STORYMIRROR

Indushree L E

Others

5.0  

Indushree L E

Others

ಒಂಟಿತನವೂ ಸಾವೇ...

ಒಂಟಿತನವೂ ಸಾವೇ...

1 min
23.5K


ನಡುರಾತ್ರಿ ಕತ್ತಲಲಿ ಕೂತು ಯೋಚಿಸುತಿಹೆ

ನಾನೆಲ್ಲೋ ಇರುವೆ ನನ್ನವರನೆಲ್ಲೋ ಕಳೆದಿಹೆ

ಬದುಕಿನ ಪಯಣವಿದು ಸಾಗುತಿದೆ ಹೀಗೆ

ನನ್ನವರಿಲ್ಲದೆ ನನ್ನೊಮ್ಮೆ ಕೂಗಿ ಕರೆಯಲು...


ಮರಗಳೂ ಕೂಡ ನಾನಾರೆಂದು ಕೇಳುತಿವೆ

ಬೀಸುವ ಗಾಳಿಯದು ಬಳಿಬರದೆ ಸಾಗುತಿದೆ

ಚಂದ್ರನೂ ಹೇಳುತಿಹ ನಾನಿಂದು ನಿಲ್ಲೆನೆಂದು

ಚುಕ್ಕಿಗಳು ಮರೆಯಾಗುತಿವೆ ನೋಡಿ ನನ್ನಿಂದು


ಸಾಕಿನ್ನು ಈ ದೂರ ಹೋಗುವೆ ನನ್ನವರಲ್ಲಿಗೆ

ಎಲ್ಲರೂ ನಗುವರೊಮ್ಮೆ ನನ್ನೊಡನೆ ಆಲಿಂಗಿಸೆನ್ನ

ಹೆಗಲ ನೀಡುವರೆಲ್ಲಾ ನನ್ನೆಲ್ಲ ನೋವಿಗೆ

ಸಾವಾದರೂ ಬರಲಿ ಬೇಡೆನಗೀ ಒಂಟಿತನ...



Rate this content
Log in