Shilpashree NP

Tragedy Classics Fantasy

4  

Shilpashree NP

Tragedy Classics Fantasy

ಎನಗಿಲ್ಲ ಮುಕ್ತಿ ಆತ್ಮವೋ ದೇಹವೋ...

ಎನಗಿಲ್ಲ ಮುಕ್ತಿ ಆತ್ಮವೋ ದೇಹವೋ...

3 mins
235'ನೀರವ ಕತ್ತಲೆ ಇಲ್ಲಿ ನನ್ನ ಮನಸ್ಸಿನ ಮಾತು ಸ್ಪಷ್ಟವಾಗಿ ಕೇಳಿಸಿತು '


 ದೇಹ ಆತ್ಮದ ಉದ್ದೇಶಕ್ಕಾಗಿ ಬದುಕಿದರೆ ಸಾಕ್ಷಾತ್ಕಾರ, ಆತ್ಮ ದೇಹದ ಇಚ್ಛೆಗೆ ಮಣಿದರೆ ಮೋಹಪಾಶ . ಇವೆರಡರ ನಡುವೆ ನಾವು ಕೆಲವು ಜೀವನ ಮೌಲ್ಯಗಳ ಹಾಗು ಬದುಕಿನ ಉದ್ದೇಶವನು ಕಂಡುಕೊಳ್ಳುವ ಪ್ರಯತ್ನವೇ ಈ ಜನ್ಮದ ಪಯಣ.. ಈ ಮಾತನ್ನು ನನ್ನ ಅಂತರಾತ್ಮ ಕೂಗಿ ಹೇಳುತ್ತಿದೆ.


ನಾನು ನನ್ನ ಆತ್ಮದ ಮಾತು ಕೇಳಿ ಹಲವು ವರ್ಷಗಳೇ ಆಗಿದೆ. ಈ ಕತ್ತಲಿನ ಕೊಠಡಿಯೊಳಗೆ ಸಿಗುವ ಪ್ರಶಾಂತತೆ ಸಮಾಧಾನ . ಕಳೆದ ಹಲವು ವರ್ಷಗಳ ಕಾಲ ನನಗೆ ಎಂದು ಈ ಅವಕಾಶ ಕೂಡ ಸಿಕ್ಕಿರಲಿಲ್ಲ.... ಈಗ ನನ್ನ ಮನವು ಶಾಂತಿಯನ್ನು ಬಯಸುತ್ತಿದೆ. ಹಲವು ವರ್ಷಗಳ ಬಳಿಕ ನನ್ನ ಆತ್ಮಕ್ಕೆ ಶಾಂತಿ ಸಿಗುವ ಸೂಚನೆ ಕಂಡು ಬರುತ್ತಿದೆ.


 ಇಂದು ಈ ಕೋಣೆಯ ಒಳಗಿನಿಂದ ನುಸುಳಿರುವ ಸೊಳ್ಳೆಗಳು ಲಾಲಿ ಹಾಡನು ಹಾಡಿದೆ .ಶೌಚಾಲಯದ ಗಬ್ಬುನಾತವು ಸುಗಂಧ ಪರಿಮಳದ ಅನುಭೂತಿ ನೀಡಿದೆ.


 ಈ ಜೈಲಿನ ಕಂಬಿಗಳು ಹೇಳುತ್ತಿವೆ ನಾನೀಗ ಬಂಧನದಿಂದ ಮುಕ್ತಳು .


 ನನ್ನ ಬದುಕಿನಲ್ಲಿ ನಡೆದುಬಂದ ಹಾದಿಯನ್ನು ಮತ್ತೆ ನೆನಪಿಸಿಕೊಳ್ಳಲು ಇಷ್ಟವಿಲ್ಲ. ಆದರೂ ಅವು ನನ್ನ ಕರೆದು ಮಾತಾನಾಡಿದಂತೆ ಭಾಸವಾಗುತ್ತಿದೆ .


ನಾನು ಸುಮಾರು ಆರು ವರ್ಷದವಳಿದ್ದಾಗ ನನ್ನ ತಂದೆ ತಾಯಿಯು ಪ್ರತಿನಿತ್ಯ ಜಗಳವಾಡುತ್ತಿದ್ದರು. ನನ್ನ ತಂದೆ ತಾಯಿಯನ್ನು ನಡತೆಗೆಟ್ಟವಳು ಎಂದು ಜರಿದರು.. ನನ್ನ ತಾಯಿ ಅವನಿಗೆ ಆಸೆಬುರುಕ, ತಲೆ ಹಿಡುಕ ಎಂದು ಹಂಗಿಸುತ್ತಿದ್ದಳು. ರಾತ್ರಿ ಆದರೆ ಭಯಂಕರ ಜಗಳಗಳು. ಮನೆಯ ಕುರ್ಚಿಯ ಶಬ್ದ ..ಅಯ್ಯೊ, ಒಡೆಯ ಬೇಡ ಪಾಪೀ ಎಂಬ ಚಿರಾಟ.. ಸಾಯಿ, ನೀನು ಬೀದಿ ನಾಯಿ ಎಂಬ ಬೈಗುಳ... ಶಾಪದ ಕಣ್ಣೀರು ಅಬ್ಬಾ !! ನಿಲ್ಲಿ ನೆನಪುಗಳೆ ದೂರಹೋಗಿ..


 ಅಚ್ಚಳಿಯದೆ ಉಳಿದಿರುವ ಘಟನೆಗಳು ಹಲವು.  ಮನೆಯಲ್ಲಿ ಮನಃಶಾಂತಿ ಯಿಂದ ಬದುಕುವ ವಾತಾವರಣ ಇರಲಿಲ್ಲ. ನೆಮ್ಮದಿಯ ಕ್ಷಣ ಎಂದರೆ ತಂದೆ-ತಾಯಿ ಮನೆಯಿಂದ ಹೊರಗೆ ಮಿಟಿಂಗ್ ,ಪಾರ್ಟಿ ಎಂದು ಹೋದಾಗ ಮಾತ್ರ.


ಪ್ರತಿನಿತ್ಯವೂ ಇವರಿಬ್ಬರದು ಮುಗಿಯದ ಜಗಳಗಳು. ಒಂದು ದಿನವೂ ನಾನು ಅವರಿಬ್ಬರು ಆತ್ಮೀಯತೆಯಿಂದ ಬದುಕಿದ್ದನ್ನು ನೋಡಿಲ್ಲ. ಇವರಲ್ಲಿ ಯಾರು ಸರಿ ಯಾರು ತಪ್ಪು ಎಂದು ನಿರ್ಧರಿಸುವ ಮುಂಚೆ ಅವರಿಬ್ಬರು ವಿಚ್ಛೇದನವನ್ನು ಪಡೆದರು. ನಾವು ಶ್ರೀಮಂತರೆ ನನಗೆ ಮನೆಯಲ್ಲಿ ಹಣದ ಬಡತನ ಇರಲಿಲ್ಲ ಪ್ರೀತಿಗೆ ಸಿರಿತನ ದೊರೆಯಲಿಲ್ಲ.


 ಆನಂತರ ನಾನು ತಾಯಿಯ ಜೊತೆಗಿರಲಾರಂಭಿಸಿದೆನು. ನಂತರ ನಾನು ನನ್ನ ಜನ್ಮಕ್ಕೆ ಕಾರಣನಾದ ತಂದೆಯ ಮುಖವನ್ನು ನೋಡಲಿಲ್ಲ. ಅವನು ಎಲ್ಲಿದ್ದಾನೆ ಎಂಬುದು ಕೂಡ ನನಗೆ ಗೊತ್ತಿಲ್ಲ . ವಿದೇಶದಲ್ಲಿ ಬೇರೆ ಮದುವೆಯಾಗಿ ಸುಖವಾಗಿದ್ದಾನೆ ಎಂಬ ವದಂತಿ.


 ನನ್ನ ತಾಯಿ ಇನ್ಯಾವುದೋ ಗಂಡಸನ್ನು ಮರುಮದುವೆಯಾದಳು. ಅವನನ್ನು ತೋರಿಸಿ ಇವನೇ ಇನ್ಮೇಲೆ, ನಿನ್ನ ಅಪ್ಪ ಇವನು ನಮ್ಮೊಂದಿಗೆ ಇನ್ಮುಂದೆ ಇರುತ್ತಾನೆ ಎಂದು ಹೇಳಿದಳು.


 ಅವನ ಅಸಹ್ಯವಾದ ನೋಟದ ಬಗೆ ಪ್ರತಿಕ್ಷಣವೂ ಈ ಮನೆಯಲ್ಲಿ ಅವನ ಜೊತೆ ಜೀವನ ಸಾಕು ಎಂಬ ಭಾವ ಮೂಡಿಸುತ್ತಿತ್ತು. ನಾನು ನನ್ನ ತಾಯಿಯಲ್ಲಿ ಪರಿಪರಿಯಾಗಿ ಬೇಡಿಕೊಂಡೆನು, 'ನನಗೆ... ಈ ಅಪ್ಪನ ಅವಶ್ಯಕತೆಯಿಲ್ಲ ನಾವಿಬ್ಬರು ಹಾಯಾಗಿ ನೆಮ್ಮದಿಯಿಂದ ಇರಬಹುದು..' ಮೂರನೇ ವ್ಯಕ್ತಿಯ ಆಗಮನದಿಂದ ನನ್ನ ಜೀವನದಲ್ಲಿ ಸಂಕಟ ಇನ್ನಷ್ಟು ಹೆಚ್ಚಾಗಿತ್ತು.. ಆದರೆ ನನ್ನ ತಾಯಿ ನನ್ನ ಮಾತಿಗೆ ಬೆಲೆ ಕೊಡಲಿಲ್ಲ..  ತಂದೆಯ ಕಡೆಯಿಂದ ಆಸ್ತಿ-ಪಾಸ್ತಿ ಚೆನ್ನಾಗಿ ದೊರಕಿತ್ತು. ಕಾನೂನಿನ ಪ್ರಕಾರ ನನಗೆ ಹದಿನೆಂಟು ವರ್ಷ ಆದ ಮೇಲೆ ಅದರಲ್ಲಿ ಹಕ್ಕು ದೊರಕಿತು.. ನಾನು ತಾಯಿಯ ಮನೆಯನ್ನು ತೊರೆದೆನು..  ನನ್ನ ತಂದೆ ನನ್ನ ಹೆಸರಿಗೆ ಗೆಸ್ಟ್ ಹೌಸ್ ಬರೆದು ಕೊಟ್ಟಿದ್ದನು. ನಾನು ಅಲ್ಲೇ ಇರಲು ಆರಂಭಿಸಿದೆನು.


 ಅಲ್ಲಿನ ವಾತಾವರಣ ಬಹಳ ನಿಗೂಢವಾಗಿತ್ತು. ಯಾರ ಸಂಪರ್ಕ ಕೂಡ ಇಲ್ಲದ ಜಾಗ . ಸುತ್ತಲಿನ ಕಾಡು ಪ್ರದೇಶ ನಡುವೆ ಒಂದು ಸುಂದರವಾದ ಬಂಗಲೆ .


ಬೆಂಕಿ ಇಂದ ಬಾಣಲೆಗೆ ಎಂಬ ಮಾತಿನಂತೆ ನನ್ನ ಬದುಕು ಇನ್ನಷ್ಟು ಜಟಿಲವಾಯಿತು. ಬದುಕಿನ ದಾರಿ ಹುಡುಕುತ್ತಾ ನನಗೆ ಆಸ್ತಿಯಲ್ಲಿ ಬಂದ ಹಣದಿಂದ ಜೀವನ ಮಾಡುತ್ತಿದ್ದೆ. ಒಂದು ದಿನ ಈ ಜೀವನ ಬೇಸರವಾಗಿ.... ದುಡಿದು ತಿನ್ನುವ ನಿರ್ಧಾರ ಮಾಡಿ ಕೆಲಸಕ್ಕೆ ಪ್ರಯತ್ನ ಮಾಡಿದೆ.  ನನ್ನ ಗೆಳೆಯ ಮಾಡೆಲಿಂಗ್ ಕೆಲಸ ಕೊಡಿಸುವೆನು ಬರುವೆಯಾ ಎಂದನು. ಆಯಿತು ಎಂದು ಒಪ್ಪಿದೆ. ಹೇಗೋ ಆರಾಮಾಗಿರಬಹುದು ಎಂಬ ಸಮಾಧಾನ. ಈ ರೀತಿ ಮಾಡಲಿಂಗ್ ಮಾಡತ್ತಾ ಹಲವಾರು ಗೆಳೆಯರ ಪರಿಚಯ ಆಯಿತು.

ಹಾಲು ಕಂಡಲ್ಲಿ ಬೆಕ್ಕು , ಕೂಳು ಕಂಡಲ್ಲಿ ನಾಯಿ ಅಂತರಾಲ್ಲ ಹಾಗೆ .


ಒಂದು ದಿನ ಸುಪ್ರಸಿದ್ಧ ಉದ್ಯಮಿ ನನಗೆ ಪರಿಚಿತನಾದನು. ಅವನು ಸಲುಗೆ ಬೆಳೆದು ನನ್ನ ಗೆಸ್ಟಹೌಸ್ ಬಳಿ ಬರಲಾರಂಭಿಸಿದನು. ಈ ಜಾಗ ನೋಡಿ ತಾನು ಇಲ್ಲಿ ಪಾರ್ಟಿ ಮಾಡಲು ಅವಕಾಶ ಮಾಡಿಕೊಡ ಬೇಕು ಎಂದನು. ನಾನು ಒಪ್ಪಿದೆ ಅದಕ್ಕಾಗಿ ನನಗೆ ಹಣ ಕೂಡ ದೊರಕುತ್ತಿತ್ತು.


ಹಲಾಹಲ ಕುಡಿದವನಿಗೆ ಹಗಲಕಾಯಿ ಕಹಿಯೇ ? ಹಗಲಕಾಯಿ ತಿನ್ನಲು ಪ್ರಯತ್ನ ಮಾಡಿದೆ.


 ಸ್ವಲ್ಪ ದಿನಗಳ ನಂತರ ತಿಳಿಯಿತು ಇಲ್ಲಿ ನಶೆಯೇರುವ ಡ್ರಗ್ ದಂಧೆ ನಡೆಯುತ್ತಿದೆ. ನಾನು ಈ ದಂಧೆಯಲ್ಲಿ ಆಕಸ್ಮಿಕವಾಗಿ ಭಾಗಿಯಾಗ ಬೇಕಾಯಿತು..  ಈ ಸುಳಿಯಲ್ಲಿ ಸಿಲುಕುವ ಮೊದಲು ನನಗೆ ಇದರ ಬಗ್ಗೆ ಏನೂ ಮಾಹಿತಿ ಇರಲಿಲ್ಲ.. ಇದು ಕಾನೂನು ಬಾಹಿರ ಚಟುವಟಿಕೆ ಎಂದು ಯೋಚಿಸಲೂ ಹೋಗಲಿಲ್ಲ.. ನಾನು ಆ ಬಿಳಿಯ ಪುಡಿಯನ್ನು ಮೊದಲ ಬಾರಿ ಮೂಗಿನ ಮೂಲಕ ಸೇವಿಸಿದೆ.. ಅದು ನನ್ನನ್ನು ಸುಂದರವಾದ ಲೋಕಕ್ಕೆ ಕರೆದೊಯ್ಯುವ ಜಾದುಗಾರ ಆಯಿತು. ಆ ಲೋಕದಲ್ಲಿ ನಾನು ಸುಖ ಜೀವಿ. ದಿನಾಲು ಆ ಲೋಕವೇ ನನಗೆ ಸಾಕು ಬೇರೆ ಏನೂ ಬೇಡ ಎಂಬ ಭಾವನೀಡಿತು. ಇದರ ಸುಖದಲ್ಲಿ ತೇಲುವ ಕೆಲಸ ನನಗೆ ಮುದ ನೀಡಿತು. ಒಂದು ದಿನ ನಾನು ಈ ಸಾಮ್ರಾಜ್ಯದ ಮಾಲಿಕಳಾದೆನು .


 ಹಲವು ದಿನಗಳ ನಂತರ ಈ ದಂಧೆಯನ್ನು ಬೆನ್ನತ್ತಿದ ಪೋಲಿಸರ ಬಲೆಗೆ ನಾನು ಅತಿಥಿಯಾದನು.


ಆ ನಂಗೇನೋ ಬೇಕೆನಿಸಿದೆ ಈಗ ಬೇಕಾಗಿದೆ ಆ ನಶೆಯ ಮಾದಕತೆ.. ಆ ನನಗಿಲ್ಲ ಇದರಿಂದ ಅಂತ್ಯ... ಏನೂ ಮಾಡಲಿ ಹೇಗೆ ಹೊರಬರಲಿ.. ಆತ್ಮಕ್ಕೆ ಮುಕ್ತಿ ಬೇಕೆಂದರೆ ಈ ದೇಹಕ್ಕೆ ಮುಕ್ತಿ ಕೊಡಲೇ .

ಅಥವಾ ದೇಹದ ಆಸೆಗೆ ಮಣಿದು ಆತ್ಮಕ್ಕೆ ವಂಚಿಸಲೇ ಏನು ಮಾಡಲಿ ?Rate this content
Log in

Similar kannada story from Tragedy