ ಇರಬಹುದೇನೋ ಅಂತ. ಒಂದು ತಿಂದೆ ನಾನು ತಿಳಿದಂತೆ ಅದು ಬಹಳ ಹುಳಿ ಇತ್ತು. ಮತ್ತೊಂದು ತಿಂದೆ ಅದೂ ಹುಳಿ. ಎಲ್ಲವೂ ತಿನ್ನಲಾಗದಷ್ಟು ಹುಳಿ. ನಾನೇನಾದರೂ ತಿನ್ನದೇ ಅದನ್ನ ನಿಮಗೆ ಕೊಟ್ಟಿದ್ದರೆ ಎಲ್ಲರೂ ಆ ಮುದುಕಿಯನ್ನ ಇಂತ ಹಣ್ಣು ಕೊಟ್ಟಿದ್ದಾಳೆಂದು ಕೆಟ್ಟದಾಗಿ ಮಾತನಾಡುಕೊಳ್ಳುತ್ತಿದಿರಿ.ಅದನ್ನು ತಪ್ಪಿಸಲು ಎಲ್ಲವನ್ನೂ ನಾನೇ ತಿಂದೆ ಅಂದರು.
(ಆಂಧ್ರದ ಪುಟ್ಟಪುರ್ತಿಯಲ್ಲಿ ಬಹಳ ಹಿಂದೆ ನಡೆದ ಒಂದು ಘಟನೆ )