ವನವಿಹಾರ
ವನವಿಹಾರ
ಹುಣ್ಣಿಮೆಯ ತುಂಬು ರಾತ್ರಿಯಲಿ
ಚಂದ್ರೋದಯದಾ ಸಮಯದಲಿ
ಹಾಲು ಬೆಳದಿಂಗಳು ಎಲ್ಲೆಲ್ಲೂ
ಬೆಳ್ಳನೆ ಬೆಳಕು ದಟ್ಟ ಕಾನನದಲಿ
ನಲಿಯಿತು ಚಕೋರ ಸಂಭ್ರಮದಲಿ
ಅರಳಿದ ಕನ್ನೈದಿಲೆಗಳ ಕಂಪಿನಲಿ
ತಾರೆಗಳ ಕಣ್ಣಂಚಿನ ಮಿಂಚಿನಲಿ
ನವ ಜೋಡಿಗಳು ನಡೆದವು ಅಲ್ಲಿ
ಕೈಕೈ ಹಿಡಿದು ನಲಿಯುತ ಸಂತಸದಲಿ
ಆ ಹುಣ್ಣಿಮೆಯ ಬೆಳದಿಂಗಳಿನಲಿ
ಪ್ರೇಮಗೀತೆಗಳ ಗುಂಗುನಿಸುತಲಿ
ಮೈಮರೆತು ಕುಣಿ ಕುಣಿದಾಡುತಲಿ
ಸಂಭ್ರಮಿಸಿದರು ವನವಿಹಾರದಲಿ
