Gireesh pm Giree

Abstract Children Stories Drama

4.5  

Gireesh pm Giree

Abstract Children Stories Drama

ಬಾಲ್ಗಾಗಿ ಕಸರತ್ತು

ಬಾಲ್ಗಾಗಿ ಕಸರತ್ತು

2 mins
405


ಚಿಕ್ಕದನಿಂದಲೂ ಕ್ರಿಕೆಟ್ ಒಂಥರಾ ಆಕರ್ಷಣೆ ಆಟ . ಸಂಜೆಯಾದರೆ ಸಾಕಿತ್ತು ಗೆಳೆಯರನ್ನು ಸೇರಿಸಿ ಕ್ರಿಕೆಟ್ ಆಡುವುದು ಸಾಮಾನ್ಯವಾಗಿತ್ತು. ಎರಡು ಮೂರು ಜನ ಇರುತ್ತಿದ್ದ ನಾವುಗಳು ಬೇಸಿಗೆ ರಜಾ ಬಂತೆಂದರೆ ಸಾಕಿತ್ತು ಅಜ್ಜಿಮನೆಗೆಂದು ಬರುತ್ತಿದ ಗೆಳೆಯರನ್ನು ಸೇರಿಸಿ ಕ್ರಿಕೆಟ್ ಆಡುತಿದ್ದೆವು. ಅವರೆಲ್ಲರಿಗೂ ಮೈದಾನ ನಮ್ಮ ಮನೆಯಂಗಳವೇ ಆಗಿತ್ತು. ರಜಾದಿನಗಳಲ್ಲಿ ಅಂಗಳದ ಚಿತ್ರಣ ಅದ್ಬುತವಾಗಿತು. ಹೀಗೆ ಒಂದು ದಿನ ಆಡುವಾಗ ಗೆಳೆಯನೊಬ್ಬ ಹೊಡೆದ ಚೆಂಡು ನೇರವಾಗಿ ಬಾವಿಗೆ ಬಿತ್ತು . ಇನ್ನೇನು ಮಾಡುವುದೆಂದು ಎಲ್ಲರೂ ಬಾಯಿ ಬಾಯಿ ನೋಡಿದರು. ಅಮ್ಮ ದೊಡ್ಡಮ್ಮ ಒಳಗಡೆಯಿದ್ದ ಕಾರಣ ಗೆಳೆಯ ನನ್ನಲ್ಲಿ ಒಂದು ಉಪಾಯ ಹೇಳಿದ . ಅವರು ಬರುವುದರ ಒಳಗೆ ನಮಗೆ ಬಾಲ್ ತೆಗೆಯಬಹುದು ಹೇಗೂ ರಾಟೆಗೆ ಹಗ್ಗ ಉಂಟು ಅದಕ್ಕೆ ಬಕೆಟ್ ಕಟ್ಟಿ ಬಿಟ್ಟರೆ ಆಯಿತೆಂದು. ಅಲ್ಲೇ ಪಕ್ಕದಲ್ಲಿದ್ದ ಬಕೆಟ್ಟನ್ನು ಹಗ್ಗಕ್ಕೆ ಕಟ್ಟಿ ಪಾತಾಳಕ್ಕೆ ಬಿಟ್ಟ. ನಾವೆಲ್ಲರೂ ಬಾವಿಕಟ್ಟೆಗೆ ಸುತ್ತುವರಿದೆವು. ಮೆಲ್ಲ ಮೆಲ್ಲನೆ ಬಕೆಟ್ ಇಳಿಸಿದ್ದೇ ತಡ ಆ ಮಹಾರಾಯ ಯಾವ ಗಂಟುಹಾಕಿ ಬಕೆಟ್ ಕಟ್ಟಿದನೋ ದೇವನೇ ಬಲ್ಲ. ಇನ್ನೇನು ಬಾಲ್ ಹತ್ತಿರ ಮುಟ್ಟುದರೊಳಗೆ ಹಗ್ಗ ಬಿಚ್ಚಿತು . ನಾನು ತಲೆ ಮೇಲೆ ಕೈಯಿಟ್ಟು ಒಂದೇ ಸಮನೆ ಅವನಿಗೆ ಬಯ್ಯಲು ಶುರು ಮಾಡಿದೆ "ಯೇ ಬೋಳ ಅದು ಅಲ್ಯುಮಿನಿಯಂ ಬಕೆಟ್ ಬಿದ್ದ ವಿಚಾರ ದೊಡ್ಡಮ್ಮನಿಗೆ ಗೊತ್ತಾದ್ರೆ ದೊಡ್ಡ ಮಹಾಭಾರತ ನಡೆಯುತ್ತದೆಯೆಂದೆ. ಅದಕ್ಕೂ ಕೇಳದೆ ಈ ಪುಣ್ಯಾತ್ಮಒಂದು ಹೆಜ್ಜೆ ಮುಂದೆ ಹೋಗಿ ಮೂಲೆಯಲ್ಲಿದ್ದ ಬಿದಿರಿನ ಕೋಲಿನ ಸಹಾಯದಿಂದ ಮೊದಲು ಬಕೆಟ್ ಎತ್ತಲು ಮುಂದಾದ . ಬಕೆಟ್ ಇನ್ನೇನೂ ಮೇಲೇರುವ ಹೊತ್ತಲ್ಲಿ ಬಂದ್ರು ನೋಡಿ ದೊಡ್ಡಮ್ಮ ಅಯ್ಯೋ ರಾಮ ಎನ್ನುತ್ತ ಕೋಲು ಬಿಟ್ಟು ಎಲ್ಲರೂ ಓಡಿಹೋದರು . ಬಡಪಾಯಿ ನಾನಾದ್ರು ಎಲ್ಲಿಗೆ ಹೋಗಲಿ ಅಲ್ಲೇ ನಿಂತುಬಿಟ್ಟೆ. ಶುರುವಾಯಿತು ನೋಡಿ ಬೈಗುಳ ಅಬ್ಬಾ ಕಿವಿಗೆ ಮಹಾದಾನಂದ ಇನ್ನು ಈ ಜನ್ಮದಲ್ಲಿ ಅಂಗಳದಲ್ಲಿ ಕ್ರಿಕೆಟ್ ಆಡುವುದು ಬೇಡ ಎನ್ನುವಷ್ಟರ ಮಟ್ಟಿಗೆ ಬಂದು ಬಿಟ್ಟಿತು. ನಂತರ ಅಪ್ಪ ಬಂದು ಕೋಲು ಬಕೆಟ್ ಕೊನೆಗೆ ಬಾಲ್ ತೆಗೆದು ಇನ್ನು ಇಲ್ಲಿ ಆಡಿದ್ರೆ ನೋಡು ಎನ್ನುತ್ತಾ ಕೈಗೆ ಬಾಲ್ ಕೊಟ್ಟು ಬುದ್ಧಿಮಾತು ಹೇಳಿದರು. ಹಾಳಾದ ಸಮಯ ಸರಿಯಿಲ್ಲ ಸುಮ್ಮನೆ ಬೈಗುಳ ಎಂದು ಮನದೊಳಗೆ ನನ್ನನ್ನು ನಾನೇ ಶಪಿಸಿಕೊಂಡೆ. ಗೆಳೆಯರನ್ನು ಮನಸಾರೆ ಬೈದು ಸುಮ್ಮನಾದೆ.

    ಇಂದು ಹಾಗೆ ಕುಳಿತಲ್ಲೇ ಬಾವಿ ನೋಡುವಾಗ ಈ ನೆನಪುಗಳ ಮಧುರ ಕ್ಷಣಗಳ ಪುಟಗಳು ಒಂದೊಂದಾಗಿ ತೆರೆದುಕೊಳ್ಳಲಾರಂಭಿಸಿತ್ತು. ನೆನಪುಗಳು ನೆನಪಾಗಿಯೇ ಉಳಿಯುವುದು .ಇಂದು ಬೇರೆ ಮೈದಾನದಲ್ಲಿ ಸಿಗದ ಮನ್ನಣೆ ಸಿಗದ ಮಜಾ ಮನೆಯಂಗಳದಲ್ಲಿ ಆಡುವಾಗ ಸಿಗುತ್ತಿತ್ತು. "ಬಾವಿಯೊಳಗೆ ಬಿದ್ದ ಬಾಲ್, ಅದರಿಂದ ನಾನು ದಿಕ್ಕಾಪಾಲ್!".


Rate this content
Log in

Similar kannada story from Abstract