STORYMIRROR

ಹೃದಯ ಸ್ಪರ್ಶಿ

Abstract Inspirational Others

4  

ಹೃದಯ ಸ್ಪರ್ಶಿ

Abstract Inspirational Others

ನಿಲ್ಲದ ಪಯಣ

ನಿಲ್ಲದ ಪಯಣ

1 min
474

ನಿಲ್ಲದ ಪಯಣದಲಿ...


ಅಲೆಮಾರಿ ಜೀವನ

ನಿಲ್ಲದೆ ಸಾಗಿದೆ ಪಯಣ


ಬದುಕಿನ ಹಾದಿಯ ಹಲವಾರು ತಿರುವಿನಲಿ

ಯಾರು ಕೈಬಿಟ್ಟರೇನು.. ಮುಗಿದಿಲ್ಲ ಪಯಣ


ಬಾಡಿಹೋದ ನಿನ್ನೆಯ ನೆನಪಿನ ಹೂಗಳನು

ಮರೆವೆಂಬ ಮೂಟೆಗೆ ತುರುಕಿ

ನಿಲ್ಲದೆ ಸಾಗೋ ಕಾಲದ ಗರ್ಭದೊಳಗೆ ಹುದುಗಿಸಿ

ಮುಂಜಾನೆಯ ಕಿರಣಗಳನ್ನರಸುತ್ತಾ ಮುಂದುವರಿದಿದೆ

ಪಯಣ


ಶುಭ್ರ ಜಲವನ್ನು ಮನದ ಮೂತಿಗೆ ಎರಚಿ

ನಿನ್ನೆಯ ಕೊಳೆಯ ತೊಳೆದು

ಸಜ್ಜಾಗಿ ನಿಂತಿರುವೆ ಬಾಳ ಹಾದಿಯಲಿ

ಹೊಸ ಬೆಳಕನ್ನು ಸ್ವಾಗತಿಸುತ್ತಾ...



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract