STORYMIRROR

Indushree L E

Children Stories

2  

Indushree L E

Children Stories

ಹುಟ್ಟುಹಬ್ಬ

ಹುಟ್ಟುಹಬ್ಬ

1 min
130

ಸಂತಸದ ಉಯ್ಯಾಲೆ ನಿನ್ನೆಂದು ತೂಗುತಿರಲಿ

ಕೂಡಿಟ್ಟೆಲ್ಲಾ ಕನಸುಗಳು ಗರಿಬಿಚ್ಚಿ ಹಾರಲಿ

ಹರಸುವವರರಸಲಿ ಸ್ವಚ್ಛಂದ ಮನತುಂಬಿ

ಪ್ರೀತಿಯು ಹರಿಯಲಿ ಕ್ಷೀರಧಾರೆಯಾಗಿ...


ಚಂದ್ರನೊಮ್ಮೆ ನಿಂದು ಕೋರಲಿ ಶುಭಾಷಯ

ಚುಕ್ಕಿಗಳು ಎಣಿಸುವಂತಾಗಲಿ ನಿನ್ನ ಕೋರಿಕೆಗಳ

ಸೂರ್ಯನಿಂದು ಕಾದು ಹೇಳಲಿ ಶುಭೋದಯ

ಭುವಿಯೊಮ್ಮೆ ನಿಲ್ಲಲಿ ಸಂತಸವ ಮರಳಿಸುತ...


ಕೊಡಿಸಿಬಿಡಲೇ ನಿನಗೆ ಜಗದೆಲ್ಲಾ ಸಾಧನೆಯ

ಹರಸಲೇ ನಾನು‌ ಜಗದೆಲ್ಲ ಸಂಭ್ರಮವ

ಹುಡುಕಿ ಕೊಡಬಹುದೇ‌ ಜೀವನದ ಸಂತಸವಾ

ಮನತುಂಬಿ ಹರಸಲೇ ನಿನಗೆ ಶುಭಾಷಯವ...


साहित्याला गुण द्या
लॉग इन