Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Nagesh Swamy

Abstract Classics Others

4  

Nagesh Swamy

Abstract Classics Others

ಭರವಸೆ ಇಲ್ಲದ ಬಾಳು

ಭರವಸೆ ಇಲ್ಲದ ಬಾಳು

1 min
353



ಭಾವನೆಗಳು ಬತ್ತಿ ಹೋಗಿವೆ

ಮನಸ್ಸು ಕರಕಲವಾಗಿದೆ ;

ಕನಸುಗಳು ನುಚ್ಚು ನೂರಾಗಿವೆ

ಬದುಕು ಕತ್ತಲಾಗಿದೆ. 


ಸತ್ತು ಹೋಗಿವೆ ಮನಸ್ಸುಗಳು 

ಸತ್ವವಿಲ್ಲದ ಸಂಬಂಧಗಳು; 

ಸ್ವಾರ್ಥದ ಮನೆಯಲ್ಲಿ 

ಏಕಾಂಗಿ ಹೋರಾಟವಿಲ್ಲಿ.

 

ಬೆಳಕಿಲ್ಲದೆ ಬಾಳು ಬರಿದಾಗಿದೆ 

ಎನ್ನುಸಿರು ನಿತ್ರಾಣವಾಗಿದೆ;

ಕಾದುಕಾದು ಕನವರಿಸಿದೆ; ನಾನಿಂದು

ಭರವಸೆಯಿಲ್ಲದ ಬಾಳಿನಲ್ಲಿ ನೊಂದು.


ಬಂದೊಮ್ಮೆ ಕೈಹಿಡಿದು ನಡೆಸೆನ್ನ

ಓ ಕರುಣಾಳು ದೇವನೇ;

ನೀನೆ ನನಗೆಲ್ಲ ನಿನ್ನಿಂದಲೇ ಗೆಲ್ಲುವೆ ಜಗವೆಲ್ಲ;

ದೂಡಬೇಡ ನನ್ನ ಬಾಳು ಕತ್ತಲಲ್ಲೇ.


ಸ್ವಾರ್ಥ ಎಲ್ಲೆಡೆ ಜಗಮಗಿಸಿ ನಗುತಿದೆ.

ಸಾಧನೆಯ ದಾರಿ ಕಾಣದಾಗಿದೆ;

ಬಾ ಬಾ ಬಾನಂಗಳದಿ ಇಳಿದು ಬಾ

ಓ ನನ್ನ ಬೆಳಕೆ ಬಾಳು ಬೆಳಗುವ ಬಾ 




 


Rate this content
Log in

Similar kannada poem from Abstract