Shilpashree NP

Romance Fantasy Others

4  

Shilpashree NP

Romance Fantasy Others

ಚೆಲುವಿನ ಸಿರಿ ಶುಭ್ರಾ

ಚೆಲುವಿನ ಸಿರಿ ಶುಭ್ರಾ

2 mins
407


ನೀಳ ಕೂದಲಿನ ಸುಂದರಿ, ಗೌರವ ವರ್ಣದ ಕಿನ್ನರಿ, ಸಂಪಿಗೆ ಮೂಗಿನ, ಚಂದುಟಿಯ ಚೆಲುವೆ "ಶುಭ್ರಾಮತಿ"ಎಂಬ ರಾಜ್ಯದ ಏಕೈಕ ಯುವರಾಣಿ "ಶುಭ್ರಾ". ಇವಳು ಮೈ ಮಾಟಗಳಿಂದ ಎಲ್ಲರನ್ನು ಆಕರ್ಷಿಸುವ ಚೆಲುವೆ.  ಬೆಳಗ್ಗೆದ್ದು ನದಿಯಲ್ಲಿ ಮಿಂದು ದಾಸಿಯರ ಜೊತೆಗೂಡಿ ಜಲಕ್ರೀಡೆಯಾಡಿ, ತನ್ನ ರೆಷ್ಮೆ ಖಚಿತವಾದ ಉಡುಗೆ, ವಜ್ರವೈಢೂರ್ಯದ, ಮುತ್ತಿನ ಹಾರಗಳ ಆಭರಣಗಳನ್ನು ಕೊರಳಿಗೆ ಧರಿಸಿಕೊಂಡು , ಮೈ ತುಂಬ ಸಿಂಗರಿಸಿಕೊಂಡು ಸಿಂಹಾಸನದಲ್ಲಿ ಕುಳಿತರೆ, ಸಭಿಕರಿಗೆಲ್ಲ ಅವಳ ಸೌಂದರ್ಯವನ್ನು ಸವಿಯುವುದೆ ಆನಂದ.

ಒಮ್ಮೆ ಪಕ್ಕದ ರಾಜ್ಯದ ರಾಜ ಶುಭ್ರಾಮತಿರಾಜ್ಯವನ್ನು ಆಕ್ರಮಿಸುತ್ತಾನೆ. ಯುದ್ಧದಲ್ಲಿ ರಾಜ ಗೆಲುವು ಸಾಧಿಸುತ್ತಾನೆ. ಶುಭ್ರಾಮತಿರಾಜ್ಯವನ್ನು ತನ್ನ ವಶಕ್ಕೆ ಪಡೆಯ ಬೇಕಾದ ಸಂದರ್ಭದಲ್ಲಿ, ಶುಭ್ರಾಮತಿ ಮಹಾರಾಜ ತನ್ನ ಮಗಳನ್ನು ಪಕ್ಕದ ರಾಜ್ಯದ ರಾಜನಿಗೆ ವಿವಾಹ ಮಾಡಲು ಮತ್ತು ಸಂಧಾನದ ಮೂಲಕ ರಾಜ್ಯವನ್ನು ಪಡೆಯಲು ಇಚ್ಚಿಸುತ್ತಾನೆ.

ಶುಭ್ರಾ ತನ್ನ ಕನಸಿನ ರಾಜಕುಮಾರನ ಬಗ್ಗೆ ಬಹಳ ಆಶೆ ಉಳ್ಳವಳಾಗಿರುತ್ತಾಳೆ. ಆದರೆ ಅವಳು ವಧು ಪರೀಕ್ಷೆಗೆ ಬಂದ ಮುದಿ ರಾಜನನ್ನು ನೋಡಿ ಮರುಗುತ್ತಾಳೆ. ತನ್ನ ಯವ್ವನವನ್ನು ಈ ಮುದಿ ರಾಜನಿಗೆ ಬಲಿಯಾಗಿಸಲು ಅವಳ ಒಳಮನಸ್ಸು ಒಪ್ಪುವುದಿಲ್ಲ.ಅವಳು ಹದಿನಾರರ ಹರೆಯದವಳು, ಇವನು ನಲವತ್ತರ ಮುದಿಯ. ಇವಳ ಮನಸ್ಸು ಅವನಿಗೆ ಸುಖಕೊಡಲು ಸಿದ್ಧವಿಲ್ಲ. ಆದರೆ ಅವಳನ್ನು ಕೇಳುವವರಾರು? ತಂದೆಗೆ ರಾಜ್ಯ ಕಾಪಡಿಕೊಳ್ಳುವ ಹಂಬಲ. ಅಣ್ಣನಿಗೆ ರಾಜ್ಯವನ್ನಾಳುವ ಹುರುಪು. ತಾಯಿ ಇಲ್ಲದ ಯುವರಾಣಿ ಈ ಶುಭ್ರಾ.

ಆದರೆ ಶುಭ್ರಾಳ ಸೌಂದರ್ಯವನ್ನು ಕಂಡ ಮುದಿ ರಾಜ ಅವಳ ಮೈಮಾಟಕ್ಕೆ ಮಾರುಹೋಗುತ್ತಾನೆ. ಹಾಗೂ ಸಂಧಾನಕ್ಕೆ ಒಪ್ಪಿಗೆ ಸೂಚಿಸುತ್ತಾನೆ. 

ಶುಭ್ರಾ ತನಗೆ ಇಷ್ಟವಿಲ್ಲದಿದ್ದರೂ ತನ್ನ ತಂದೆಯ ಮಾತು ಹಾಗು ರಾಜ್ಯದ ಪ್ರಜೆಗಳ ಹಿತಕ್ಕಾಗಿ ರಾಜನೊಂದಿಗೆ ಹಿರಿಯರ ಸಮ್ಮುಖದಲ್ಲಿ ಮದುವೆಯಾಗುತ್ತಾಳೆ.

ಮುದಿರಾಜ ಆಗಲೇ ಮೂರು ವಿವಾಹವಾಗಿದ್ದರೂ ಕೂಡ ಇವಳ ದೇಹದ ಶೃಂಗಾರಕ್ಕೆ ದಾಸನಾಗಿ, ರಾಜ್ಯದ ಪರಿವೇ ಇಲ್ಲದೆ ಶುಭ್ರಾಳ ಜೊತೆ ದಿನ ಕಳೆಯುವುದೇ ಕಸುಬು ಮಾಡಿಕೊಳ್ಳುತ್ತಾನೆ.


ಶುಭ್ರಾ ಮೇಲಿನ ಕಾಮನೆ ಕಡಿಮೆಯಾಗುವುದಿಲ್ಲ. ಹಸಿದ ಹುಲಿಯಂತೆ ದೈಹಿಕ ಸಂಪರ್ಕವನ್ನು ಮಾಡುತ್ತಲೇ ಇರುತ್ತಾನೆ. ರಾಜನ ಕಾಮಪಿಶಾಚಿಗೆ ಕಾಮದಾಟಕ್ಕೆ ದೇಹ, ಮನಸ್ಸು ಜರ್ಜರಿತಗೊಳ್ಳುತ್ತದೆ. ಹೀಗಿರುವಾಗ ಶುಭ್ರಾ ಗರ್ಭವತಿಯಾಗುತ್ತಾಳೆ. ಮುದ್ದಾದ ಮಗುವಿಗೆ ಜನ್ಮನೀಡುತ್ತಾಳೆ. ಆದರೂ ಇವಳ ಸೌಂದರ್ಯ ಮಾಸಿರುವುದಿಲ್ಲ. ಇವಳ ಸೌಂದರ್ಯ ದುಪ್ಪಟ್ಟು ಹೆಚ್ಚಿದಂತೆ ಕಾಣುತ್ತಿರುತ್ತದೆ. ರಾಜನಿಂದ ಮುಕುತಿ ಎಂದು?? ಶುಭ್ರಾ ಯಾವಾಗಲೂ ಚಿಂತಿಸುತ್ತಿರುತ್ತಾಳೆ. "ಸೌಂದರ್ಯ, ಶೃಂಗಾರವೆ ಹೆಣ್ಣಿಗೆ ಶತೃವಂತೆ" ಇದು ಅರಿವಾಯಿತು. ಮುದಿರಾಜ ಸುಖದ ವೈಭೊಗದಲ್ಲಿ ಮುಳುಗಿದ್ದಾಗ ಪಕ್ಕದ ರಾಜ್ಯದ ಶತ್ರುಗಳು ಮುದಿರಾಜ್ಯದ ಮೇಲೆ ಆಕ್ರಮಣ ಮಾಡುತ್ತಾರೆ .

ಮುದಿ ರಾಜನನ್ನು ಯುದ್ಧದಲ್ಲಿ ಚೈತನ್ಯಶೀಲ ರಾಜ್ಯದ "ಚೈತನ್ಯ" ಮಹಾರಾಜನು ಸೋಲಿಸಿ ತನ್ನ ವಶಕ್ಕೆ ಪಡೆಯುತ್ತಾನೆ. ನಾಲ್ವರು ಮಹಾರಾಣಿಯರಲ್ಲಿ ಶುಭ್ರಾಳನ್ನು ಕಂಡ ಅವನು ಮೋಹಿತಗೊಂಡು ಅವಳನ್ನು ವಿವಾಹವಾಗುತ್ತಾನೆ. ಚೈತನ್ಯ ಮಹಾರಾಜನು ಕೂಡ ರಾಜ್ಯವನ್ನು ಮರೆತು ಕಾಮದ ಅಮಲಿನಲ್ಲಿ ಶುಭ್ರಾ ಜೊತೆ ಕಾಲ ಕಳೆವುದು ಕಸುಬನ್ನಾಗಿ ಮಾಡಿಕೊಳ್ಳುತ್ತಾನೆ. ಈ ರಾಜನ ಕಾಮದಾಟಕ್ಕೆ ಶುಭ್ರಾ ದೇಹವು ಬೇಸತ್ತು ಹೋಗಿರುತ್ತದೆ.


ಅಗ್ರಮಾನ ರಾಜ್ಯಾದ ರಾಜ "ಅಗ್ರಮಾನ್ಯು" ಅಕ್ರಮಣ ಮಾಡುತ್ತಾನೆ. ಚೈತನ್ಯಶೀಲರಾಜ ತನ್ನ ವಶಕ್ಕೆ ಪಡೆಯುತ್ತಾನೆ. ಜೊತೆಗೆ ಶುಭ್ರಾ ತನ್ನವಳಾಗಬೇಕು ಎಂದು ಬಯಸುತ್ತಾನೆ.

ಇವಳನ್ನು ಮದುವೆಯಾದ ರಾಜರು ರಾಜ್ಯವನ್ನು ಕಳೆದುಕೊಳ್ಳುತ್ತಾರೆ. ಈಕೆ ಒಂದು "ಶಾಪದ ಶೃಂಗಾರಿ "ಎಂದು ಜನರು ಅವಳ ಬಗ್ಗೆ ಮಾತನಾಡುತ್ತಾರೆ. ಇದನ್ನು ತಿಳಿದ ಶುಭ್ರಾ ಮನಸ್ಸು ಬೇಸರಗೊಂಡು ತನ್ನ ಪ್ರಾಣ ಹತ್ಯೆಗಾಗಿ ಪ್ರಯತ್ನಿಸುತ್ತಾಳೆ.

ಆಗ ಶೃಂಗಾರ ದೇವತೆ ಪ್ರತ್ಯಕ್ಷನಾಗುತ್ತಾನೆ "ನೀನು ಶೃಂಗಾರದ ಜೊತೆ ಬುದ್ಧಿಯನ್ನು ಉಪಯೋಗಿಸು ನಿನಗೆ ಶುಭವಾಗುತ್ತದೆ" ಎಂದು ಮಾಯವಾಗುತ್ತಾನೆ.

ನಂತರ ಒಂದು ನಿರ್ಧಾರಕ್ಕೆ ಬಂದ ಅವಳು ಅಗ್ರಮಾನ್ಯುವನ್ನು ಅಹ್ವಾನ ಮಾಡುತ್ತಾಳೆ. ನಂತರ ತಾನು ನಿನ್ನನ್ನು ಮದುವೆಯಾಗುತ್ತೇನೆ, ಆದರೆ ಮದುವೆಗೆ ಎರಡು ಷರತ್ತುಗಳನ್ನು ಹಾಕುತ್ತಾಳೆ.

ಮೊದಲನೆಯದಾಗಿ ನಿನ್ನ ರಾಜ್ಯ ವಿಸ್ತರಣೆಯಾಗಬೇಕು ಅಲ್ಲಿಯವರೆಗೆ ನನ್ನ ದೇಹದ ಮೇಲೆ ಯಾವುದೆ ಅಧಿಕಾರವಿಲ್ಲ.

ಎರಡದನೆಯದಾಗಿ ನಾನು ಬದುಕಿರುವವರಗು ನೀನು ರಾಜ್ಯವನ್ನು ಕಳೆದುಕೋಳ್ಳಬಾರದು ಹಾಗು ನಾನು ನಿನ್ನ ಪಟ್ಟಧರಸಿಯಾಗಿ ಕೊನೆವರೆಗೆ ಬಾಳಬೇಕು.

ಶುಭ್ರಾ ಷರತ್ತುಗಳನ್ನು ಒಪ್ಪಿದ ಅಗ್ರಮಾನ್ಯ ಅವಳನ್ನು ವಿವಾಹವಾಗುತ್ತಾನೆ. ಅವಳ ಇಚ್ಛೆಯಂತೆ ರಾಜ್ಯ ವಿಸ್ತರಣೆಯಲ್ಲಿ ತನ್ನ ಗಮನವನ್ನು ಹರಿಸುತ್ತಾನೆ. ರಾಜ್ಯವು ನಾಲ್ಕರಷ್ಟು ಬೆಳೆಯುತ್ತದೆ.

ನಂತರ ಶುಭ್ರಾ ದೇಹದ ಸುಖಕ್ಕಿಂತ ಅವಳ ಮನಸ್ಸಿನ ಸೌಂದರ್ಯಕ್ಕೆ ಮಾನಸಿಕ ಶೃಂಗಾರಕ್ಕೆ ದಾಸನಾಗುತ್ತಾನೆ. ಅವಳ ಇಚ್ಛೆಯಂತೆ ರಾಜ್ಯದ ಜನರ ಹಿತಕ್ಕಾಗಿ ಬದುಕುತ್ತಾನೆ.

ಅಗ್ರಮಾನ್ಯ ರಾಜ್ಯದ ಜೊತೆಗೆ ಇನ್ನಷ್ಟು ರಾಜ್ಯಗಳನ್ನು ಸೇರಿಸಿ "ಶುಭ್ರಾರಾಜ್ಯವನ್ನು" ಕಟ್ಟುತ್ತಾನೆ. ಆ ರಾಜ್ಯದಲ್ಲಿ ಸುಂದರವಾದ ವನ ನಿರ್ಮಿಸುತ್ತಾನೆ . ಸಾವಿರಾರು ವೃಕ್ಷಗಳನ್ನು ಬೆಳೆಸುತ್ತಾನೆ . ನವಿಲುಗಳ ನರ್ತನ ದುಂಬಿಗಳ ಜೇಂಕಾರ , ಪಕ್ಷಿಗಳ ಚಿಲಿಪಿಲಿ ಗಾನ ಕಲರವ, ಜಿಂಕೆಗಳ ಗುಂಪು. ವನ್ಯಜೀವಿಗಳ ಶೃಂಗಾರಮಯ ಸ್ವಚ್ಛಂದವನವು ನಿರ್ಮಾಣಗೊಳ್ಳುತ್ತದೆ.

ಶುಭ್ರಾ ಹಾಗೂ ಅಗ್ರಮಾನ್ಯು ತಮ್ಮ ವೃದ್ಧಾಪ್ಯವನ್ನು " ಶೃಂಗಾರ ವನ" ದಲ್ಲಿ ಕಳೆಯುತ್ತಿದ್ದಾರೆ.

ಶೃಂಗಾರವನ್ನು ಬಲವಂತವಾಗಿ ತನ್ನ ಸ್ವತ್ತಾಗಿಸಿಕೊಳ್ಳಬಾರದು. ಶೃಂಗಾರಕ್ಕು ಒಂದು ಗೌರವವಿದೆ ಎಂಬುದನ್ನು ಅರಿತು, ಪ್ರಕೃತಿಯಲ್ಲಿ ಎಲ್ಲವೂ ಶೃಂಗಾರ, ಅದು ಸ್ವಚ್ಛಂದವಾಗಿದ್ದರೆ. ಶೃಂಗಾರವನ್ನು ಪಡೆಯಲು ಯತ್ನಿಸಿದರೆ ಅದು ನಮ್ಮ ಕ್ರೌರ್ಯವಲ್ಲದೆ ಮತ್ತೇನು ???



Rate this content
Log in

Similar kannada story from Romance