STORYMIRROR

Shridevi Patil

Abstract Inspirational Others

4  

Shridevi Patil

Abstract Inspirational Others

ಬಾಳೇ ಬಂಗಾರ

ಬಾಳೇ ಬಂಗಾರ

2 mins
373


ಶಾಂತಮ್ಮ ನಿವೃತ್ತ ಪ್ರಾಥಮಿಕ ಶಾಲಾ ಶಿಕ್ಷಕಿ. ತನ್ನಂತೆಯೇ ಶಿಕ್ಷಕರಾಗಿದ್ದ ವಾಸುದೇವ ಅವರನ್ನು ಮದುವೆಯಾಗಿ , ಮೂವತ್ತು ವರ್ಷಗಳ ಕಾಲ ಸುಖ ಸಂಸಾರವನ್ನು ಹೊಂದಾಣಿಕೆ ಸೂತ್ರದಡಿ ನಡೆಸಿದ ಶಾಂತಮ್ಮ , ಹೃದಯಾಘಾತ ಆಗಿ ವಾಸುದೇವ್ ಅವರು ತೀರಿ ಹೋದಾಗ ಅಕ್ಷರಶಃ ಅನಾಥೆಯಾದರು. ಮೂರು ಜನ ಗಂಡು ಮಕ್ಕಳು , ಇಬ್ಬರು ಹೆಣ್ಣು ಮಕ್ಕಳಿದ್ದರೂ ಸಹ ಒಂದು ಹೆಣ್ಣಿಗೆ ತಂದೆ , ತಾಯಿ , ಅಕ್ಕ ತಂಗಿಯರು , ಅಣ್ಣ ತಮ್ಮಂದಿರಿಗಿಂತ ಗಂಡನೆ ತನ್ನ ಸರ್ವಸ್ವ ಎಂದು , ತನ್ನನ್ನು ಆತನಿಗೆ ಸಮರ್ಪಿಸಿಕೊಂಡು , ಆತನೇ ತನ್ನ ಜೀವ ಮತ್ತು ಜೀವನ ಎಂದು ತಿಳಿದು ನಡೆಯುವ ಆಕೆಗೆ ಎಷ್ಟೇ ಜನ ಮಕ್ಕಳಿದ್ದರೂ , ಸಂಬಂಧಿಕರು ಇದ್ದರೂ ಕೂಡ ಗಂಡನ ಪ್ರೀತಿಯಾಗಲಿ , ಗಂಡ ಮಾಡಿದಂತೆ ಕಾಳಜಿಯಾಗಲಿ , ಆತನ ಮಮತೆಯಾಲಿ , ಅದು ಯಾರಿಂದಲೂ ಸಿಗಲು ಸಾಧ್ಯವೇ ಇಲ್ಲ. ಅಂತದ್ದರಲ್ಲಿ ಒಂದು ಸಣ್ಣ ಜಗಳವಾಗಲಿ , ವಾದವಾಗಲಿ , ಬಾಯಿ ಮಾತಿಗೂ ಗದರದ ವಾಸುದೇವನನ್ನು ಕಳೆದುಕೊಂಡ ಶಾಂತಮ್ಮ ಮಕ್ಕಳು , ಮೊಮ್ಮಕ್ಕಳು , ಸೊಸೆಯಂದಿರ ಜೊತೆಗೆ ಸುಖವಾದ ಜೀವನ ಮಾಡುತ್ತಿದ್ದರು.


ಶಾಂತಮ್ಮ ತನ್ನ ಎಲ್ಲ ಮಕ್ಕಳಿಗೆ , ಅವರು ಚಿಕ್ಕವರಿದ್ದಾಗಿನಿಂದಲೇ ಸಂಸ್ಕಾರದ ಪಾಠ ಮಾಡಿದರು. ತಮ್ಮ ಸಂಸ್ಕೃತಿಯ ಕುರಿತು ತಿಳಿಸಿದರು. ಹೊಂದಾಣಿಕೆಯ ಬೀಜವನ್ನು ಅವರ ತಲೆಯಲ್ಲಿ ಬಿತ್ತಿದರು. ಜಗಳ ಎಂದರೇನು ? ಅದ ಉಂಟಾಗುವ ಬಗೆ, ಅದರಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಕುರಿತು ಸಾಕಷ್ಟು ತಿಳುವಳಿಕೆ ನೀಡಿದ್ದರು. ಒಗ್ಗಟ್ಟಿನ ಮಹತ್ವವನ್ನು ಸಾರಿ , ಸಾರಿ ಹೇಳಿದ್ದರು. ಅನ್ನ ತಮ್ಮಂದಿರನ್ನು ಗೆಳೆಯಂದಿರ ರೀತಿಯಲ್ಲಿ ಬೆಳೆಸಿದ್ದರು. ಗುಟ್ಟು ಎನ್ನುವುದು ಒಬ್ಬರ ಹತ್ತಿರ ಇರದಂತೆ ಎಲ್ಲರೂ ಬಿಚ್ಚು ಮನಸ್ಸಿನಿಂದ ಸ್ವಚ್ಛಂದವಾಗಿ ಮಾತನಾಡುವುದನ್ನು ಕಲಿಸಿ ಕೊಟ್ಟಿದ್ದರು.


ಬಾಲ್ಯದಲ್ಲಿ ದೊರಕಿದ ಈ ರೀತಿಯ ಮಹತ್ವಪೂರ್ಣ ಶಿಕ್ಷಣದಿಂದ ಶಾಂತಮ್ಮನ ಮಕ್ಕಳೆಲ್ಲರೂ ಸಂಸ್ಕಾರವಂತರಾಗಿ , ಗುಣವಂತರಾಗಿ , ಉತ್ತಮ ಪ್ರಜೆಗಳಾಗಿ , ಸಮಾಜದಲ್ಲಿ ಮಾದರಿ ಮಕ್ಕಳಾಗಿದ್ದರು. ಮಕ್ಕಳು ಇಷ್ಟ ಪಟ್ಟವರನ್ನೇ ಮದುವೆಯಾಗಲು ಅನುಮತಿ ಕೊಟ್ಟು , ಆ ಸೊಸೆಯರು ಸಹ ತಮ್ಮ ಹೆಣ್ಣು ಮಕ್ಕಳಂತೆ ಎಂದು ಭಾವಿಸಿ , ಅವರಿಗೂ ಸಹ ಪ್ರೀತಿ ಮಮತೆಯ ಧಾರೆಯೆರೆದ ಮಹಾನುಭಾವಿ ಶಾಂತಮ್ಮ. ಇದರಿಂದ ಆ ಸೊಸೆಯರೂ ಸಹ ಅತ್ತೆಯನ್ನು ಅಮ್ಮನಂತೆ ನೋಡಿಕೊಳ್ಳುತ್ತಿದ್ದರು. ಅತ್ತೆ ಹಾಕಿದ ಗೆರೆ ದಾಟುತ್ತಿರಲಿಲ್ಲ. ಇದರಿಂದ ಮನೆಯಲ್ಲಿ ಶಾಂತಿ , ನೆಮ್ಮದಿ ನೆಲೆಸಿತ್ತು. ಕಿರಿಕಿರಿ ಆಗುವಂತೆ ಯಾರೂ ನಡೆದು ಕೊಳ್ಳುತ್ತಿರಲಿಲ್ಲ. ಯಾವುದೇ ಹೊಸ ಕೆಲಸ ಮಾಡುವ ಮೊದಲು ಮನೆಯವರೆಲ್ಲ ಕುಳಿತು , ಚರ್ಚಿಸಿ , ಒಮ್ಮತದಿಂದ ಒಪ್ಪಿದರೆ ಮಾತ್ರ ಸಂತೋಷದಿಂದ ಆ ಕೆಲಸವನ್ನು ಶುರು ಮಾಡುತ್ತಿದ್ದರು. ಯಾರಾದರೂ ಒಬ್ಬರು ಒಪ್ಪದೇ ಹೋದರೂ ಸಹ ಅಷ್ಟೇ ಸಂತೋಷದಿಂದ ಆ ಕೆಲಸ ಬಿಡುತ್ತಿದ್ದರು. 


ಶಾಂತಮ್ಮ ಮೊಮ್ಮಕ್ಕಳನ್ನು ಸಹ ಹಾಗೆಯೇ ಬೆಳೆಸಲು ಪ್ರಯತ್ನಿಸುತ್ತಿದ್ದರು. ಆದರೆ ಮನೆಯ ಅಡಿಪಾಯ ಭದ್ರವಾಗಿದ್ದರಿಂದ , ಆ ಮನೆಯ ಮೊಮ್ಮಕ್ಕಳು ಸಹ ಅಪ್ಪಂದಿರಂತೆ ಒಳ್ಳೆಯ ಸನ್ನಡೆತೆಯ ಮಕ್ಕಳಾಗಿ ಬೆಳೆಯತೊಡಗಿದ್ದರು. 


ಆ ಮನೆಯಲ್ಲಿ ಹೊಂದಾಣಿಕೆಯೇ ಮೂಲ ಮಂತ್ರವಾಗಿತ್ತು , ಒಗ್ಗಟ್ಟೆ ಅವರೆಲ್ಲರ ಬಲವಾಗಿತ್ತು. ಅಪ್ಪ ಅಮ್ಮನ ಶ್ರಮದ ಕೂಸು ಆ ಮನೆಯಲ್ಲಿ ನಲಿಯುತ್ತ ಓಡಾಡಿದಂತೆ ಭಾಸವಾಗುತ್ತಿತ್ತು.


ವಯಸ್ಸಾದ ಶಾಂತಮ್ಮ ನಡುಮನೆಯ ಆ ದೊಡ್ಡ ಸಾಗವಾನಿ ಖುರ್ಚಿಯ ಮೇಲೆ ಕುಳಿತು ತನ್ನ ಸುಖವಾದ ಸಂಸಾರ ಕಂಡು ಖುಷಿ ಪಡುತ್ತಿದ್ದಳು. ಈ ರೀತಿಯ ಒಂದು ತುಂಬು ಕುಟುಂಬ ಕಟ್ಟಿದ ನನ್ನ ಬಾಳು ಬಂಗಾರವಾಯಿತು . ನನ್ನ ಮಕ್ಕಳೆಲ್ಲರೂ ಕೂಡ ಒಬ್ಬವರನ್ನೊಬ್ಬರು ಅರ್ಥ ಮಾಡಿಕೊಂಡು , ಹೊಂದಿಕೊಂಡು ಹೊಗುವುದರ ಮೂಲಕ ಅವರ ಬಾಳು ಸಹ ಬಂಗಾರವಾಯಿತೆಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಳು.


Rate this content
Log in

Similar kannada story from Abstract