ಭಕ್ತ
ಭಕ್ತ
ತಮಿಳು ನಾಡಿನಲ್ಲಿ ಪಲ್ಲವ ರಾಜನೊಬ್ಬ ಅವನ ಆಸ್ಥಾನದಲ್ಲಿ ಇದ್ದ ಜ್ಯೋತಿಷಿಯನ್ನ ಕರೆದು ತನಗೆ ಇನ್ನೂ ಎಷ್ಟು ವರ್ಷ ಆಯುಷ್ಯ ಇದೆ ಎಂದು ಕೇಳಿದ . ಅದಕ್ಕೆ ಇದು ಒಂದು ವಿಷಯ ಬಿಟ್ಟು ಬೇರೆ ಏನೇ ಕೇಳಿದರು ಹೇಳುವೆ. ದಯವಿಟ್ಟು ಈ ವಿಷಯ ಕೇಳಬೇಡಿ ಎಂದು ಬೇಡಿಕೊಂಡ . ಆದರೆ ರಾಜ ಅಷ್ಟಕ್ಕೇ ಸುಮ್ಮನಾಗದೆ ಇವನ ಮಿತ್ರನೊಬ್ಬನನ್ನ ಕರೆದು ಕಾರಣ ಕೇಳಿದ. ಅವನು ಸ್ವಾಮಿ ಈ ಪ್ರಚಂಡ ಜ್ಯೋತಿಷಿ ತಿಳಿದಿದ್ದರೂ ಹೇಳಲು ಹೆದರಿದ್ದಾನೆಂದು ಕಾಣುತ್ತೆ.ಅವನು ಪ್ರತಿ ದಿನರಾತ್ರಿ ಎಲ್ಲರೂ ಮಲಗಿದ ಮೇಲೆ ಏನೋ ಬರೆಯುತ್ತಾನೆ ಅದರಲ್ಲಿ ಏನಾದರೂ ಈ ವಿಷಯ ವೂ ಇರಬಹುದು ಆದರೆ ಅದು ಅಷ್ಟು ಸುಲಭ ವಾಗಿ ದೊರೆಯುವುದು ಕಷ್ಟ. ಪ್ರಯತ್ನ ಮಾಡುತ್ತೇನೆ ಎಂದು ಹೇಳಿ ಹೋದ.
ಒಂದು ದಿನ ಒಂದು ತಾಳೆಪತ್ರವನ್ನು ತಂದು ರಾಜನಿಗೆ ಒಪ್ಪಿಸಿ ಸ್ವಾಮಿ ಇದರ ಪ್ರಕಾರ ನಿಮಗೆ ಇನ್ನು ಕೇವಲ ಎರಡು ವರ್ಷಮಾತ್ರ ಆಯುಷ್ಯ ಎಂದ.ಬೇಸರಪಟ್ಟುಕೊಳ್ಳದೆ ಅವನನ್ನ ಕಳುಹಿಸುವ ಮೊದಲು ಕೈಯ್ಯಲ್ಲಿದ್ದ ಚಿನ್ನದ ಕಡಗವನ್ನ ಕೊಟ್ಟು ಕಳುಹಿಸಿದ. ತಾನು ಸತ್ತನಂತರವೂ ಪ್ರಜೆಗಳು ತನ್ನನ್ನ ನೆನೆಯುವಂತೆ ಏನಾದರೂ ಮಾಡಬೇಕೆಂದು ಅರಮನೆಯ ಹಲವು ಕುಶಲಕರ್ಮಿಗಳು ಶಿಲ್ಪಿಗಳು ಮತ್ತು ಅನೇಕ ಕೆಲಸಗಾರರನ್ನು ಕರೆದು ಎರಡು ವರ್ಷಗಳಲ್ಲಿ ಭವ್ಯವಾದ ದೇವಸ್ಥಾನ ನಿರ್ಮಾಣಕ್ಕೆ ಮುಂದಾದ. ರಾಜ ತಾನು ನಿಗದಿ ಪಡಿಸಿದ ದಿನಕ್ಕಿಂತ ಒಂದು
ದಿನ ಮೊದಲೇ ಎಲ್ಲಕೆಲಸವು ಮುಗಿದು ಕುಂಭಾಭಿಷೇಕ ಕ್ಕೆ ದಿನವೂ ನಿಶ್ಚಯವಾಗಿ , ಒಂದು ರಾತ್ರಿ ಅವನ ನೆಚ್ಚಿನ ಮನೆ ದೇವರು ಕನಸಿನಲ್ಲಿ ಬಂದು ರಾಜ ನನಗಾಗಿ ಇಂತಹ ಭವ್ಯ ದೇಗುಲ ನಿರ್ಮಾಣ ಮಾಡಿದ್ದಿಯೆ. ಬಹಳ ಸಂತೋಷ . ಹಾಗೆಯೇ ನೀನು ಒಂದು ತಪ್ಪನ್ನೂ ಮಾಡಿದ್ದಿಯಲ್ಲ . ಜ್ಯೋತಿಷಿ ಯಿಂದ ಕದ್ದು ತಂದು ನಿನ್ನ ಆಯುಷ್ಯವನ್ನು ತಿಳಿದುಕೊಂಡು .ಅದೇ ಕಾರಣಕ್ಕಾಗಿ ಈ ದೇಗುಲ ನಿರ್ಮಾಣ ಮಾಡಿರುವುದು ಅಲ್ಲವೇ.ಒಂದು ವಿಷಯ ಹೇಳಲು ಬಯಸುತ್ತೇನೆ ನೀನು ಕುಂಭಾಭಿಷೇಕ ಇಟ್ಟುಕೊಂಡಿರುವ ದಿನ ನನಗೆ ಬಹಳ ಮುಖ್ಯ ಕೆಲಸ ಒಂದಿದೆ. ಹಾಗಾಗಿ ನಾನು ಅಂದು ಬರಲಾರೆ ಎಂದು ಹೇಳಿ ಮಾಯವಾದ.
ಈ ಸ್ಥಳದಿಂದ ಸ್ವಲ್ಪದೂರ ಒಬ್ಬ ಪುಟ್ಟ ದೇಗುಲವನ್ನು ನಿರ್ಮಾಣ ಮಾಡಿದ್ದ ಆದರೆ ಅದು
ಈ ಭೃಹದಾಕಾರದ ದೇಗುಲದ ಮುಂದೆ ಇದ್ದುದನ್ನು ಯಾರೂ ಗಮನಹರಿಸಿರಲಿಲ್ಲ. ದೇಗುಲದ ಭ್ರಹ್ಮ ಕಲಶ ಸ್ಥಾಪನೆ ಮತ್ತು ಕುಂಭಾಭಿಷೇಕ ರಾಜ ನಿಗದಿಪಡಿಸಿದ ದಿನವೇ ಇಲ್ಲೂ ಇದ್ದ ಕಾರಣ ಮತ್ತು ರಾಜನಿಗಿಂತ ಇವನು ಆ ದೇವನ ಪರಮ ಭಕ್ತನಾದ ಕಾರಣ ಅಂದು ರಾಜನಿಗೆ ಬರಲು ಆಗದೆಂದು ತಿಳಿಸಿದ್ದ. ಕೊನೆಗೆ ರಾಜ ಎಷ್ಟೇ ದೊಡ್ಡ ದೇಗುಲ ನಿರ್ಮಾಣ ಮಾಡಿದ್ದರೂ ಜನ ಮೊದಲು ಆ ಪುಟ್ಟ ದೇಗುಲಕ್ಕೆ ಮೊದಲು ಹೋಗಿ ಅದರ ದೇವರ ದರ್ಶನ ಪಡೆದು ನಂತರ ವಾಸ್ತು ಶಿಲ್ಪವನ್ನು ಹೊಗಳಲು ಮಾತ್ರ ಈ ಭೃಹದಾಕಾರ ವಾದ ದೇವಾಲಯಕ್ಕೆ ಬರುವಂತಾಯಿತು.