ಮೌನದ ಧ್ವನಿ
ಮೌನದ ಧ್ವನಿ
ಭೂಲೋಕದಲ್ಲೆಲ್ಲ ಹಲ್ಲೆಗಳ ಸಂಚಾರ
ಎಲ್ಲರೂ ಮರೆತಿಹರು ಆಚಾರ-ವಿಚಾರ
ಪೂಜಿಸುತಿದ್ದರಂದು ಹೆಣ್ಣನ್ನು ಮನಸಾರ
ಮಾಡುತಿಹರಿಂದು ಅವಳ ಬಲತ್ಕಾರ...
ಅವಳೇನು ಗಂಡಸರ ಕೈ ಯಂತ್ರವೇ
ನೋವ ನುಂಗುವಳು ಯಾರಿಗೂ ತೋರದೇ
ದುಡಿಯುವಳು ಏನನ್ನೂ ಬಯಸದೇ
ಪ್ರೀತಿಯ ನೀಡುವಳೇನನ್ನು ಆಶಿಸದೇ...
ಎಲ್ಲರನು ಹೊತ್ತಿಹಳು ಪೃಥ್ವಿಯಾಗಿ
ದಣಿವನ್ನು ನೀಗಿಹಳು ಗಂಗೆಯಾಗಿ
ಸಾಕಿನ್ನವಳ ಮೇಲಿನ ಹತ್ಯಾಚಾರ
ಅವಳಿಲ್ಲದೇ ನೀನೆಂದು ನಿರಾಧಾರ...
ಮನತುಂಬಿ ಪ್ರೀತಿಸುವಳು ತಾಯಿಯಾಗಿ
ಎಲ್ಲಸುಖವ ತೊರೆಯುವಳು ಮಡದಿಯಾಗಿ
ಪ್ರೇಮದಲಿ ಸಲಹುವಳು ಅಕ್ಕ-ತಂಗಿಯಾಗಿ
ದುಃಖವನು ಮರೆಸುವಳು ಮಗಳಾಗಿ...
ಅವಳೆಷ್ಟು ಸಹಿಸುವಳು, ಸಾಕಿನ್ನು ಧೋರಣೆ
ಎದ್ದು ನಿಲ್ಲುವಳೊಮ್ಮೆ ಮಹಾಕಾಳಿಯಾಗಿ
ಕೇಳದೇ ಅವಳ ಮೌನದ ಧ್ವನಿಯು
ಆ ಮೌನ ಮುರಿದು ಧ್ವನಿಯಾಗುವಳವಳಿಂದು....
