STORYMIRROR

Indushree L E

Inspirational

3  

Indushree L E

Inspirational

ಸಮಯದ ಜೊತೆಯಲಿ

ಸಮಯದ ಜೊತೆಯಲಿ

1 min
132

ಜಗವಿಂದು ಉದಯಿಸಿತು ಸೂರ್ಯನ ಬೆಳಕಿನಲಿ

ಸಂತಸವು ತುಂಬಿಹುದು ಚಂದ್ರನ ಬೆಳದಿಂಗಳಲಿ

ಕನಸುಗಳು ಹುಟ್ಟಿಹವು ಚಂದ್ರನ ಮಡಿಲಿನಲಿ

ಸಾಕಾರಗೊಳ್ಳುವುದು ಸೂರ್ಯನ ಮಾರ್ಗದರ್ಶನದಲಿ


ವಸಂತವದು ಶುರುವಾಯ್ತು ಚಿಗುರಿನ ಹಸಿರಿನಲಿ

ಸಂಭ್ರಮದ ಆದಿಯದು ಎಲ್ಲರ ಮನೆಗಳಲಿ

ತಂಪಾದ ಗಾಳಿಯದು ಸುಗ್ಗಿಯ ಸಂಭ್ರಮದಲಿ

ಸಂತೃಪ್ತಿ ಎಲ್ಲರಲಿ ಈ ಸೊಗಸ ಅಂತ್ಯದಲಿ


ಮರುಕಳಿಸಿ ಬಂತೊಮ್ಮೆ ನಿಸರ್ಗವು ಜನಿಸಿ

ಧರೆಯಿಂದು ಧನ್ಯಳು ವರುಣನ ಸ್ಪರ್ಷದಲಿ

ಕೃಷಿಯಿಂದು ಶುರುವಾಯ್ತು ಪೈರುಗಳ ಮೊಳಕೆಯಲಿ

ಖುಷಿಯೊಂದು ತುಂಬಿದೆ ರೈತನ ಮೊಗದಲಿ


ನಗುತಲಿವೆ ಹೊಲಗಳು ತುಂಬಿದ ತೆನೆಯಲಿ

ಎಲ್ಲರಲು ಸಂತಸವು ಪೃಥ್ವಿಯ ಮಡಿಲಿನಲಿ

ಸಮಯವದು ಸಾಗುವುದು ನಿಸರ್ಗದ ಜೊತೆಯಲಿ

ಎಲ್ಲರ ಪಯಣವೂ ಸಮಯದ ಜೊತೆಯಲಿ....


Rate this content
Log in

Similar kannada poem from Inspirational