ಸೋಲೆ ಗೆಲುವಿನ ಸೋಪಾನ
ಸೋಲೆ ಗೆಲುವಿನ ಸೋಪಾನ
ಸೋಲೇ ಗೆಲುವಿನ ಸೋಪಾನ
ಸೋಲಾಯಿತೆಂದು ತಾಳದೆ ಮೌನ
ಸೋತಲ್ಲೇ ಕಾಣಬೇಕು ಗೆಲುವ
ಸೋಲು ಕಲಿಸುವುದು ಬದುಕಿನ ಪಾಠವ
ಜೀವನ ಏನೆಂದು ತಿಳಿಸುವುದು
ಪ್ರತಿಕ್ಷಣವು ಪಾಠವ ಕಲಿಸುವುದು
ಸೋತುಗೆದ್ದವನೇ ಈ ಜಗದಿ ಶ್ರೇಷ್ಠನು
ಗೆಲುವೊಂದನ್ನೆ ಬಯಸಿದರೆ ಅವನು ನಿರ್ಲಕ್ಷ್ಯನು
ಸೋಲು ಮತ್ತು ಗೆಲುವು ಸಹಜವು
ಬಾಳಲಿ ಭರವಸೆ ಆತ್ಮವಿಶ್ವಾಸವು
ಇರಬೇಕು ಮಾಡುವ ಕೆಲಸದಲ್ಲಿ ಶ್ರದ್ಧೆಯು
ಕೆಲಸ ಸಣ್ಣದೊ ದೊಡ್ಡದೊ ಇರಲಿ ಪ್ರೀತಿಯು
ಕಂಡೆ ಹಲವಾರು ಏಳುಬೀಳು ಈ ಬದುಕಿನಲಿ
ಎಂದಿಗೂ ಶಾಶ್ವತವಲ್ಲ ಸೋಲು ಬಾಳಿನಲಿ
ಕುಗ್ಗದೆ ಸಾಗುತ ಬಂದದ್ದನ್ನು ಸ್ವೀಕರಿಸಿ
ಸಾರ್ಥಕಭಾವ ಜೀವನದಿ ನಗುವು ಝೇಂಕರಿಸಿ
ಒಂದೊಂದೆ ಮೆಟ್ಟಿಲು ಹತ್ತುತಲಿ
ಗುರಿಯ ತಲುಪಬೇಕು ಮುನ್ನುಗ್ಗುತಲಿ
ಸೋತೆನೆಂದು ಎದೆಗುಂದದೆ ನಿರಾಶೆಭಾವ ತಾಳದೆ
ಸೋಲಾದರೂ ಸಾಗು ಗೆಲುವು ಖಚಿತ ಜಗ್ಗದೆ
ಸೋಲೇ ನಿನಗೊಂದು ನಮನ
ಮೊದಲಿಗೆ ಆದರು ಅವಮಾನ
ಕೊನೆಯಲಿ ಸಿಗುವುದು ಸಮ್ಮಾನ ಸೋಲಿನಿಂದ ತಿಳಿಯುವುದು ಹೇಗೆಂದು ಜೀವನ
✍️ರಮ್ಯಕೃಷ್ಣಪ್ರಭು
ಮೂಡಬಿದಿರೆ
