ಬೇಲಿಯ ಹೂ
ಬೇಲಿಯ ಹೂ
ಕಿರುನಗೆಯೊಂದಿಗೆ ನಸುನಗೆ ಬೀರುತ
ಬಲುಭಾರದ ಮನಸಲ್ಲೂ ಮಂದಹಾಸ
ಬೀರುವ ನಗುವಿನ ಗಣಿ.
ಶಶಿಯ ನಗುವನು ನಾಚಿಸುವ
ಹಸುಗೂಸಿನ ಹುಸಿನಗೆಯ ಮಣಿ.
ತಾನರಳಲು ಯಾರೋಂದಿಗೂ ಮಾಡದದು
ಹಣಾಹಣಿ.
ನೀರುಣಿಸಿದಡೆ ಹಾರವಾಗದು
ಉಣಿಸದಿರ್ದೊಡೆ ಕ್ಷಾರವಾಗದು
ಉತ್ತಮ ವ್ಯಕ್ತಿಯ ಅತ್ಯುತ್ತಮ ವ್ಯಕ್ತಿತ್ವವು
ಸಹಿತ ಬೇಲಿಯ ಜಗಲಿಯ ಮೇಲೆ
ಘಮಿಸಿ ಸದಾ ಸುಮನೀಯುವ
ಬೇಲಿಯ ಹೂವೇ ತಾನೇ....?
