ಅಹ ಎಂತ ರುಚಿ
ಅಹ ಎಂತ ರುಚಿ
ಒಂದನೊಂದು ಊರಿನಲಿ ರಂಗಜಿ ಎಂಬ ಹಣ್ಣುಹಣ್ಣು ಮುದುಕಿ ವಾಸವಾಗಿದ್ದಳು.ಅವಳ ಮಗ ಹಳ್ಳಿಯನ್ನೇ ಬಿಟ್ಟು ಪಟ್ಟಣದಲ್ಲಿ ಬೀಡುಬಿಟ್ಟಿದ್ದ. ಅಜ್ಜಿಗೆ ರಾಮು ಎಂಬ ಮೊಮ್ಮಗ. ಅವನ ಕಾಣುವ ಬಯಕೆ ದಿನಲು. ಹಾಗೆ ನವರಾತ್ರಿ ದಸರಾದ ಜಿಕೆ ಮಗನನ್ನು ಬರಲು ಪತ್ರವನ್ನು ಬರೆಯಲು ಮನೇಲಿದ್ದ ಮಗಳಲ್ಲಿ ಹೇಳುತ್ತಾಳೆ. ಮಗಳು ಹಾಗೂ ಹೀಗೂ ಅಣ್ಣನ ವಿಳಾಸ ತಿಳಿದು ಪತ್ರ ಬರೆದು ರಜೆಗೆ ಬರುವಂತೆ ಹೇಳುತ್ತಾಳೆ. ಆ ಪತ್ರವ ಓದಿದ ರಾಮು ತಂದೆಯಲ್ಲಿ ಹಠ ಮಾಡಿ ಹಳ್ಳಿಗೆ ಬರುತ್ತಾನೆ.
ಹಳ್ಳಿಗೆ ಬಂದ ರಾಮು ಅಜ್ಜಿಯೊಂದಿಗೆ ಬೇಗನೆ ಬೆರೆತ ಅದುವರೆಗೆ ಪಿಜ್ಜಾ ಬರ್ಗರ್ ಅಂತ ಸವಿದ ಅವನ ನಾಲಿಗೆ ಏನು ಹೊಸರುಚಿಯನ್ನು ಹುಡುಕುತ್ತಿತ್ತು. ಆಗ ಅಜ್ಜಿ ಮೊಮ್ಮಗನಿಗೆ ಬಿಸಿಬಿಸಿ ದೋಸೆ ಮಾಡಿಕೊಟ್ಟಳು. ಅಜ್ಜಿಯ ದೋಸೆ ಸವಿದವನು ಇದು ಎಷ್ಟೊಂದು ರುಚಿಕರ ಅಜ್ಜಿ ನಾನು ಆ ಪಟ್ಟಣವನ್ನು ಬಿಟ್ಟು ನಿನ್ನ ಜೊತೆಯೇ ಇರುತ್ತೇನೆ ಎಂದು ಹೇಳಿದ .
ಅಜ್ಜಿ ಮೊಮ್ಮಗನ ಆಟ-ಪಾಠ ನೋಡುತ್ತಾ ಸಂತಸದಿಂದ ದಿನಗಳ ಕಳೆದಳು.
