Vijaya Bharathi

Abstract Drama Others

2  

Vijaya Bharathi

Abstract Drama Others

ಬದುಕಲು ಬಿಡಿ

ಬದುಕಲು ಬಿಡಿ

3 mins
104


ಅಂದು ಶಶಿಯ ಗಂಡ ಶಾಂ ಇದ್ದಕ್ಕಿದ್ದಂತೆ ತೀರಿಕೊಂಡಾಗ ಎಲ್ಲರಿಗೂ ಶಾಕ್ ಆಯಿತು.


ಒಂದು ಗಳಿಗೆ ಡೆತ್ ಕನ್ಫರಂ ಆಗುವ ತನಕ ಯಾರಿಗೂ ನಂಬಿಕೆಯೇ ಬರಲಿಲ್ಲ. ಹಾಗಂತ ಶಾಂ ತುಂಬಾ ಚಿಕ್ಕ ಪ್ರಾಯದವನಲ್ಲ. ಅವನಿಗೂ ಅರವತ್ತೈದು ಆಗಿತ್ತು. ಆದರೂ ಸಡನ್ ಆಗಿ ಹೋಗಿದ್ದರಿಂದ ಅವನ ಹೆಂಡತಿ ಶಶಿ ಮತ್ತು ಮಗಳು ರೇಖಾಗೆ ಸಹಿಸಲಾಗದ ದು:ಖವಾಯಿತು. ಒಬ್ಬಳೇ ಮಗಳು ಬಾಂಬೆಯಲ್ಲಿ ದ್ದು ದ್ದರಿಂದ ಅವಳು ಬಂದ ನಂತರ ಉತ್ತರ ಕ್ರಿಯೆಗಳಾದವು.


ಆ ಮನೆಯಲ್ಲಿ ಶಾಂ ನ ಮದುವೆಯಾಗದ ಅಕ್ಕ ಅವನ ಜೊತೆಯಲ್ಲೇ ಇದ್ದಳು. ಕಾರಣಾಂತರಗಳಿಂದ ಮದುವೆಯಾಗದೆ ಹಾಗೇ ಉಳಿದು ಬಿಟ್ಟಿದ್ದ ಶಾಂ ನ ಅಕ್ಕ ಶಂಕರಿ ,ಶಶಿಗೆ ಅತ್ತೆಯಂತೆಯೇ ಇರುತ್ತಿದ್ದಳು. ತಮ್ಮನಿಗೆ ಅಳಿಯ ಬಂದಿದ್ದರೂ, ತಮ್ಮ ಮತ್ತು ತಮ್ಮನ ಹೆಂಡತಿ ತನ್ನ ತೊತ್ತಿನವರಂತೆ ವರ್ತಿಸುತ್ತಿದ್ದಳು. ಮದುವೆಯಾಗದೆ ಉಳಿದಿದ್ದ ಅವಳಿಗೆ ಶಾಂ ಮತ್ತು ಶಶಿಯ ಸುಖೀ ದಾಂಪತ್ಯ ವನ್ನು ನೋಡಿ ಸಹಿಸುತ್ತಿರಲಿಲ್ಲ. ತನ್ನ ಅಸಹನೆಯನ್ನು ಶಶಿಯ ಮೇಲೆ ಕಾರುತ್ತಿದ್ದಳು.ದಿನ ಬೆಳಗಾದರೆ ಏನಾದರೊಂದು ಕಾರಣಕ್ಕೆ ಶಶಿಯ ಮೇಲೆ ಹೌಹಾರುತ್ತಿದ್ದಳು.


ತನ್ನ ಸ್ವಂತ ಅಕ್ಕನಿಗಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದ ಶಾಂ, ತನ್ನ ಹೆಂಡತಿ ಶಶಿಗೂ ಅಕ್ಕನನ್ನು ಹೊಂದಿಕೊಂಡು ಹೋಗುವಂತೆ ಹೇಳುತ್ತಿದ್ದ.ತನ್ನ ಗಂಡನಿಗೋಸ್ಕರ ಶಶಿ,ತನ್ನ ಅತ್ತಿಗೆ ಕೊಡುವ ಕಿರುಕುಳ ಗಳೆ ಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಳು. ಶಾಂ ಮಗಳು ರೇಖಾಗೆ ತಾಯಿಯ ಕಷ್ಟಗಳನ್ನು ನೋಡಿ ತುಂಬಾ ದು:ಖವಾಗುತ್ತಿತ್ತು. ಎಷ್ಟೋ ಬಾರಿ ಅವಳು ತನ್ನ ತಂದೆ ಶಾಂ ಜೊತೆ ಇದೇ ಕಾರಣಕ್ಕೆ ದೊಡ್ಡ ವಾದವಿವಾದಗಳ ನ್ನೇ ಮಾಡುತ್ತಿದ್ದಳು. ಆಗೆಲ್ಲಾ ಶಾಂ ಮಗಳಿಗೆ ಬುದ್ಧಿ ಹೇಳಿ ಬಾಯಿ ಮುಚ್ಚಿ ಸುತ್ತಿದ್ದ.


ಆದರೆ ಈಗ ಶಾಂ ಹೋಗಿಯಾಗಿತ್ತು.ತನ್ನ ತಾಯಿ ಯ ಮುಂದಿನ ಗತಿ ಏನು? ಎಂದು ರೇಖಾ ಯೋಚಿಸುತ್ತಿದ್ದಳು. ಶಾಂ ಹೋದ ದಿನದಿಂದಲೂ ಅವನ ಅಕ್ಕ ಶಂಕರಿ ತನ್ನ ನಾದಿನಿ ಶಶಿಯ ಮೇಲೆ ಒಂದೇ ಸಮನೆ ಬೊಬ್ಬೆ ಹಾಕುತ್ತಿದ್ದಳು. "ಅಯ್ಯೋ ನನ್ನ ತಮ್ಮನ್ನ ನೀನು ನುಂಗಿ ಬಿಟ್ಟೆಯಲ್ಲೇ,ಇನ್ನು ನನಗೆ ಯಾರು ದಿಕ್ಕು,ನಿನ್ನ ಕಾಲ್ಗುಣ ಕೆಟ್ಟದ್ದು",

ಅತ್ತೆ ಯ ಈ ಕೂಗಾಟಗಳನ್ನು ಕೇಳುತ್ತಿದ್ದ ರೇಖಾ ಚೆನ್ನಾಗಿ ದಬಾಯಿಸುತ್ತಿದ್ದಳು.


"ಅತ್ತೆ ಸ್ವಲ್ಪ ನಿಮ್ಮ ಬಾಯಿಗೆ ಬೀಗ ಹಾಕಿ ಕೊಳ್ಳಿ. ಅಪ್ಪನ ಸಾವಿಗೆ ಅಮ್ಮ ಹೇಗೆ ಕಾರಣ ಆಗ್ತಾಳೆ? ಮನುಷ್ಯ ಹುಟ್ಟಿದ ಕ್ಷಣದಲ್ಲೇ ಅವನ ಸಾವಿನ ಗಳಿಗೆಯೂ ನಿರ್ಧಾರ ವಾಗಿರುತ್ತದೆ. ಯಾರ ಸಾವಿಗೆ ಯಾರೂ ಹೊಣೆಯಲ್ಲ. ಅಮ್ಮ ನನ್ನು ಏನಾದರೂ ಅಂದರೆ ನಾನು ಸುಮ್ಮನೆ ಇರಲ್ಲ". ರೇಖಾ ಚೆನ್ನಾಗಿ ದಬಾಯಿಸುತ್ತಿದ್ದಳು.ಅವಳಿಗೆ ಹೆದರಿ ಶಂಕರಿ ತೆಪ್ಪಗಾಗುತ್ತಿದ್ದಳು.


ಶಾಂ ನ ತಿಥಿ ವೈಕುಂಠ ಎಲ್ಲವೂ ಮುಗಿದಿತ್ತು. ತನ್ನ ತಾಯಿ ಶಶಿ ಹಿಂದಿನಂತೆಯೇ ಲಕ್ಷಣವಾಗಿರಬೇಕು,ಯಾರು ಏನೂ ಹೇಳಬಾರದು ಎಂದು ರೇಖಾ ಹೇಳಿದ್ದರಿಂದ, ಶಶಿ ಗಂಡನಿದ್ದಾಗ ಹೇಗಿರುತ್ತಿದ್ದಳೋ ಹಾಗೇ ಇರುತ್ತಿದ್ದಳು. ಬಳೆ,ಸರ,ಕುಂಕುಮ, ಕಾಲುಂಗುರ ಯಾವುದನ್ನು ತೆಗೆಯದೆ, ಮಾಮೂಲಿ ನಂತೆಯೇ ಇದ್ದಾಗ,ಶಂಕರಿ ಕೂಗಾಡಿದ್ದೇ ಕೂಗಾಡಿ ದ್ದು. ಆಗೆಲ್ಲಾ ರೇಖಾ ಮಧ್ಯೆ ಬಂದು , ತನ್ನ ಅತ್ತೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು.

"ಅತ್ತೆ,ಯಾವ ಹೆಣ್ಣು ಮಗಳೂ ಸಹ ಗಂಡನಿಗಾಗಿ ಕುಂಕುಮ,ಹೂವು ಬಳೆ ಸರಗಳನ್ನು ತೆಗೆದಿಡಬೇಕಾಗಿಲ್ಲ.ಇವೆಲ್ಲವೂ ಅವಳ ಜನ್ಮಜಾತ ಹಕ್ಕು. ಇನ್ನು ಅವಳು ಮದುವೆಯಾಗಿರುವ ಸಂಕೇತ ವಾಗಿ ತಾಳಿ ಕಾಲುಂಗುರ ಇರುತ್ತದೆ. ಅದನ್ನೂ ತೆಗೆಯಬೇಕಾಗಿಲ್ಲ. ಸಮಾಜದಲ್ಲಿ ತಾಳಿ ಕಾಲುಂಗುರ ಗಳಿದ್ದರೆ ಕಾಮುಕರ ನೋಟ ಅವಳ ಮೇಲೆ ಇರುವುದಿಲ್ಲ. ಹೀಗಾಗಿ ಅವಳ ಸ್ವಯಂ ರಕ್ಷಣೆ ಗಾಗಿ ಇದೂ ಸಹ ಅವಳ ಮೈಮೇಲೆ ಇರುವುದು ಒಳ್ಳೆಯದು. ಅವಳಿಗೆ ಗಂಡನಿಲ್ಲವೆಂಬ ವಿಷಯ ಇಡೀ ಪ್ರಪಂಚಕ್ಕೆ ತಿಳಿಯಬೇಕಾಗಿಲ್ಲ. ಮನಸ್ಸಿನ ನಿಗ್ರಹವಿದ್ದ ವರಿಗೆ ಹೊರಗಿನ ಬಣ್ಣ ಬಣ್ಣದ ಬಟ್ಟೆ ಗಳು ಏನೂ ಮಾಡುವುದಿಲ್ಲ. ಅವಳು ಅವಳ ಜೀವನ ಸಂಗಾತಿಯನ್ನು ಕಳೆದುಕೊಂಡು ಅತ್ಯಂತ ‌ದು:ಖದಲ್ಲಿರುವಾಗ, ಅವಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೇ ಹೊರತು ಕುಟುಕು ಮಾತುಗಳಿಂದ ಅವಳ ಮನಸ್ಸನ್ನು ಘಾಸಿ ಮಾಡುವುದಲ್ಲ, ಅವಳನ್ನು ಅವಳ ಪಾಡಿಗೆ ಬದುಕಲು ಬಿಡಿ".


ರೇಖಾಳ ಮಾತಿಗೆ ಸ್ಥಬ್ಧರಾಗಿ ಹೋದ ಶಂಕರಿ," ಹಾಗಾದರೆ ನನ್ನ ತಮ್ಮ ಶಾಂ ಹೋದ ಮೇಲೆ ನನಗಿಲ್ಲೇನು ಕೆಲಸ,ನಾನೂ ಸಹ ಯಾವುದಾದರೂ ವೃದ್ಧಾಶ್ರಮ ನೋಡಿಕೊಳ್ಳುತ್ತೇನೆ'"ಎಂದಾಗ, ರೇಖಾಳಿಗೆ ತುಂಬಾ ಸಮಾಧಾನವಾಯಿತು. ಅವಳು ತಕ್ಷಣ, "ಅದೂ ಒಳ್ಳೆಯದೇ ಅತ್ತೆ, ಇನ್ನು ಮೇಲೆ ಅಮ್ಮ ನನ್ನು ನಾನು ನನ್ನ ಮನೆ ಬಾಂಬೆಗೆ ಕರೆದುಕೊಂಡು ಹೋಗಬೇಕೆಂದುಕೊಂಡಿದ್ದೇನೆ. ಇನ್ನೊಂದು ತಿಂಗಳು ಇಲ್ಲಿದ್ದು ನಾನು ಎಲ್ಲಾ ವ್ಯವಸ್ಥೆ ಮಾಡುತ್ತೇನೆ . ನೀವು ನಿಮ್ಮ ವ್ಯವಸ್ಥೆ ಮಾಡಿಕೊಳ್ಳುವುದು ಸರಿಯಾಗಿಯೇ ಇದೆ'"


ರೇಖಾಳ ನೇರ ನುಡಿಯನ್ನು ಕೇಳಿಸಿಕೊಂಡ ಶಶಿ ರೇಖಾಳನ್ನೂ ರೂಮಿನೊಳಗೆ ಕರೆದು "ರೇಖಾ ವಯಸ್ಸಿನಲ್ಲಿ ಹಿರಿಯರಾದ ನಿಮ್ಮ ಅತ್ತೆ ಯ ಜೊತೆ ಹೀಗೆ ನೇರವಾಗಿ ಕಟುವಾಗಿ ಮಾತನಾಡಬಾರದಾಗಿತ್ತು"ಎಂದು ಹೆದರುತ್ತಾ ಹೇಳಿದಾಗ,ರೇಖಾ ತನ್ನ ಅಮ್ಮನಿಗೂ ಸಹ ಕಡ್ಡಿ ತುಂಡು ಮಾಡಿದಂತೆ ಉತ್ತರ ಕೊಟ್ಟಳು.


"ಅಮ್ಮ, ಇನ್ನು ನೀನು ಅವರಿಗೆ ಹೆದರಿದ್ದು ಸಾಕು, ಅಪ್ಪ ಇದ್ದಾಗಲೇ ನಿನ್ನನ್ನು ಹುರಿದು ಮುಕ್ಕುತ್ತಿದ್ದ ಆ ನಿನ್ನ ಅತ್ತಿಗೆ ಇನ್ನು ಮುಂದೆ ನಿನ್ನನ್ನು ಸುಮ್ಮನೆ ಬಿಡುತ್ತಾರಾ?ಆ ಹತ್ತನೇ ದಿನ ಅವರಾಡಿದುದನ್ನು ಕೇಳುತ್ತಾ ನನ್ನ ಮೈ ಉರಿಯುತ್ತಿತ್ತು. ಅದೇನೇನೋ ಬೇಡದ ಶಾಸ್ತ್ರ ಗಳನ್ನು  ಮಾಡಿಸಬೇಕೆಂದು ಎಷ್ಟು ಹಠ ಮಾಡುತ್ತಿದ್ದರು. ಆಗ ನಾನು ಚೆನ್ನಾಗಿ. ದಬಾಯಿಸಿ ಬಾಯಿ ಮುಚ್ಚಿ ಸಿದ್ದರಿಂದ ನಿನ್ನ ಮನಸ್ಸಿಗೆ ನೋವಾಗುವ ಪ್ರಕರಣಗಳಾಗಲಿಲ್ಲ. ಬಳೆಗಳನ್ನು ಒಡೆಯುವುದಂತೆ,ಕುಂಕುಮ ಅಳಿಸುವುದಂತೆ,ಹೂ ಕಿತ್ತು ಹಾಕುವುದಂತೆ , ನೀನು ವಿಧವೆ ಯಂತೆ.ಅಬ್ಬಾ ಏನು ಪದವಮ್ಮ ಅದು, ಅದನ್ನು ನಿಘಂಟಿನಿಂದಲೇ ತೆಗೆದು ಬಿಡಬೇಕು,ನನಗೆ ಅಷ್ಟು ಸಿಟ್ಟು ಬರುತ್ತೆ ಆ ಪದ ಕಿವಿಗೆ ಬಿದ್ದರೆ. ಏನಮ್ಮಾ ಈ ಇಪ್ಪತ್ತೊಂದನೇ ಶತಮಾನದ ಲ್ಲಿರುವ ನಮಗೆ ಇವೆಲ್ಲವೂ ಬೇಕಾ?, ಇವತ್ತು ಸೋ ಕಾಲ್ಡ್ ಮ್ಯಾರೀಡ್ ‌ಹೆಣ್ಣುಮಕ್ಕಳು ಎಷ್ಟು ಜನ ಸುಮಂಗಲಿಯರಂತೆ ಅಲಂಕಾರ ಮಾಡಿ ಕೊಳ್ಳುತ್ತಾರೆ ಹೇಳು. ಕೂದಲು ಬಾಚಿ ಬೆರಳು ಕಟ್ಟಿಕೊಳ್ಳದೆ ಹಾಗೆ ಬಿಚ್ಚಿ ಬಿರಿ ಹುಯ್ದ ಕೂದಲು, ಹಣೆ ಕೈ ಕತ್ತುಗಳು ಖಾಲಿ ಖಾಲಿ.ಅವರಿಗೆ ಯಾರಾದರೂ ನಿಬಂಧನೆಗಳನ್ನು ಹೇರುತ್ತಾರಾ?ಅಂದ ಮೇಲೆ ಗಂಡನಿಲ್ಲದ ಹೆಂಗಸರಿಗೇಕೆ ಏನೇನೋ ಕಟ್ಟಲೆಗಳು? ಈ ಪ್ರಪಂಚದಲ್ಲಿ ಎಲ್ಲರಿಗೂ ವೈಯಕ್ತಿಕ ಸ್ವಾತಂತ್ರ್ಯವಿದೆ. ಹೀಗಾಗಿ ನಮಗೆ ಇಷ್ಟ ಬಂದಂತೆ ನಾವು ಬದುಕಬೇಕು. ಯಾರಿಗೆ ಯಾರು ನಿಬಂಧನೆಗಳನ್ನು ಹೇರುವಂತಿಲ್ಲ. ಮೊದಲೇ ಗಂಡನನ್ನು ಕಳೆದುಕೊಂಡು ನೋವಿನಲ್ಲಿರುವ ಹೆಣ್ಣಿಗೆ ಗಾಯದ ಮೇಲೆ ಬರೆ ಎಳೆದಂತೆ ಹೀಗೆಲ್ಲ ನಡೆದುಕೊಳ್ಳುವುದು ಎಷ್ಟರ ಮಟ್ಟಿಗಿನ ಮಾನವೀಯತೆ?ನನಗೆ ಇದು ಸರಿ ಬರುವುದಿಲ್ಲ. ಇನ್ನು ನೀನು ನನ್ನೊಂದಿಗೆ ಬಾಂಬೆಗೆ ಹೊರಡು. ನಿನ್ನ ಮನಸ್ಸಿಗೆ ಸ್ವಲ್ಪ ಬದಲಾವಣೆ ಸಿಗುತ್ತದೆ.ನಿನಗಿಷ್ಟದಂತೆ ಬದುಕು.ಅಲ್ಲಿ ನಿನ್ನನ್ನು ಟೀಕಿಸುವವರು ನೋಯಿಸುವವರು ಯಾರೂ ಇರುವುದಿಲ್ಲ.ಅಪ್ಪನಿಗೋಸ್ಕರ ಈ ಅತ್ತೆಯನ್ನು ಇಷ್ಟು ವರ್ಷ ಸಹಿಸಿದ್ದು ಸಾಕು."


ರೇಖಾ ಮಾತು ಮುಗಿಸಿದಾಗ,ಶಶಿಗೆ ಆಶ್ಚರ್ಯ ವಾಯಿತು.ನಿನ್ನೆ ಮೊನ್ನೆ ನಮ್ಮ ಕಣ್ಣೆದುರು ಬೆಳೆದ ಮಗು ಎಷ್ಟು ಎತ್ತರಕ್ಕೆ ಬೆಳೆದು ಬಿಟ್ಟಿದ್ದಾಳೆ ಅನ್ನಿಸಿತು. ಮಗಳನ್ನು ತಬ್ಬಿ, ಹಣೆಗೆ ಮುತ್ತಿಟ್ಟು, "ಐ ಆಮ್ ಪ್ರೌಡ್ ಆಫ್ ಯು ಬೇಬಿ"ಎಂದಳು. ಇಂತಹ ವೈಚಾರಿಕತೆ ಯುಳ್ಳ ದಿಟ್ಟ ಮಗಳನ್ನು ಪಡೆದುದರ ಬಗ್ಗೆ ಹೆಮ್ಮೆ ಎನಿಸಿತು.


Rate this content
Log in