STORYMIRROR

Indushree L E

Others

3  

Indushree L E

Others

ನೆನಪುಗಳು

ನೆನಪುಗಳು

1 min
180

ನಿಸರ್ಗದ ಮಡಿಲಲ್ಲಿ, ಪ್ರಕೃತಿಯ ಒಡಲಲ್ಲಿ

ಶುರುವಾಯಿತೀ ಬಂಧ, ಹಸಿರು ಯೋಧರ ನಡುವಲ್ಲಿ

ಆತಂಕವಿತ್ತು ಮುಖದಲಿ, ಭಯವೊಂದಿತ್ತು ಕಣ್ಣಲಿ

ಎಲ್ಲವೂ ಬದಲಾಯಿತೀ ನಾಲ್ಕು ವರ್ಷದಲ್ಲಿ...


ಶುರುವಾಯಿತು ಸ್ನೇಹ ನಂಬಿಕೆಯ ಹೆಸರಲ್ಲಿ

ಎಲ್ಲವನು ಗೆಲ್ಲುವಾ ಛಲವಿತ್ತು ಹುಮ್ಮಸ್ಸಿನಲ್ಲಿ

ಎಲ್ಲವೂ ಮುಳ್ಳಾಗಿ ಕಾಣುತಿದ್ದಾ ದಾರಿಯಲಿ

ಹೂವ ಹಿಡಿದು ನಿಂತಿದ್ದರು ವಿಶ್ವಾಸದೆಸರಿನಲಿ...


ಬರಿ ಸ್ವಾರ್ಥ, ಸುಳ್ಳು, ಮೋಸದಾ ಜಗದಲ್ಲಿ

ಕರುಣೆಯ ಕೈಗಳಿತ್ತು ಪ್ರೀತಿಯ ಜೊತೆಯಲಿ

ಏಳ್ಗೆಯಲಿ ಬೆನ್ತಟ್ಟಿದಿರಿ ನಗುನಗುತ ಖುಷಿಯಲಿ

ನೋವಲ್ಲಿ ಹೆಗಲಾದಿರಿ ಪ್ರೀತಿಯ ಹೆಸರಿನಲಿ...


ಎಷ್ಟೊಂದು ಸಿಹಿ ಇತ್ತು ಕಳೆದ ಆ ಕ್ಷಣಗಳಲಿ

ಪ್ರೀತಿಯೊಂದೇ ತುಂಬಿತ್ತು ಎಲ್ಲರ ಹೃದಯಗಳಲಿ

ಬೆಳದಿಂಗಳೂಟವು ಚಂದ್ರನಾ ಜೊತೆಯಲಿ

ಕಣ್ತುಂಬುವಾ ಕ್ಷಣಗಳ ಹೇಗೆ ನಾ ಮರೆಯಲಿ...


ಕಾದಾಟ, ಜಗಳಾಟ, ಸಲಿಗೆಯ ಹೆಸರಿನಲಿ

ಒಮ್ಮೊಮ್ಮೆ ಮುನಿಸುಗಳು, ಪ್ರೀತಿಯ ಸ್ವಾರ್ಥದಲಿ

ಕಳೆಯಿತಾ ಕ್ಷಣಗಳು, ನಾಲ್ಕು ವರ್ಷದಲಿ

ಬದುಕುತಿಹೆವಿಂದು ನೆನಪುಗಳ ನಗುವಲ್ಲಿ....



Rate this content
Log in