ವ್ಯಸನಗಳು
ವ್ಯಸನಗಳು
ಗುರಿಯಿತ್ತು ಸಾಗುವೆಡೆ, ಗುರಿತಪ್ಪಿಸಲು ಬಂದೆ ನೀನು
ಅಂದೇ ಕಳೆದುಹೋದೆ ನಿನ್ನ ಬದುಕಲಿ ನಾನು
ಗುರಿತಪ್ಪಿಸಿ ನನ್ನ, ಲುಪ್ತವಾದೆ ನೀನಿಂದು
ತಿಳಿಯಿತು ನನಗೆ ನೀನಿಲ್ಲೆ ನನ್ನೊಳಗಿರುವೆಯೆಂದು...
ವ್ಯಸನವದು ನನಗಿಂದು ನಿನ್ನ ನೆನೆಯುವುದು
ಬೇರೇನು ಬೇಡುವೆನು ನಿನ್ನನೇ ಜಪಿಸುವೆನು
ಮಿಂಚಂತೆ ಬಂದೆ ನೀ, ಭ್ರಮೆಯಲ್ಲೇ ಬದುಕಿಹೆ ನಾನು
ಕಂಡು ಮರೆಯಾದೆ ನೀ, ನಿನ್ನುಡುಕಿ ನಿಂತೆ ನಾನು...
ಹುಚ್ಚು ಹಠ ನನಗೆ ನೀನು, ಬಿಡಲಾರೆನೆಂದು
ಹಠವಿಂದು ಚಟವಾಗಿ, ಕಳೆದುಕೊಂಡಿಹೆ ನನ್ನ ನಾನು
ಬದುಕುವುದು ಹೇಗೀ ವ್ಯಸನಗಳ ತ್ಯಜಿಸಿ
ನಿತ್ಯವೂ ಸೆಳೆಯುತಿಹೆ ನೀ ಎಲ್ಲ ಮರೆಸಿ...