STORYMIRROR

Ramya Prabhu

Inspirational Thriller Others

4  

Ramya Prabhu

Inspirational Thriller Others

ಪರಿವರ್ತನೆ

ಪರಿವರ್ತನೆ

3 mins
2

ಪ್ರೀತಿ ಮತ್ತು ಕವನ ಇಬ್ಬರೂ ಚಿಕ್ಕಂದಿನಲ್ಲೂ ಆತ್ಮೀಯ ಸ್ನೇಹಿತೆಯರು ಆಗಿದ್ದರು. ಅಲ್ಲದೆ ಪ್ರೀತಿಯ ಮನೆಯ ಹತ್ತಿರವೇ ಕವನಳ ಮನೆಯಿತ್ತು. ಪ್ರೀತಿ ತುಂಬಾ ಶ್ರೀಮಂತೆ ಆಗಿದ್ದಳು ಆ ಶ್ರೀಮಂತಿಕೆಯಿಂದ ಅವಳಲ್ಲಿ ತುಂಬಾ ಅಹಂಕಾರ ತುಂಬಿತ್ತು. ಏನೇ ಮಾತಾಡಲಿ ತುಂಬಾ ದರ್ಪದಿಂದ ಮಾತನಾಡುತ್ತಿದ್ದಳು.ಕವನ ಅದಕ್ಕೆ ತದ್ವಿರುದ್ಧ ತುಂಬಾ ಬಡತನದಲ್ಲಿ ಹುಟ್ಟಿದ ಅವಳಿಗೆ ಕಷ್ಟಗಳೆಲ್ಲ ಮಾಮೂಲು ಆಗಿತ್ತು. ಕವನಾಳಿಗೆ ತುಂಬಾ ತಾಳ್ಮೆ ಸಹನಾಮೂರ್ತಿ ನಿಸ್ವಾರ್ಥಿ ಅವಳು ಬಹುಶಃ ಅವಳಿಗೆ ಬಡತನವೇ ತಾಳ್ಮೆಯಿಂದ ಇರಲು ಕಲಿಸಿದೆ. ಜೀವನ ಏನೆಂದು ಈ ಲೋಕದಲ್ಲಿ ಹೇಗೆ ಬದುಕಬೇಕೆಂದು ಹುಟ್ಟುತ್ತಾನೆ ಕಲಿತು ಬಂದಿದ್ದಾಳೆ. ಅಪ್ಪ ಅಮ್ಮ ಇಷ್ಟೇ ಅವಳ ಪ್ರಪಂಚವಾಗಿತ್ತು. ತಂದೆ ತಾಯಿ ಕಂಡ ಕನಸನ್ನು ನನಸಾಗಿಸಲು ಹಗಲು-ರಾತ್ರಿ ಎನ್ನದೆ ಓದುತ್ತಿದ್ದಳು. ಬಿಡುವಿನ ವೇಳೆಯಲ್ಲಿ ತನ್ನ ತಾಯಿಯೊಂದಿಗೆ ಬೀಡಿ ಕಟ್ಟುತ್ತಿದ್ದಳು. ಸರ್ಕಾರಿ ಕಾಲೇಜಿನಲ್ಲಿ ಕವನ ವ್ಯಾಸಂಗ ಮಾಡುತ್ತಿದ್ದಳು. ಯು. ಪಿ. ಎಸ್ ಪರೀಕ್ಷೆಗೆ ಸಿದ್ದವಾಗುತ್ತಿದ್ದಳು ಮತ್ತು ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಳು. ಪ್ರೀತಿಯು ಅಷ್ಟೇ ಪ್ರತಿಷ್ಟಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.ಕವನ ಪ್ರೀತಿಯ ಮನೆ ಹತ್ತಿರವಿರುವುದರಿಂದ ದಿನ ತಮ್ಮ ತಮ್ಮ ಕಾಲೇಜಿನಲ್ಲಿ ಕೊಟ್ಟಂತಹ ನೋಟ್ಸ್ ಅನ್ನು ಒಬ್ಬನೊಬ್ಬರು ಬದಲಾಯಿಸಿಕೊಂಡು ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಆದರೆ ಪ್ರೀತಿ ಜಾಸ್ತಿ ಅಧ್ಯಯನ ಮಾಡುತ್ತಿರಲಿಲ್ಲ ಅಂದರೆ ಅವಳಿಗೆ ಕಷ್ಟಪಡುವುದು ಇಷ್ಟವಿರಲಿಲ್ಲ. ಸಾಕಷ್ಟು ಹಣ ಕೊಟ್ಟರೆ ಯಾವ ಪದವಿಯನ್ನು ಸಹ ಖರೀದಿಸಬಹುದು ಸುಮ್ಮನೆ ಓದಿ ಏಕೆ ಕಷ್ಟಪಡುವುದು ಎಂದು ಕವನಳ ಹತ್ತಿರ ದಿನ ಹಣದ ದರ್ಪದಿಂದ ಹೇಳುತ್ತಿದ್ದಳು.ಕವನ ನೀನು ನೀನು ಯುಪಿಎಸ್ ಪರೀಕ್ಷೆ ಬರೆಯುವ ಬದಲು ಮದುವೆ ಆಗು ನಿಮ್ಮಂತಹ ಬಡವರಿಗೆ ಇದೆಲ್ಲಾ ಸಾಧಿಸಲು ಎಲ್ಲಿ ಆಗುತ್ತದೆ ಕನಸಿನ ಮಾತು ಅದೆಲ್ಲಾ ಯಾವುದೇ ಪದವಿ ಪಡೆಯಲು ನಿನ್ನ ಹತ್ತಿರ ನಯಾಪೈಸಾ ಇಲ್ಲ ನೀನು ಯುಪಿಎಸ್ ಪರೀಕ್ಷೆ ಬರೆದು ಪಾಸಾಗಿ ಅಧಿಕಾರಿ ಆಗುತ್ತಿಯಾ ನಂಬಲು ಇರಲಿ ಊಹಿಸಲು ಸಾಧ್ಯವಿಲ್ಲ ಇಂತಹ ಪರೀಕ್ಷೆ ಎಲ್ಲಾ ನಮ್ಮಂತಹ ಶ್ರೀಮಂತ ವರ್ಗದ ವ್ಯಕ್ತಿಗಳಿಂದ ಪಾಸಾಗಲು ಮಾತ್ರ ಸಾಧ್ಯ ನಮಗೆ ಆ ಅಧಿಕಾರದ ಕೆಲಸ ಸಿಗುವುದು ಹೋಗು ಹೋಗು ಎಲ್ಲಾದರೂ ಬಟ್ಟೆ ಅಂಗಡಿಯಲ್ಲೋ ಚಿನ್ನದ ಅಂಗಡಿಯಲ್ಲೋ ಕೆಲಸ ಮಾಡಿ ದಿನಸಾಗಿಸು ತಿಂಗಳ ಸಂಬಳದಲ್ಲಿ ಅಂತ ಎಲ್ಲರ ಎದುರು ಕವನಾಳನ್ನು ಅವಮಾನಿಸುತ್ತಿದ್ದಳು ಪ್ರೀತಿ. ಒಂದು ದಿನ ಪ್ರೀತಿಯ ತಂದೆ ತಾಯಿ ಪ್ರೀತಿ ಇಲ್ಲಿ ಇದ್ದರೆ ಸ್ವಲ್ಪನೂ ಓದಲ್ಲ ಅಂತ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್ಗೆ ಕಳುಹಿಸಿ ಕೊಡುತ್ತಾರೆ. ಪ್ರೀತಿ ತಾನು ಲಂಡನ್ಗೆ ಹೋಗುತ್ತಿದ್ದೇನೆ ಎಂದು ತುಂಬಾ ದರ್ಪದಿಂದ ಎಲ್ಲರ ಹೇಳುತ್ತ ಬಂದಳು. ಕವನ ಖುಷಿಪಟ್ಟಳು ಹೋಗಿ ಸಾಧಿಸಿ ಬಾ ಅಂತ ತುಂಬು ಮನದಿಂದ ನಿಸ್ವಾರ್ಥದಿಂದ ಹಾರೈಸಿದಳು.ಪ್ರೀತಿ ಲಂಡನ್ಗೆ ಹೋದಳು ಅಲ್ಲೂ ಸಹ ಓದದೆ ಸರಿಯಾಗಿ ಮೋಜು ಮಸ್ತಿಯಲ್ಲೇ ದಿನಕಳೆದಳು ಇಷ್ಟಲ್ಲದೆ ಕೆಟ್ಟ ಚಟಗಳಿಗೆ ದಾಸಿಯಾದಳು ಇದರಿಂದ ಅವಳು ಅಲ್ಲಿ ಕೆಟ್ಟ ಅಪವಾದ ಹೊತ್ತು ತನ್ನ ತಾಯ್ನಾಡಿಗೆ ಮರಳಿದಳು . ಇಲ್ಲಿ ಕವನ ಪಾರ್ಟ್ ಟೈಮ್ ಕೆಲಸ ಮಾಡಿ ಅದರಿಂದ ಬಂದ ಹಣದಿಂದ ಕಷ್ಟಪಟ್ಟು ಓದಿ ಯುಪಿಎಸ್ ಪರೀಕ್ಷೆ ಬರೆದು ಪಾಸಾಗಿ ಅಧಿಕಾರಿಯಾದಳು.ಒಮ್ಮೆ ಪ್ರೀತಿ ಕವನಳನ್ನು ಭೇಟಿಯಾದಳು ಅವಳ ಈ ಬೆಳವಣಿಗೆ ನೋಡಿ ಹೊಟ್ಟೆಉರಿದುಕೊಂಡಳು. ಕವನ ಅವಳನ್ನು ಚೆನ್ನಾಗಿ ಮಾತನಾಡಿಸಲು ಬಂದಳು ಆದರೆ ತನ್ನ ದರ್ಪದಿಂದ ಅವಳನ್ನು ಇನ್ನಷ್ಟು ಅವಮಾನಿಸಿದಳು. ಅದಕ್ಕೆ ಕವನ ನಾನು ಮನಸ್ಸು ಮಾಡಿದರೆ ನಿನ್ನನ್ನು ಇವಾಗಲೇ ಜೈಲಿಗೆ ಅಟ್ಟಬಹುದು ಆದರೆ ನಾ ನಿನ್ನ ತರ ಅಲ್ಲ ದರ್ಪ ಹೊಟ್ಟೆಕಿಚ್ಚು ಇಷ್ಟರ ಮಟ್ಟಿಗೆ ಇರಬಾರದು ಮನುಷ್ಯನಿಗೆ ನಾನಂದುಕೊಂಡೆ ನೀನು ಲಂಡನ್ನಲ್ಲಿ ಬುದ್ಧಿ ಕಲಿತು ಬಂದಿರಬಹುದು ಎಂದು ಆದರೆ ನಾಯಿ ಬಾಲ ಯಾವಾಗಲೂ ಡೊಂಕೆ. ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅಂತರಲ್ಲ ಆ ಗಾದೆ ನಿನ್ನಂತವರನ್ನು ನೋಡಿಯೇ ಮಾಡಿರಬೇಕು ಅಲ್ವಾ. ನೋಡು ದರ್ಪದಿಂದ ಎಲ್ಲವನ್ನು ಗೆಲ್ಲುವೆ ಎಂದರೆ ಸಾಧ್ಯವಾಗದು. ಹಣವಿದೆ ಎಂದು ಅಹಂಕಾರದಿಂದ ಬೀಗಬಾರದು ನೋಡು ನಿನ್ನ ಹಣ ನಿನ್ನ ಮೇಲೆ ಬಂದಂತಹ ಕೆಟ್ಟ ಅಪವಾದ ಹೋಗಲಾಡಿಸಿತ್ತಾ ಇಲ್ಲ ತಾನೇ.ಹಣ ಬೇಕು ಆದರೆ ಹಣದವಿದೆ ಎಂದು ದರ್ಪವಿರಬಾರದು ಮೊದಲಿಗೆ ಎಲ್ಲವು ಚೆನ್ನ ನಂತರ ವಿಪರೀತ ಹಣವಿದೆ ಎಂದು ದರ್ಪದಿಂದ ಮೆರೆದರೆ ನೋವು ನೆಮ್ಮದಿ ಇಲ್ಲದ ಜೀವನ ಅಷ್ಟೇ. ಇಷ್ಟಲ್ಲದೆ ಕೆ. ಸಿ ಶಿವಪ್ಪನವರು ತಮ್ಮ ಮುದ್ದುರಾಮನ ಚೌಪದಿಯಲ್ಲಿ ಅರ್ಥಪೂಣವಾದ ಮುಕ್ತಕದ ಸಾಲುಗಳ ಮೂಲಕ ತಿಳಿಸಿದ್ದಾರೆ ಕೇಳು ಹೇಳುತ್ತೇನೆ. ಆಗಾದರೂ ನಿನ್ನ ಮನಪರಿವರ್ತನೆ ಆದರೂ ಆಗಬಹುದು ಎಂದು ಮುಕ್ತದ ಸಾಲುಗಳನ್ನು ರಾಗವಾಗಿ ಹಾಡಲು ಶುರುಮಾಡಿದಳು.ದರ್ಪದಿಂದೇನಾಯ್ತು ಕೌರವರ ಸಾಮ್ರಾಜ್ಯ?
ರಾವಣನ ಶಿರ ಹೋಯ್ತು ಛಲದ ನಿಲುವಿನಿಂದ. 
ನೀ ವಿದುರಮತಿಯಾಗು ನಯ ವಿನಯ ನಡೆಯಿಂದ.
ಸೌಜನ್ಯ ಭಾಗ್ಯನಿಧಿ-ಮುದ್ದುರಾಮ.

ಕೌರವರ ಅತಿಯಾದ ದರ್ಪದಿಂದ ಕುರುವಂಶವೇ ನಾಶವಾಯಿತು. ಇನ್ನು ಹತ್ತುತಲೆಯಿದೆ ಎಂದು ಬೀಗಿದ ಸೀತೆಯನ್ನು ಅಪಹರಿಸಿ ತನ್ನವಳಾಗಿಸಿಕೊಳ್ಳಬೇಕೆಂದು ದರ್ಪದಿ ಮರೆದ ರಾವಣನ ಶಿರವೇ ಹೋಯ್ತು ತನ್ನ ಸಾಮ್ರಜ್ಯ ಲಂಕೆಯೂ ಸಹ ಬೆಂಕಿಯಲ್ಲಿ ಸುಟ್ಟು ಬೂದಿ ಆಯಿತು. ನೀ ವಿದುರಮತಿಯಾಗು ನಡತೆಯಲಿ ನಯವಿನಯವಿರಲಿ ಬದುಕುವ ದಾರಿಯು ದೇವನು ಮೆಚ್ಚುವಂತಿರಲಿ ನಿಸ್ವಾರ್ಥಿಯಾಗು ಜೀವನದಲ್ಲಿ ಸೌಜನ್ಯ ಭಾಗ್ಯನಿಧಿ ಎಂದಾಗ ಪ್ರೀತಿಯ ಮನವು ಪರಿವರ್ತನೆಯಾಗಿ ಕವನಳಲ್ಲಿ ಕ್ಷಮೆ ಕೇಳಿದಳು ಮತ್ತು ಓದಿ ಕಡೆ ಗಮನ ಹರಿಸಿದಳು ತನ್ನ ಗುರಿಯನ್ನು ತಲುಪಲು ಸಿದ್ಧಳಾದಳು.

✍️ರಮ್ಯಕೃಷ್ಣಪ್ರಭು
 ಮೂಡಬಿದಿರೆ


Rate this content
Log in

Similar kannada story from Inspirational