ಅಗಲಿಕೆಯ ಭಯ...
ಅಗಲಿಕೆಯ ಭಯ...
ನಿನ್ನೊಂದು ನೋಟದಲಿ ನಾ ಕಂಡೆ ಕನಸು
ನಿನ್ನೊಂದು ಮಾತಿನಲಿ ಅಡಗಿದೆ ಸೊಗಸು
ಕಂಡಾಗ ನಾ ನಿನ್ನ ನೋಡು ಭಯವಿತ್ತು
ನಿಂತಾಗ ನಿನ್ನೆದುರು ಜಗವನ್ನೇ ಮರೆಸಿತ್ತು
ಬಂದೆ ನೀ ಹೇಗೆ ನನ್ನೀ ಬದುಕೊಳಗೆ
ಕಂಡೆ ನಾ ನಿನ್ನೇ ನನ್ನೆಲ್ಲಾ ನಗುವೊಳಗೆ
ರೆಪ್ಪೆಯ ಮಿಟುಕಿನಲು ಹುಡುಕಿತಿಹೆ ನಿನ್ನನ್ನೇ
ಕೈಹಿಡುದು ನಿಲ್ಲು ನೀ ಈ ಬದುಕ ಕೊನೆವರೆಗೆ
ರೆಪ್ಪೆಯಾ ಬಡಿತದಲೂ ಕಣ್ತಪ್ಪಿದಂತಾಗಿದೆ
ಹೃದಯವದು ಬಡಿದುಕೊಳ್ಳುತಿದೆ ನಿಲ್ಲದೇ
ತಾಳೆ ನಾ ಈ ಭಯವ ಬಂದು ಬಿಡು ಕಣ್ಮುಂದೆ
ನಿಲುವುದೀ ಎದೆಬಡಿತ ನಿನ್ನಗಲುವಾ ಭಯದಿ...