STORYMIRROR

Prabhakar Tamragouri

Abstract Classics Others

4  

Prabhakar Tamragouri

Abstract Classics Others

ಯಾವ ಗಾಳಿಗೆ ಹೀಗೆ ......?

ಯಾವ ಗಾಳಿಗೆ ಹೀಗೆ ......?

1 min
326


ನಡು ನೆತ್ತಿಯ ಮೇಲೆ 

ಸೂರ್ಯ ಬಿಸಿಲಿತ್ತು 

ಕಾಲಡಿಯಲ್ಲಿ ನೆರಳಿತ್ತು 

ಕಣ್ಣಿಗೆ ಕತ್ತಲು ಕವಿಯಿತು 

ನೀನು ಬಂದ ಹೊತ್ತು 

ಸೂರ್ಯನಿಗಿಂತಲೂ ಪ್ರಖರ 

ನಗು , ಮಾತು , ನೋಟ 

ಕುರುಡಾದೆ , ಕುರುಡಾಗಿ 

ಅನುಸರಿಸಿ ಎದೆ ಕತ್ತಲ ಮಡುವೀಗ 

ಬೆಳಕಿಗೆ ಯಾವ ದಿಕ್ಕು .....?


ಮೋಡವಿರಲಿಲ್ಲ ಮಳೆ ಹನಿಯಲು

ಆಕಾಶ ಸ್ಪಷ್ಟ ನೀಲಿ 

ಛತ್ರ ಹಿಡಿದೇ ಬಂದೆ 

ಗುಡುಗು ಮಿಂಚುಗಳ ಜೊತೆ 

ಕೂಗಿ ಕರೆದದ್ದು ನೆನಪಿಲ್ಲ 

ಬಂದಂಗೆ ಬಂದು ಮಾಯವಾದೆ 

ಬಿಟ್ಟೂ ಬಿಡದ ಮಳೆ 

ಧೋ ಎಂದು ಸುರಿವಾಗ 

ಹನಿ ಹನಿಯೂ ರಕ್ತ 

ಹಳ್ಳ ಕೊಳ್ಳಗಳೆಲ್ಲಾ ಕೆಂಪು ಸಮುದ್ರ 

ಯಾವ ಮಿಂಚಿನ ಸಂಚು ....?


ಭೂಮಿ ಗುಂಡಗಿದೆ

ಇಂದಲ್ಲ ನಾಳೆ ಸೇರಲೇಬೇಕು 

ಬಿದ್ದಲ್ಲಿಗೇ ಬಂದು 

ನೆಟ್ಟ ಮೈಲುಕಲ್ಲಿಗೆ 

ಬಿಟ್ಟ ಬಾಣದ ವೇಗ ತಂದೆ 

ಬ್ರಹ್ಮಾಂಡ ಸುತ್ತಿ ಸೊರಗೊಳ್ಳಬೇಕು

ಕರಗಿಹೋದೆ ಕಣ್ಣ ಮುಂದೆ 

ಕೆಂಪು ಚೆಲ್ಲಿದ ನೆಲದ ಮೇಲೆ 

ಕತೆ ಹೇಳಿವೆ ಕಲ್ಲು , ಮುಳ್ಳು 

ಹೆಸರಿಲ್ಲವೀಗ ಹೂವಿನ ಹಾದಿಗೆ

ಆರಿಹೋಯಿತು ಹಚ್ಚಿಟ್ಟ ಹಣತೆ 

ಯಾವ ಗಾಳಿಗೆ ಹೀಂಗೆ ....?




Rate this content
Log in

Similar kannada poem from Abstract