Shilpashree NP

Tragedy Classics Inspirational

4  

Shilpashree NP

Tragedy Classics Inspirational

ಬದುಕಿನ ಬಣ್ಣ ಮಾಸಿದೆ..

ಬದುಕಿನ ಬಣ್ಣ ಮಾಸಿದೆ..

2 mins
299



ಬಾಲ್ಯದಲಿ ಅಂಬಲಿ ,ಮುರುಕು ರೊಟ್ಟಿ ಪಲ್ಯ ಪಕ್ಕದಲಿ ಕುಳಿತ ನಾಯಿಯ ಜೊತೆ ಜೋಪಡಿಯಲಿ ಕುಳಿತು ತಿನ್ನತ್ತಿದ್ದೆ. ಒಂದು ದಿನ ಕಸ ಮುಸುರೆ ತೊಳೆಯಲು ಅಮ್ಮನ ಜೊತೆ ನಾನು ಸಾಹೋಕಾರರ ಮನೆಗೆ ಹೋಗಿದ್ದೆ. ಅವರು ಕೊಡುವ ನಿನ್ನೇಯ ಊಟ ಅಮೃತ ಅನಿಸುತ್ತಿತ್ತು. ಅವರ ಮನೆಯ ನಾಯಿ ಕೂಡ ತನಗೆ ಬೇಕಾದ ಭರ್ಜರಿಯಾದ ಊಟ ಮಾಡುತ್ತಿತ್ತು. ಅದಕ್ಕೂ ಕೂಡ ರಾಜ ವೈಭೋಗ. ನನ್ನಂತಹ ನತದೃಷ್ಟೆ ನಾಯಿ ಆದರೂ ಸರಿ ಸಿರಿವಂತರ ಮನೆಯಲ್ಲಿ ಜನಿಸಬೇಕು ಎಂದುಕೊಂಡೆನು.


ಒಂದು ದಿನ ನನ್ನ ಜೀವನಕ್ಕೆ ತಿರುವು ಸಿಗುವಂತೆ ಒಂದು ಘಟನೆ ನಡೆಯಿತು. ನನಗೆ ಸುಮಾರು ಇಪ್ಪತ್ತು ವರ್ಷ ಇದ್ದಾಗ ನನ್ನ ತಾಯಿಗೆ ಅದೇನು ಕಾಯಿಲೆ ಬಂದಿತ್ತು. ಅವಳಿಗೆ ಔಷಧಿ ಕೊಡಿಸಲು ದುಡ್ಡಿರಲಿಲ್ಲ, ಆಗ ನನ್ನ ಅಜ್ಜಿ ದುಡ್ಡಿಗಾಗಿ ನನ್ನನ್ನು 40 ವರ್ಷದ ಸಿರಿವಂತನಿಗೆ ಮದುವೆ ಮಾಡಿಸಿದಳು. ಅವನಿಗೆ ಆಗಲೇ ಮದುವೆಯಾಗಿ ಮಕ್ಕಳಿದ್ದರು. ಯಾವುದೋ ಕಾಯಿಲೆ ಬಂದು ಅವನ ಹೆಂಡತಿ ತೀರಿಹೋಗಿದ್ದಳು.



ಅವನ ದೇಹದ ಚಪಲ ಮಾತ್ರ ತೀರಿರಲಿಲ್ಲ ಎಂದು ಕಾಣಿಸುತ್ತದೆ. ಹೆಸರಿಗೆ ಮಾತ್ರ ನಾನು ಅವನ ಎರಡನೇ ಹೆಂಡತಿ. ನನ್ನ ಕೃಶವಾದ ದೇಹ ಅವನ ಕಾಮದ ಪಿಶಾಚಿಗೆ ಬಲಿಯಾಯಿತು. ಹಗಲು ರಾತ್ರಿ ಎನ್ನದೆ ನನ್ನನ್ನು ತನ್ನ ದೇಹದ ಆಸೆ ತೀರಿಸಿಕೊಳ್ಳಲು ಬಳಸುತ್ತಿದ್ದನು. ಅವನ ಮಕ್ಕಳಿಗೆ ನನ್ನ ಕಂಡರೆ ತಿರಸ್ಕಾರದ ನೋಟ. ಮನೆಯ ಕೆಲಸದವರಿಗೆಗಿಂತಲೂ ಕೀಳಾಗಿ ನನ್ನನ್ನು ನೋಡಲು ಆರಂಭಿಸಿದರು. ಅನುದಿನವು ನರಕಯಾತನೆ ನನ್ನ ಬಡತನದ ಜೀವನ ಇದಕ್ಕಿಂತ ಸಾವಿರ ಪಾಲು ವಾಸಿ. ಬಳಸಿ ಬೀಸಾಡುವ ಕಾಮದ ಗೊಂಬೆ ಆದೆನು ನಾನು. ಈ ಪರಿಸ್ಥಿತಿಯಲ್ಲೇ ನಾನು ಗರ್ಭಧರಿಸಿದೆನು ಅವರು ಬಲವಂತವಾಗಿ ನನ್ನ ಗರ್ಭವನ್ನು ತೆಗೆಸಿದರು. ದಿನೇದಿನೇ ಮಾನಸಿಕವಾಗಿ ನಾನು ಕೊರಗಲಾರಂಭಿಸಿದೆನು. ಬೇರೆ ಜನರ ಸಂಪರ್ಕ ಇಲ್ಲದಂತೆ ನನ್ನನ್ನು ಬಂಧಿಸಿ ಇಟ್ಟರು. ಕೆಲವು ವರ್ಷಗಳ ನಂತರ ನನ್ನ ಗಂಡ ಎಂಬ ಪುರುಷನು ತೀರಿಹೋದನು. ನನ್ನನ್ನು ಕಾಲ ಕಸವಾಗಿ ಕಂಡು ಬೀದಿಗಟ್ಟಿದರು.


ಇಂದು ನನಗೆ ಬೀದಿ ಬೀದಿಯಲ್ಲಿ ಹರಿದು ಹೋದ ಕೊಳಕು ಬಟ್ಟೆಯನ್ನು ಧರಿಸಿಕೊಂಡು, ಗಂಟಾದ ಅಂಟು ಕೂದಲುಗಳನ್ನು ಬಿಟ್ಟುಕೊಂಡು, ತುತ್ತು ಅನ್ನಕ್ಕಾಗಿ ಅಲೆದಾಡುವ ಪರಿಸ್ಥಿತಿ ಬಂದಿದೆ. ನನ್ನ ಹೆತ್ತವರು ಎಲ್ಲಿದ್ದಾರೋ ಗೊತ್ತಿಲ್ಲ.


ನನ್ನನ್ನು ನೋಡಿ ಕೆಲವು ಜನರು ಕಲ್ಲಿನಿಂದ ಹೊಡೆದು ಮಾನಸಿಕ ಅಸ್ವಸ್ಥೆ ಎಂದು ರೇಗಿಸುತ್ತಾರೆ. ನಾನೀಗ ಕುರೂಪಿಯಾಗಿ ಇರಲೇಬೇಕು ನನ್ನ ಕುರೂಪಿ ಮುಖ ದೇಹ ಕಾಮುಕ ಜನರು ನನ್ನಿಂದ ದೂರ ಉಳಿಯಲು ಕಾರಣ ಹಾಗು ಒಂದು ಅಸ್ತ್ರ. ಹೆಣ್ಣಿಗೆ ಸೌಂದರ್ಯವೇ ಒಂದು ಶತ್ರು. ದಿನವು ಒಂದೊಂದು ನಿರ್ಜನ ಕಟ್ಟಡದಲ್ಲಿ ನನ್ನ ವಾಸ. ಬೀದಿ ನಾಯಿ, ಬಾವುಲಿಗಳು ನನಗೆ ಕುಟುಂಬ. ಕೊಳಕು ಮನುಷ್ಯರ ಸಹವಾಸಕ್ಕಿಂತ ಈ ಜೀವಿಗಳ ಜೊತೆಗಿನ ವಾಸವೇ ನನಗೆ ಸುಖ.


ಅಂದು ಸಿರಿವಂತರ ಮನೆಯ ನಾಯಿ ಆಗಬೇಕೆಂದು ಕೊಂಡಿದ್ದೆ. ಇಂದು ತಿಳಿಯಿತು ಸಿರಿವಂತರ ಮನೆ ನಾಯಿ ಕೂಡ ಅವರಿಗೆ ಒಂದು ಆಟಿಕೆ ವಸ್ತು ಅಷ್ಟೆ. ಬಡವರ ಜೀವನ ಸಿರಿವಂತರ ಕಾಲಿನ ಚಪ್ಪಲಿ ಬೇಕಾದಾಗ ಹಾಕಿಕೊಂಡು ಬೇಡಾದಾಗ ಬೀದಿಗೆ ಎಸೆಯುವರು. ಈ ಬಡವಳ ಬದುಕಿನ ಬಣ್ಣ ಯಾವುದು ..


 


Rate this content
Log in

Similar kannada story from Tragedy