STORYMIRROR

Ramya Prabhu

Drama

3  

Ramya Prabhu

Drama

ಅಪರೂಪ

ಅಪರೂಪ

2 mins
6



ಕಾಲೇಜು ಶಿಕ್ಷಣ ಮುಗಿದ ನಂತರ ಗೀತಾ ಮನೆಯಲ್ಲೇ ಕಾಲ ಕಳೆಯುತ್ತಿದ್ದಳು. ಗೀತಾಳ ಅಮ್ಮಾ ಯಾವಾಗಲೂ ಲೇ!ಗೀತಾ ಯಾವಾಗಲೂ ಟಿವಿ ಮೊಬೈಲ್ ಅಂತ ಕಾಲ ಕಳೆಯುತ ಇರುತ್ತೀಯಲ್ಲಾ?. ಯಾವುದಾದರೂ ಕೆಲಸಕ್ಕೆ ಅಪ್ಲೈ ಮಾಡಬಹುದಲ್ಲ ಇನ್ನೂ ಎಷ್ಟು ದಿನ ಹೀಗೇ ಕಾಲ ಕಳೆಯುತ್ತೀಯ ನಿನಗೆ ಡಿಗ್ರಿ ಓದಿಸಿದ್ದು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳಲಿ ಅಂತ ನಾ. ನೋಡು ಮದುವೆ ಮಾಡೋಣ ಅಂದರೆ ನಮ್ಮ ಹತ್ರ ಹಣ ಇಲ್ಲ ನಾವು ತೀರಾ ಬಡವರು ಇನ್ನು ಸಾಲಸೂಲ ಮಾಡಿ ನಿನ್ನನ್ನು ಡಿಗ್ರಿ ತನಕ ಓದಿಸಿದ್ವಿ ಈಗ ನೋಡಿದ್ರೆ ಯಾವ ಕೆಲ್ಸನು ಮಾಡುತಿವಲ್ಲೆ ನೀನು ನಾಳೆ ಮದುವೆ ಆದರೆ ಗಂಡನ ಮನೆಯಲ್ಲಿ ನೀನೇ ಕೆಲಸ ಮಾಡಬೇಕು ಕಣೇ ಅದಕ್ಕೋಸ್ಕರ ಆದರೂ ಮನೆಯ ಕೆಲಸ ಕಲಿತುಕೊಳ್ಳೆ. ಅಪರೂಪಕ್ಕೆ ಅಡುಗೆ ಮನೆ ಕಡೆ ಬರುತ್ತೀಯ ಎಲ್ಲಾ ಕಡೆ ನೋಡಿ ಮತ್ತೆ ಹೋಗಿ ಸೋಫಾದ ಮೇಲೆ ಮೊಬೈಲೋ ಇಲ್ಲ ಟಿವಿನೋ ನೋಡಿ ಕಲ್ಲಿನ ತರ ಕೂತ್ಕೊ ಬಿಡ್ತ್ತೀಯಾ. ಓಲೆ ಮೇಲೆ ಹಾಲಿಟ್ಟಿದ್ದೀನಿ ಸ್ವಲ್ಪ ನೋಡು ಅಂದರೆ ಹುಂ ಅಂತೀಯ ನಂತರಮತ್ತದೇ ಟಿವಿ ಮೊಬೈಲ್ ನೋಡೋದು ಅಷ್ಟೇ ನಿನ್ನ ದಿನಚರಿ ಯಾವಾಗ ಬುದ್ಧಿ ಬರುತ್ತದೆಯೇ ಈ ಹುಡುಗಿಗೆ ದೇವರೇ ಬಲ್ಲ ಎಂದು ಗೀತಾಳ ಅಮ್ಮ ಅಡುಗೆ ಮನೆ ಕಡೆ ಹೋದರು. ಅಮ್ಮಾ ಯಾಕೆ?ಹೀಗೆ ಕೂಗಾಡಿ ರೇಗಾಡಿ ಕೋಪ ಮಾಡಿಕೊಂಡು ಆಯಾಸ ಮಾಡಿಕೊಳ್ಳುತ್ತಿಯಾ. ನಿನ್ನಂಥ ಅತ್ತೆನೇ ಸಿಗುತ್ತಾರೆ ನನಗೆ ಆಗ ಹೀಗೆ ನಾನು ಅಪರೂಪಕ್ಕೆ ಕೆಲಸ ಮಾಡುವುದು ನನ್ನತ್ತೆ ನನ್ನನ್ನು ಮುದ್ದಾಗಿ ನೋಡಿಕೊಳ್ಳುತ್ತಾರೆ ಬಿಡಮ್ಮ ಯಾಕೆ ಯೋಚನೆ ಮಾಡುತ್ತೀಯ. ಆಯಿತು ಬಿಡು ಮನೆಗೆಲಸ ತಾನೇ ಅದೇನು ಮಹಾ ಚಿಟಿಕೆ ಹೊಡೆಯುವುದರಲ್ಲಿ ಕಲಿಯಬಹುದು. ಗಂಡನ ಮನೆಗೆ ಹೋದ ಮೇಲೆ ಕಲಿಯುತ್ತೇನೆ ಈಗ ಬೇಡಮ್ಮ ನಾನು ನನ್ನ ಗೆಳತಿ ಮನೆಗೆ ಹೋಗಿ ಬರುತ್ತೇನೆ. ಮಧ್ಯಾಹ್ನ ಅಲ್ಲೇ ಗೆಳತಿ ಮನೆಯಲ್ಲೇ ಊಟ ಮಾಡಿ ಬರುತ್ತೇನೆ ಬಾಯ್ ಅಮ್ಮಾ ಎಂದು ಗೀತಾ ಗೆಳತಿ ಮನೆಗೆ ಹೊರಟಳು.ಸಂಜೆ ಗೆಳತಿ ಮನೆಯಿಂದ ಬಂದ ಗೀತಾಳಿಗೆ ಖುಷಿಯ ವಿಚಾರವೊಂದು ಕಾದಿತ್ತು. ಗೀತಾ ನಿನಗೆ ಒಂದು ಹುಡುಗನ ನೋಡಿದ್ದೇವೆ ನೀನು ನೋಡಿ ಇಷ್ಟನಾ ಅಂತ ಹೇಳು. ಹುಡುಗ ಗುಣವಂತ ಬುದ್ಧಿವಂತ ಸದೃಢ ಕಾಯ ಒಳ್ಳೆಯ ಸಂಪ್ರದಾಯ ಸಂಸ್ಕಾರವನ್ನು ಮೈಗೂಡಿಸಿಗೊಂಡವನು. ನಮಗೆಲ್ಲಾ ತುಂಬಾ ಇಷ್ಟ ಆದ ಇನ್ನು ನಿನ್ನ ಅಭಿಪ್ರಾಯ ಕೇಳಬೇಕೆಂದು ನಿನ್ನ ಹತ್ತಿರ ಅವನ ಫೋಟೋ ಜಾತಕ ಕೊಟ್ಟಿದ್ದೇನೆ. ನಿಧಾನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳು. ಹುಡುಗ ಹೊರದೇಶದಲ್ಲಿ ಒಂದೊಳ್ಳೆ ಕಂಪನಿಯಲ್ಲಿ ಮ್ಯಾನೇಜರ್ ಅಂತೆ ಕೈತುಂಬ ಸಂಬಳ ಅಂತೆ ಹುಡಗನಿಗೆ ಅಪ್ಪ ಅಮ್ಮ ಇಲ್ವಂತೆ ಪಾಪ. ನಿನ್ನ ಫೋಟೋನು ಕಳ್ಸಿದ್ವಿ ನಿನ್ನ ನೋಡಿ ಒಪ್ಪಿದ್ದಾನೆ. ಅವನ ಸಂಪೂರ್ಣ ಸಮ್ಮತಿ ಇದೆ ಕಣೇ. ಸರಿ ಅಮ್ಮಾ ನನಗೆ ಸ್ವಲ್ಪ ದಿನ ಟೈಮ್ ಕೊಡು ಎಲ್ಲಾ ಯ್ಯಾಂಗಲ್ ಯಿಂದ ಯೋಚನೆ ಮಾಡಿ ಹೇಳುತ್ತೇನೆ ಎಂದಳು ಗೀತಾ.ದಿನಗಳುರುಳಿದವು ಗೀತಾಳು ಮದುವೆನು ಆಯಿತು. ಆದರೆ ಒಂದು ಮನೆಗೆಲಸ ಬರುತ್ತಿರಲಿಲ್ಲ ಒದ್ದಾಡಿ ಹಾಗೋ ಹೀಗೋ ಕಷ್ಟದಲ್ಲಿ ಕೆಲಸವೆಲ್ಲಾ ಮುಗಿಯುವಾಗ ಮಧ್ಯೆ ರಾತ್ರಿ ಆಗುತ್ತಿತ್ತು. ಮರುದಿನ ಅಮ್ಮನಿಗೆ ಫೋನ್ ಮಾಡಿ ತಾನು ಮಾಡಿದ ಅಅವಾಂತರವೆಲ್ಲಾ ಹೇಳುತ್ತಾಳೆ. ನೋಡು ಅದಕ್ಕೆ ಹೇಳುವುದು ಎಲ್ಲರ ಜೀವನ ತರ ಇರಲ್ಲ ನಾವು ಅಂದುಕೊಂಡಿದ್ದು ಯಾವುದು ಆಗುವುದಿಲ್ಲ. ನನ್ನಂತೆ ಅತ್ತೆ ಇರುವ ಮನೆಗೆ ಸೊಸೆಯಾಗಿ ಹೋಗುತ್ತೀನಿ ಅಂದೆ ಆದರೆ ಅತ್ತೆನೇ ಇಲ್ಲದ ಮನೆಗೆ ಸೊಸೆಯಾಗಿ ಹೋಗುವ ಹಾಗಾಯಿತು ದೇವರಿಚ್ಚೆ ಬಿಡು. ಈಗ ಅರಿವಿಗೆ ಬಂತ ಅಪರೂಪಕ್ಕೆ ಕೆಲಸ ಮಾಡಬಾರದಂತ ಇರಲಿ ಬಿಡು. ನಾಳೆಯಿಂದ ಅಡುಗೆ ಮನೆಗೆಲಸ ಎಲ್ಲವನ್ನೂ ಮೊಬೈಲ್ ನಲ್ಲಿ ಹೇಳಿಕೊಡುತ್ತೇನೆ. ಶ್ರದ್ಧೆಯಿಂದ ಬೇಗನೆ ಕಲಿತು ಪಾಸಾಗಿ ಜೀವನ ಪರೀಕ್ಷೆಯಲ್ಲಿ. ಥ್ಯಾಂಕ್ಸ್ ಅಮ್ಮ ಐ ಲವ್ ಯು ಅಮ್ಮ ಎಂದು ಗೀತಾ ಫೋನ್ ಇಟ್ಟಳು ನಿಟ್ಟುಸಿರು ಬಿಡುತ್ತ.

✍️ರಮ್ಯಕೃಷ್ಣಪ್ರಭು
 ಮೂಡಬಿದಿರೆ


Rate this content
Log in

Similar kannada story from Drama