ಉದ್ಯಾನವನ
ಉದ್ಯಾನವನ
ಹಸಿರೇ ಉಸಿರಾಗಿರುವ
ಊರ ಉದ್ಯಾನವನ
ಆಬಾಲ ವೃದ್ಢರಿಗಿದು
ನೆಮ್ಮದಿಯ ತಾಣ
ಬೈಗು ಬೆಳಗುಗಳಲ್ಲಿ
ವಾಯು ವಿಹಾರಿಗಳ
ಬಿರುಸಿನ ನಡಿಗೆಯ
ಓಟಗಳ ಅಂಗಣ
ಜಾರುಗುಪ್ಪೆ ಜೋಕಾಲಿ
ಏಣಿ ಏತ ತಿರುಗು ಚಕ್ರ
ಎಳೆಯ ಮಕ್ಕಳ
ಆಟದ ಮೈದಾನ
ತನ್ನೊಳಗೆ ಹುಗುವವರ
ನೋವುಗಳ ಮರೆಸುತ್ತಾ
ಆನಂದಾಮೃತವನೀವ
ಇದು ಸುಂದರತಾಣ
ಮನುಜರ ಮನದ
ಬೇಗೆಯ ಬಗೆಹರಿಸುವ
ಸುಂದರ ಉದ್ಯಾನವನ
ಬೇಕು ಊರು ಕೇರಿಗಳಲ್ಲಿ