ಮಾಡಬೇಕಾದುದು...
ಮಾಡಬೇಕಾದುದು...


ಕನಸದುವೆ ಕಂಡಿಹೆನು, ಕಾಣುತ ಬೆಳೆಯುವೆನು
ಮಾಡಬೇಕಾದುದು ಉಳಿದಿದೆ,ಮಾಡಿಯೇ ತೀರುವೆನು
ನಡೆವ ದಾರಿಯಲಿ ಕಲ್ಲು ಮುಳ್ಳು, ಲೆಕ್ಕಿಸದೆ ಸಾಗುವೆನು
ಗಟ್ಟಿಯಾಗಿ ನಿಲ್ಲಲು ಎಲ್ಲವೂ ದೊರೆಯುವುದು...
ಒಂದೆಜ್ಜೆ ಇಟ್ಟಾಗ ಮುಂದಿನದು ಏಕೆನಿಸುವುದು
ಹಿಂದೆ ಸರಿದಾಗ ಆ ದಾರಿಯೇ ಸರಿಯೆನಿಸುವುದು
ಜಗವಿರುವುದಿಂದು ನಮ್ಮ ಉರುಳಿ ಬೀಳಿಸಲು
ಇಟ್ಟೊಂದು ಹೆಜ್ಜೆಯಲಿ ಗಟ್ಟಿಯಾಗಿ ನಿಲ್ಲಬೇಕು...
ಸಾಗಲೇ ಬೇಕೆಂದು ಧೃಡವಾಗಿ ನಿಂತಾಗ
ಎಲ್ಲೋ ಅನಿಸುವುದು ಸೋಲು ಬಂದರೇನೆಂದು
ತಿಳಿಯಲೇಬೇಕಿಂದು ಸೋಲಿನ ಭಯ ಬೇಡೆಂದು
ಮನವರಿಕೆಯಾಗಲಿಂದು ಮಾಡಬೇಕಾದುದೇನೆಂದು...