ಆವೇಶ
ಆವೇಶ
ಶಾಂತ ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವಳು. ಅವನ ಹೆಸರು ಸೂರ್ಯ ಉರಿಯುವ ಬೆಂಕಿ ಕೆಂಡದಂಥ ಕೋಪ ಕ್ಷಣಕ್ಕೊಮ್ಮೆ ಆವೇಶದಿಂದ ಮಾತನಾಡುವ. ಇವರಿಬ್ಬರೂ ವಿರುದ್ಧ ಗುಣದವರು ಆದರೂ ಇವರ ನಡುವೆ ಸ್ನೇಹವಾಗಿ ಆ ಸ್ನೇಹ ಪ್ರೀತಿಯಾಗಿ ಬದಲಾಗಿ ಒಬ್ಬರನೊಬ್ಬರು ಬಿಟ್ಟಿರಲಾಗದಷ್ಟು ಭಾವ. ದಿನಕಳೆದಂತೆ ಪ್ರೀತಿ ಇನ್ನಷ್ಟು ಗಾಢವಾಯಿತು ಶಾಂತಿ ಅಂದುಕೊಂಡಳು ಸೂರ್ಯ ಬದಲಾಗಿರಬಹುದು ತಾನು ಆತನನ್ನು ಪ್ರೀತಿಯ ಮಾತಿನಿಂದಲೇ ಆತನನ್ನು ಬದಲಿಸಿರುವೆ ಕೋಪ ಆವೇಶದಿಂದ ಕೆಂಡದಂತೆ ಉರಿಯುತ್ತಿದ್ದ ಸೂರ್ಯ ಶಾಂತಿಯ ಪ್ರೀತಿಗೆ ತಣ್ಣಗಾದ ಅಂದುಕೊಳ್ಳುವಷ್ಟರಲ್ಲಿ.ಸೂರ್ಯ ಕೋಪ ಹೆಚ್ಚಾಗುವ ಘಟನೆಯೊಂದು ಸಂಭವಿಸಿತ್ತು. ಸುಮ್ಮನೆ ಯಾರೋ ಇವರ ಪ್ರೀತಿ ನೋಡಿ ಹೊಟ್ಟೆಕಿಚ್ಚುಪಟ್ಟುಕೊಂಡು ಸೂರ್ಯನ ಮೊಬೈಲ್ಗೆ ಒಂದು ವಿಡಿಯೋ ತುಣುಕನ್ನು ಕಳಿಸಿರುತ್ತಾರೆ. ಅದು ಶಾಂತಿ ಇನ್ನೊಬ್ಬನ ಜೊತೆ ಸಲುಗೆಯಿಂದ ಇದ್ದಂತೆ ಇತ್ತು. ಆ ವಿಡಿಯೋ ಕಳಿಸಿದವರ ವಿಳಾಸವಿಲ್ಲ ಅದು ನಿಗೂಢವಾಗಿತ್ತು. ಆದರೆ ಒಂದು ಕ್ಷಣವೂ ಯೋಚನೆ ಮಾಡದೆ ಆ ವಿಡಿಯೋ ನಿಜವೊ ಸುಳ್ಳೋ ನೋಡದೆ ಮನೆಗೆ ದೌಡಾಯಿಸಿ ಶಾಂತಿ ಮೇಲೆ ಆವೇಶದಿಂದ ಕೂಗಿ ರೇಗಾಡಿ ನನಗೆ ನೀನು ಬೇಡ ನಿನಗೆ ನಾನು ಡೈವರ್ಸ ಕೊಡುವೆ ನೀನು ಮೋಸಗಾರ್ತಿ ತೂ ಚಿ ಎಂದು ಛೀಮಾರಿ ಹಾಕಿ ಶಾಂತಿಗೆ ಒಂದು ಚೂರು ಮಾತನಾಡಲು ಅವಕಾಶ ಕೊಡದೆ ಹೊಡೆದು ಬಡಿದು ಹೊರಹಾಕಿಬಿಟ್ಟ.ಶಾಂತಿ ಅಳುತ್ತ ಮನನೊಂದು ಒಂದು ಕ್ಷಣವೂ ಅಲ್ಲಿ ನಿಲ್ಲದೆ ತನ್ನ ತವರು ಮನೆಗೆ ಹೊರಟುಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆದಲ್ಲೇ ಶಾಂತಿ ಅಸುನೀಗಿದಳು ಎಂದು ಅಸುನೀಗುವ ಮುನ್ನ ಸೂರ್ಯ ಸೂರ್ಯ ಅಂತ ಕನವರಿಸುತ್ತಿದ್ದಳಂತೆ ಎಂದು ಸ್ಟಾಪ್ ನರ್ಸ್ ಹೇಳಿದರು . ಆ ಸೂರ್ಯ ನೀವೇನಾ? ನೀವು ಅವರಿಗೆ ಏನಾಗಬೇಕು? ಎಂದು ಸಮನೆ ಪ್ರಶ್ನೆಗಳ ಸರಮಾಲೆಯನ್ನು ಕೇಳುತ್ತ ಹೋದರು. ಎಲ್ಲದಕ್ಕೂ ಸೂರ್ಯನ ಒಂದೇ ಉತ್ತರವಾಗಿತ್ತು ಈ ನತದೃಷ್ಟ ಶಾಂತಿಯ ಗಂಡ.ಹೋಗುತ್ತಾಳೆ. ಸೂರ್ಯನ ಈ ವರ್ತನೆಯಿಂದ ತುಂಬಾ ದುಃಖಿತಳಾಗಿ ಅದೇ ಆಲೋಚನೆಯಲ್ಲಿ ಬಸ್ಸು ಹತ್ತಿ ಕಿಟಕಿಯ ಬದಿಯಲ್ಲಿ ಕುಳಿತು ಸೂರ್ಯನೊಂದಿಗೆ ಕಳೆದ ದಿನಗಳನ್ನು ನೆನಪು ಮಾಡಿಕೊಂಡು ಒಳಗೊಳಗೆ ನಕ್ಕು ಮನ ಹಗುರ ಮಾಡಿಕೊಂಡಳು. ಬಸ್ಸು ಕಣಿವೆ ದಾರಿಯ ಮೂಲಕ ಇನ್ನೇನು ಹಾದು ಹೋಗಬೇಕು ಎನ್ನುವಷ್ಟರಲ್ಲಿ ಎದುರಿಗೆ ಅತಿವೇಗವಾಗಿ ಬಂದ ಲಾರಿಯೊಂದು ಶಾಂತಿ ಇದ್ದ ಬಸ್ಸಿಗೆ ಜೋರಾಗಿ ಡಿಕ್ಕಿ ಹೊಡೆದು ಬಸ್ಸು ಕಣಿವೆಗೆ ಉರುಳಿತು. ಶಾಂತಿ ರಭಸದಲ್ಲಿ ಕಣಿವೆಯ ಅಕ್ಕಪಕ್ಕದ ಬಂಡೆಗೆ ಅಪ್ಪಳಿಸಿ ತಲೆಗೆ ಏಟಾಗಿ ಪ್ರಜ್ಞೆ ತಪ್ಪಿ ಬಿದ್ದಳು ಯಾರೋ ಅವಳನ್ನು ಮತ್ತು ಆ ಬಸ್ಸಿನಲ್ಲಿ ಇದ್ದ ಎಲ್ಲರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದರು . ಈ ವಿಷಯ ಸೂರ್ಯನಿಗೆ ತನ್ನ ಗೆಳೆಯನ ಮೂಲಕ ತಿಳಿಯಿತು. ಶಾಂತಿಯನ್ನು ಕಾಣಲು ತಪ್ಪಿನ ಅರಿವಾಗಿ ನೊಂದುಕೊಂಡು ಅವಳಲ್ಲಿ ಕ್ಷಮೆ ಕೇಳಲು ಬೇಗನೆ ಓಡಿ ಬಂದ ಸೂರ್ಯನಿಗೆ ಕಾದಿತ್ತು ದೊಡ್ಡ ಆಘಾತ.ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆದಲ್ಲೇ ಶಾಂತಿ ಅಸುನೀಗಿದಳು ಎಂದು ಅಸುನೀಗುವ ಮುನ್ನ ಸೂರ್ಯ ಸೂರ್ಯ ಅಂತ ಕನವರಿಸುತ್ತಿದ್ದಳಂತೆ ಎಂದು ಸ್ಟಾಪ್ ನರ್ಸ್ ಹೇಳಿದರು . ಆ ಸೂರ್ಯ ನೀವೇನಾ? ನೀವು ಅವರಿಗೆ ಏನಾಗಬೇಕು? ಎಂದು ಸಮನೆ ಪ್ರಶ್ನೆಗಳ ಸರಮಾಲೆಯನ್ನು ಕೇಳುತ್ತ ಹೋದರು. ಎಲ್ಲದಕ್ಕೂ ಸೂರ್ಯನ ಒಂದೇ ಉತ್ತರವಾಗಿತ್ತು ಈ ನತದೃಷ್ಟ ಶಾಂತಿಯ ಗಂಡ.ಹೌದಾ ಸಾರ್ ಸರಿ ಪಾರ್ಮಲಿಟಿಸ್ಗೆ ಸಹಿ ಅವರ ಡೆಡ್ ಬಾಡಿ ತೆಗೆದುಕೊಂಡು ಹೋಗಬಹುದು. ತುಂಬಾ ಪಶ್ಚಾತ್ತಾಪ ಮತ್ತು ದುಃಖದಲ್ಲಿ ತನ್ನ ಹೆಂಡತಿಯ ದೇಹಕ್ಕೆ ಕೊಳ್ಳಿ ಇಟ್ಟನು ಶಾಂತಿ ಪಂಚಭೂತಗಳಲ್ಲಿ ಲೀನವಾಗಿ ಹೋದಳು. ಈ ಕಡೆ ಸೂರ್ಯನಿಗೆ ಬಂದ ಆ ವಿಡಿಯೋ ಫೇಕ್ ಅಂತ ಸಾಬೀತು ಆಯಿತು. ಸೂರ್ಯನ ಮನಸ್ಸಿನಲ್ಲಿ ಪಶ್ಚಾತ್ತಾಪದ ಬೇಗೆ ಸುಡುತ್ತಿತ್ತು. ಇಷ್ಟೊಂದು ಆವೇಶ ಒಳ್ಳೆಯದಲ್ಲ ಇದರಿಂದ ಕಳೆದುಕೊಳ್ಳುವುದು ವಿನಃ ಪಡೆದುಕೊಳ್ಳುವುದು ಏನು ಇಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಕಳೆದುಕೊಂಡವನಿಗಷ್ಟೇ ಗೊತ್ತು. ಆವೇಶದಲ್ಲಿ ಅಥವಾ ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಹುಟ್ಟುವುದುದೇ ಎಂದು ಸೂರ್ಯನಿಗೆ ಸ್ಸಷ್ಟವಾಗಿ ತಿಳಿಯಿತು. ಇನ್ನು ತನ್ನ ಮನೆಮನದಲ್ಲಿ ಶಾಂತಿ ಸದಾ ನೆಲೆಸಿರುವಳು ಎಂದು ಅವಳ ನೆನಪಲ್ಲೇ ಜೀವಿಸತೊಡಗಿ ಹೊಸ ಜೀವನ ಶುರುಮಾಡಿದನು. ಈಗ ಹಳೆ ಕೋಪಿಷ್ಟ ಆವೇಶಿ ಸೂರ್ಯ ಅಲ್ಲ ಇವನು ಶಾಂತಸ್ವಭಾವದ ಶಾಂತಿ ಸೂರ್ಯ. ಶಾಂತಿಯೇ ಸೂರ್ಯನ ನರನಾಡಿಯಲಿ ಆವರಿಸಿರುವಾಗ ಕನಸಲ್ಲೂ ಕೂಡ ಇನ್ನೊಬ್ಬರನ್ನು ಬಯಸಲಾರ ಸೂರ್ಯ. ಶಾಂತಿ ಅವನ ಜೀವ ದೇಹದಿಂದ ಶಾಶ್ವತವಾಗಿ ದೂರ ಆಗಿರಬಹುದು ಆದರೆ ಅವನ ಮನಸ್ಸಿನಿಂದಲ್ಲ
✍️ರಮ್ಯಕೃಷ್ಣಪ್ರಭು
ಮೂಡಬಿದಿರೆ

