STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಅಮಿತ

ಅಮಿತ

1 min
8

ಮನೋಮಯ ಕೋಶದೊಳ ಹೊಕ್ಕು
ಕಲ್ಪನೆಯ ನಾವೆಯನು ಹಿಡಿದು
ಕಲ್ಪನಾ ಲೋಕದಲಿ ವಿಹರಿಸಲು
ಮಿತಿಯ ಬೇಲಿ ಏಕೆ ಬೇಕು?
ಭುವಿ ದಿವಿ ನಕ್ಷತ್ರ ಗ್ರಹಗಳ ಪರಿಧಿಗೆ
ಎತ್ತಲಿಂದ ಎತ್ತಲಿಗೂ ಸಾಗುವ
ಬಿಡಿಗಾಸು ಖರ್ಚಿಲ್ಲದ ಪಯಣಕೆ
ಮಿತಿ ಎನ್ನುವುದು ಇದೆಯೇ?
ಸುಂದರ ಕನಸಿನ ಲೋಕಕೆ
ಯಾರ ಹಂಗೂ ಇರದ
ಕಾಸು ಖರ್ಚಿಲ್ಲದ ಪಯಣಕೆ
ಮಿತಿ ಎನ್ನುವುದು ಉಂಟೇ?
ಅಲ್ಲಿ  ಅರಸರಾಗಬಹುದು
ಮಿನುಗು ತಾರೆಯಾಗಬಹುದು
ಕೋಟ್ಯಾಧಿಪತಿ ಯಾಗಬಹುದು
ಅಮಿತವಾದ ಕಲ್ಪನಾ ಲೋಕದ
ಪಯಣಕ್ಕೆ ಎಲ್ಲೆ ಇಹುದೇ?
ಕಲ್ಪನಾ ಲೋಕದಲ್ಲಿ ಇಲ್ಲ
ಬಡತನದ ಹಂಗು
ಕನಸು ಕಾಣಲು ಕಾಸು ಬೇಕಿಲ್ಲ
ಮಿತಿ ಏಕೆ ಬೇಕು ಕಲ್ಪನೆಗೆ?

ವಿಜಯಭಾರತೀ.ಎ.ಎಸ್.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract